ನವದೆಹಲಿ:ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್​ ಮಾಡಿರುವ ಪ್ರಧಾನಿ, ನನಗೆ ಆಗುತ್ತಿರುವ ನೋವು ಹೇಳಿಕೊಳ್ಳಲು ಪದಗಳು ಸಿಗುತ್ತಿಲ್ಲ ಎಂದಿದ್ದಾರೆ.
ರಾಮ್​ ವಿಲಾಸ್ ಪಾಸ್ವಾನ್​ ನಿಧನದಿಂದ ಉಂಟಾಗಿರುವ ಶೂನ್ಯತೆ ಎಂದಿಗೂ ತುಂಬುವುದಿಲ್ಲ. ನನಗೆ ಇದು ವೈಯಕ್ತಿಕವಾಗಿಯೂ ತುಂಬ ನಷ್ಟ. ನಾನು ಓರ್ವ ಸ್ನೇಹಿತ..ಮೌಲ್ಯಯುತ ಸಹೋದ್ಯೋಗಿ ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ.
ರಾಮ್​ ವಿಲಾಸ್ ಪಾಸ್ವಾನ್​ ಅವರು ಕಠಿಣ ಪರಿಶ್ರಮ ಮತ್ತು ದೃಢ ನಿಲುವುಗಳಿಂದಲೇ ರಾಜಕೀಯದಲ್ಲಿ ಬೆಳೆದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಯುವ ನಾಯಕರಾಗಿದ್ದ ಪಾಸ್ವಾನ್​ ಜೀ..ಅದನ್ನು ಖಡಾಖಂಡಿತವಾಗಿ ವಿರೋಧಿಸಿದ್ದರು. ಅತ್ಯುತ್ತಮ ಸಂಸದ, ಸಚಿವರಾಗಿದ್ದ ಅವರು, ಹಲವು ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ ಎಂದು ಮೋದಿ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.
ಪಾಸ್ವಾನ್​ ಜೀ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಪಾಲಿಗೆ ವಿಭಿನ್ನ ಅನುಭವ. ಕ್ಯಾಬಿನೆಟ್​ ಸಭೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ, ವಿಷಯ ಮಂಡನೆ ಒಳನೋಟದಿಂದ ಕೂಡಿರುತ್ತಿತ್ತು. ಅವರು ನಿಜಕ್ಕೂ ಪ್ರತಿಭಾವಂತರಾಗಿದ್ದರು. ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಸಿಗಲಿ. ಓಂ ಶಾಂತಿ ಎಂದು ಹೇಳಿದ್ದಾರೆ.ಇನ್ನುಳಿದಂತೆ ಬಿಜೆಪಿ ಸರ್ಕಾರದ ಹಲವು ಸಚಿವರು, ಸಂಸದರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + two =
Remember me
