ಪಟನಾ:ಬಿಹಾರದಲ್ಲಿ ನಿತೀಶ್​ ಕುಮಾರ್​ ಅವರ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚಿಸಿ ಕೆಲವೇ ತಿಂಗಳುಗಳಾಗಿದೆ. ಅದಾಗಲೇ ಸರ್ಕಾರ ಬೀಳಿಸುವ ಯೋಚನೆಯನ್ನು ವಿರೋಧ ಪಕ್ಷದವರು ಮಾಡಲಾರಂಭಿಸಿದ್ದಾರೆ. ಜೆಡಿಯುನ 17 ಶಾಸಕರು ಆರ್​ಜೆಡಿಗತೆ ಬರಲು ಸಿದ್ಧರಿದ್ದಾರೆ ಎಂದು ಆರ್​ಜೆಡಿ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಅಮ್ಮನನ್ನು ಕೊಂದು, ಅಂಗಳದಲ್ಲಿ ಬೆಂಕಿ ಹಚ್ಚಿ ಮಂತ್ರ ಪಠಿಸಿದ ಮಗ! ಕೊಲೆಗೆ ಕಾರಣ ಕೇಳಿ ಶಾಕ್​ ಆದ ಸಹೋದರಿ
ಜೆಡಿಯುನ 17 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಆದರೆ ಅದನ್ನು ತಡೆಯಲೆಂದೇ ಸರ್ಕಾರ ಪಕ್ಷಾಂತದ ನಿಷೇಧ ಕಾನೂನು ಮಾಡಿದೆ. ನಾವು ಕಾನೂನಿಗೆ ಗೌರವಿಸುತ್ತೇವೆ. ಅದಕ್ಕೆಂದೇ ಶಾಸಕರಿಗೆ ಮೊದಲೇ ಹೇಳಿಟ್ಟಿದ್ದೇವೆ. 28 ಜನರು ಒಟ್ಟಾಗಿ ಬಂದಾಗ ನಮ್ಮ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದೇವೆ. ಶೀಘ್ರವೇ ಆ ಸಂಖ್ಯೆ 28 ಆಗಲಿದೆ ಆರ್​ಜೆಡಿ ನಾಯಕ ಶ್ಯಾಮ್ ರಾಜಕ್ ತಿಳಿಸಿದ್ದಾರೆ.
ಇದನ್ನೂ ಓದಿ:ಹಾವೇರಿಯಲ್ಲಿ ಗೆದ್ದು ಬೀಗಿದ ಗಂಡ ಹೆಂಡತಿ!
ಪ್ರಜಾಪ್ರಭುತ್ವದಲ್ಲಿ ನಿತೀಶ್​ ಕುಮಾರ್​ ಬಿಜೆಪಿಯ ಅಡಿಯಾಳಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಿಂದಾಗಿ ಬೇಸರಗೊಂಡಿರುವ ಶಾಸಕರು ನಮ್ಮ ಪಕ್ಷಕ್ಕೆ ಬರಲು ಹಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.ಶ್ಯಾಮ್​ ರಾಜಕ್​ ಅವರ ಈ ಹೇಳಿಕೆಯನ್ನು ಮುಖ್ಯಮಂತ್ರಿ ನಿತೀಶ್​ ಕುಮಾರ್​ ತಳ್ಳಿ ಹಾಕಿದ್ದಾರೆ. ಇದೆಲ್ಲ ಸುಳ್ಳು ಹೇಳಿಕೆಗಳು, ಆ ರೀತಿ ಯಾರೂ ನಮ್ಮ ಪಕ್ಷದಿಂದ ಅವರ ಪಕ್ಷಕ್ಕೆ ಹೋಗಲು ಸಿದ್ಧರಾಗಿಲ್ಲ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಹೆಂಡತಿಯ ಸೀಮಂತಕ್ಕೆ ಸಿದ್ಧತೆ ನಡೆಸುತ್ತಿದ್ದ ಗಂಡ ರಸ್ತೆಯಲ್ಲೇ ಬಲಿಯಾದ! ಮಗನ ಜತೆ ತಾಯಿಯೂ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
