ಮುಂಬೈ:ಹೂಡಿಕೆದಾರರಿಂದ ಭಾರಿ ಲಾಭ ಗಳಿಸಿಕೊಟ್ಟಿರುವ ಈಗ ಲಾಭಾಂಶ (dividend) ನೀಡಲು ಸಜ್ಜಾಗಿದೆ. ಶ್ರೀರಾಮ್ ಫೈನಾನ್ಸ್ ಕಂಪನಿಯ ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ ಈ ಡಿವಿಡೆಂಡ್​ ನೀಡಲಾಗುತ್ತದೆ.
ಶ್ರೀರಾಮ್ ಗ್ರೂಪ್‌ನ ಪ್ರಮುಖ ಕಂಪನಿಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಡಿಸೆಂಬರ್ 31, 2023 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ 1,818.3 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು 2.3% ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ, 1,777 ಕೋಟಿ ರೂ. ನಿವ್ವಳ ಲಾಭವನ್ನು ಕಂಪನಿ ದಾಖಲಿಸಿತ್ತು.
ಈಗ ಈ ಕಂಪನಿಯು ಒಂದು ಷೇರಿಗೆ 10 ರೂಪಾಯಿ ಲಾಭಾಂಶ ನೀಡಲು ಮುಂದಾಗಿದೆ.
ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಮತ್ತೊಮ್ಮೆ ಶ್ರೀರಾಮ್ ಫೈನಾನ್ಸ್ ಡಿವಿಡೆಂಡ್ ಅನ್ನು ಘೋಷಿಸಿದೆ. ಈ ಬಾರಿ ಕಂಪನಿಯು 1 ಷೇರಿನ ಮೇಲೆ 10 ರೂಪಾಯಿ ಲಾಭಾಂಶವನ್ನು ನೀಡಲಿದೆ. ಇದಕ್ಕಾಗಿ ಫೆಬ್ರವರಿ 6, ಮಂಗಳವಾರ ದಿನವನ್ನು ನಿಗದಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಕಂಪನಿಯು 2023 ರಲ್ಲಿ ಹೂಡಿಕೆದಾರರಿಗೆ ಲಾಭಾಂಶವನ್ನು ಮೂರು ಬಾರಿ ನೀಡಿದೆ.ಅರ್ಹ ಹೂಡಿಕೆದಾರರಿಗೆ ಪ್ರತಿ ಷೇರಿಗೆ ರೂ 55 ಡಿವಿಡೆಂಡ್​ ಲಭಿಸಿತ್ತು.. 2022 ರಲ್ಲಿಯೂ ಹೂಡಿಕೆದಾರರಿಗೆ ಲಾಭಾಂಶ ನೀಡಲಾಗಿತ್ತು.
ಈಗ ಈ ಕಂಪನಿಯು ಬರುವ ಜನವರಿ 23 ರಂದು 10 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 10 ರೂಪಾಯಿ ಲಾಭಾಂಶ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ನೀವು ರೂ 1 ಲಕ್ಷ ಹೂಡಿದ್ದರೆ ರೂ 1.95 ಕೋಟಿಗೆ ಏರಿಕೆ: ರೂ. 17ರಿಂದ ರೂ. 3317ಗೆ ಹೆಚ್ಚಳವಾದ ಈ ಷೇರಿಗೆ ಈಗಲೂ ಬೇಡಿಕೆ
ಎಟಿಎಂ ಪೂರೈಸುವ ಕಂಪನಿಯ ರೂ 22 ಬೆಲೆಯ ಷೇರು ಖರೀದಿಗೆ ಒಲವು: ಒಂದೇ ದಿನದಲ್ಲಿ 11% ಹೆಚ್ಚಳ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − eighteen =
Remember me
