ಮಧುರಾ ಭಟ್ಟ, ಬೆಂಗಳೂರು
ಬೆಂಗಳೂರು:ಪರೀಕ್ಷಾ ಸಮಯದಲ್ಲಿ ನಾವು ಮಾಡುವ ಪುನರ್ ಮನನ ಮತ್ತು ಶಾರ್ಟ್ ನೋಟ್ಸ್ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ ಹಾಗಾಗಿ ಈ ಎರಡು ವಿಷಯಗಳ ಕಡೆಗೆ ಹೆಚ್ಚಿನ ಗಮನ ಇರಬೇಕು ಎನ್ನುತ್ತಲೇ ಮಾತು ಆರಂಭಿಸಿದ ಶೃತಿ ಶಿವಾನಂದ ಯರಗಟ್ಟಿ (ಐಪಿಎಸ್)362ನೇ ರ‌್ಯಾಂಕಿಂಗ್ ಪಡೆದದಿದ್ದಾರೆ. ಇವರು ತಮ್ಮ ಯಶಸ್ಸಿನ ಹಾದಿನ ಕುರಿತಾಗಿ ವಿಜಯವಾಣಿ ಜತೆ ಮಾತನಾಡಿದ್ದಾರೆ.
ಬೆಳಗಾವಿ ಮೂಲದವರಾದ ಶೃತಿ ಶಿವಾನಂದ, ಡಾ.ಗಂಗಾಧರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಪಿಯುಸಿ ಹಾಗೂ 7 ಚಿನ್ನದ ಪದಕ ಪಡೆಯುವ ಮೂಲಕ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
6ನೇ ಪ್ರಯತ್ನದಲ್ಲಿ ಯಶಸ್ವಿ:2015ರಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿ, ಒಟ್ಟು 6 ಭಾರಿ ಪರೀಕ್ಷೆಯನ್ನು ತೆಗೆದುಕೊಂಡಿದ್ದ ಇವರು, 2016ರಿಂದ 2020ರವರೆಗೂ ಸತತವಾಗಿ ಪ್ರಯತ್ನಿಸಿ ಸೋತಿದ್ದರು. 2022ರಲ್ಲಿ ಛಲ ಬಿಡದ ತ್ರಿವಿಕ್ರಂನಂತೆ 6ನೇ ಪ್ರಯತ್ನದಲ್ಲಿ ಜಯಗಳಿಸಿ, 362ನೇ ರ‌್ಯಾಂಕ್ ಪಡೆದು ಐಪಿಎಸ್​ ಆಫೀಸರ್ ಆಗಿ ಕರ್ತವ್ಯ ನಿರತರಾಗಿದ್ದಾರೆ.
ಸ್ಪರ್ಧಾಕಾಂಕ್ಷಿಗಳು ನಡೆಸುವ ಪರೀಕ್ಷಾ ತಯಾರಿಯ ಮೇಲೆಯೇ ಸೋಲು-ಗೆಲುವು ನಿಂತಿರುತ್ತದೆ. ಹಾಗಾಗಿ ಪರೀಕ್ಷೆಗೆ ತಯಾರಿ ನಡೆಸುವ ಸಂದರ್ಭದಲ್ಲಿಯೇ ಗಮನವನ್ನು ಬೇರೆಯಲ್ಲಿಯೂ ಹರಿ ಬಿಡದೆ ಗುರಿ ತಲುಪುವಲ್ಲಿಯೇ ಕೇಂದ್ರೀಕರಿಸಬೇಕು. ಪರೀಕ್ಷಾ ತಯಾರಿಯನ್ನು ಓದುವುದರಿಂದ ಪ್ರಾರಂಭಿಸಬೇಕು. ಓದುವಾಗಲೇ ಶಾರ್ಟ್ ನೋಟ್ಸ್ ಮಾಡಿಕೊಳ್ಳುವುದು, ಸಿಲೆಬಸ್ ಪ್ರಕಾರವೇ ವಿಷಯಗಳ ಅಧ್ಯಯನ ನಡೆಸುವುದು, ಹಳೇ ಪ್ರಶ್ನೆ ಪತ್ರಿಕೆ ಬಿಡಿಸುವುದು ಹಾಗೂ ಪುನರ್ ಮನನ ಮಾಡುತ್ತಿರಬೇಕು. ಮುಖ್ಯ ಪರೀಕ್ಷೆಗೆ ಟೆಸ್ಟ್ ಸಿರಿಸ್, ಆನ್ಸ್‌ರ್ ರೈಟಿಂಗ್ ಪ್ರಾಕ್ಟೀಸ್, ಸಾಧ್ಯವಾದರೆ ಗೆಳೆಯರ ಜತೆಗೂಡಿ ವಿಷಯಗಳನ್ನು ಚರ್ಚಿಸಬೇಕು ಎನ್ನುತ್ತಾರೆ ಶೃತಿ ಶಿವಾನಂದ.
ಪರೀಕ್ಷೆ ಬರೆಯುವ ಸಮಯದಲ್ಲಿ ವೇಳಾಪಟ್ಟಿ ಹಾಕಿಕೊಂಡು ಅದನ್ನು ಅನುಸರಿಸುವುದು ಬಹಳ ಮುಖ್ಯ. ನಮ್ಮ ದಿನಚರಿಗೆ ಒಪ್ಪುವಂತಹ ವೇಳಾಪಟ್ಟಿ ತಯಾರಿಸಿಕೊಳ್ಳಬೇಕು. ನನ್ನ ವೇಳಾಪಟ್ಟಿಯ ಪ್ರಕಾರ ದಿನಕ್ಕೆ 10 – 11 ತಾಸು ಓದಲು ಮೀಸಲಿಡುತ್ತಿದ್ದೆ. ದಿನಕ್ಕೆ ಎರಡು ವಿಷಯಗಳಂತೆ ಬೆಳಗ್ಗೆ ಒಂದು ಹಾಗೂ ಮಧ್ಯಹ್ನ ಒಂದು ವಿಷಯ ಓದುತ್ತಿದ್ದೆ. ರಾತ್ರಿ ವೇಳೆಯಲ್ಲಿ ಓದಿದ ವಿಷಗಳ ಪುನರ್ ಮನನ ಮಾಡುತ್ತಿದ್ದೆ. ಅಲ್ಲದೇ ಬೆಳಗ್ಗೆ ಎದ್ದ ಕೂಡಲೇ ಹಾಗೂ ವಾರದಲ್ಲಿ ಒಂದು ದಿನ ಸಂಪೂರ್ಣವಾಗಿ ಪುನರ್‌ಮನನ ಮಾಡಲೇ ನಿಗದಿಪಡಿಸುತ್ತಿದ್ದೆ.
ಟಿಪ್ಸ್* ಪರೀಕ್ಷೆಗೆ ತಯಾರಿ ನಡೆಸುವಾಗ ನಮ್ಮ ಗಮನವೆಲ್ಲ ಓದಿನೆಡೆಗೆ ಇರಬೇಕು* ಪ್ರತಿ ದಿನ ಪತ್ರಿಕೆ ಓದಿ* ಬರೆಯುವುದನ್ನು ಅಭ್ಯಸಿಸಿ* ಸಮಯ ನಿರ್ವಹಣೆ ಕಲಿತುಕೊಳ್ಳಿ* ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳಿ* ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರ ಸಲಹೆ ತೆಗೆದುಕೊಳ್ಳಬೇಕು* ಸೋಲಿಗೆ ಕಾರಣ ಹುಡಿಕಿ ಅದನ್ನು ಸರಿಪಡಿಸಿಕೊಳ್ಳಿ
ಪ್ರಶ್ನೆ ಪತ್ರಿಕೆಯನ್ನು 3 ಹಂತವಾಗಿ ವಿಂಗಡಿಸಿ:ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಾಗಾ ಅದನ್ನು 3 ಹಂತಗಳಾಗಿ ವಿಂಗಡಿಸಿಕೊಳ್ಳಬೇಕು. ಮೊದಲು ಎಲ್ಲ ಪ್ರಶ್ನೆಗಳನ್ನು ಓದುಕೊಂಡು ಆ ಪ್ರಶ್ನೆಗಳಲ್ಲಿ ತಿಳಿದಿರುವುದಕ್ಕೆ ಉತ್ತರಿಸಬೇಕು. ನಂತರ ನಮಗೆ ಅನುಮಾನ ಇರುವ ಪ್ರಶ್ನೆಗಳಿಗೆ ಮಾರ್ಕ್ ಮಾಡಿಕೊಳ್ಳಬೇಕು. ಎರಡನೇ ಹಂತದಲ್ಲಿ ತಿಳಿದಿರದ ಪ್ರಶ್ನೆಗಳಗೆ ಮಾರ್ಕ್ ಮಾಡಿಕೊಳ್ಳಬೇಕು. ಮೂರನೇ ಹಂತದಲ್ಲಿ ಅನುಮಾನವಿರುವ ಪ್ರಶ್ನೆಗಳಿಗೆ ಯೋಚಿಸಿ ಉತ್ತರಿಸಬೇಕು. ಮೇನ್ಸ್ ಬರೆಯುವಾಗಲೂ ನಮಗೆ ಗೊತ್ತಿರುವ ಪ್ರಶ್ನೆಗೆ ಮೊದಲು ಉತ್ತರಿಸಬೇಕು. ಯಾವುದಾದರೂ ಪ್ರಶ್ನೆಗೆ ಉತ್ತರ ತಿಳಿದಿಲ್ಲವೆಂದರೆ ಅದಕ್ಕೆ ತಪ್ಪು ಉತ್ತರ ಬರೆಯಲು ಹೋಗಬಾರದು.
ಸಂದರ್ಶನದಲ್ಲಿ ಡಿಟೇಲ್ ಅಪ್ಲಿಕೇಶನ್ ಮೇಲೆಯೇ ಪ್ರಶ್ನೆ ಕೇಳುತ್ತಾರೆ. ಹಾಗಾಗಿ ಅಲ್ಲಿ ನಮೂದಿಸಿರುವ ಮಾಹಿತಿಗೆ ತಕ್ಕಂತೆ ಅಪ್‌ಡೇಟ್ ಆಗಿರಬೇಕು. ಏನೇ ಕೇಳಿದರೂ ಧೈರ್ಯವಾಗಿ ಉತ್ತರ ನೀಡಬೇಕು. ಗೊತ್ತಿಲ್ಲದ ಪ್ರಶ್ನೆಗಳಿಗೆ ತಿಳಿದಿಲ್ಲವೆಂದೇ ಹೇಳಬೇಕು. ಮೊಕ್ ಇಂರ್ಟವ್ಯೆ ತೆಗೆದುಕೊಂಡು ನಾವು ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಹಾಗೆಯೇ, ಗೆಳೆಯರೊಟ್ಟಿಗೆ ಪ್ರಚಲಿತ ವಿಷಯಗಳ ಕುರಿತು ಚರ್ಚಿಸುವುದರ ಜತೆಗೆ ಆತ್ಮವಿಶ್ವಾಸದಿಂದ ಮಾತನಾಡಲು ರೂಢಿಸಿಕೊಳ್ಳಬೇಕು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 7 =
Remember me
