ಚಂಡಿಗಢ್​:ಲಾಕ್​ಡೌನ್​ಅನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಂಜಾಬ್​ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಜತೆಗೆ, ಈ ಅವಧಿಯನ್ನು ಮೇ 16ರವರೆಗೂ ವಿಸ್ತರಿಸಲಾಗಿದೆ. ಮನೆಯಿಂದ ಹೊರಬರಲು ಕೂಡ ಅಲ್ಲಿ ಪಾಸ್​ ಪಡೆಯಲೇಬೇಕು. ಪೊಲೀಸರು ಕೂಡ ಇದನ್ನು ಅಷ್ಟೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಇದರ ನಡುವೆಯೇ ಕಳೆದ ಏಪ್ರಿಲ್​ 12ರ ಬೆಳಗ್ಗೆ ಅಲ್ಲೊಂದು ಅಮಾನವೀಯ ಘಟನೆ ನಡೆದುಹೋಯ್ತು.
ಪಟಿಯಾಲಾದ ತರಕಾರಿ ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಬಂದಿದ್ದ ನಿಹಾಂಗ್​ಗಳಿಗೆ ಪಾಸ್​ ಎಲ್ಲಿ ಎಂದು ಕರ್ತವ್ಯನಿರತ ಎಎಸ್​ಐ ಹರ್ಜಿತ್​ ಸಿಂಗ್​ ಕೇಳಿದ್ದರು. ಇದರಿಂದ ಕೆರಳಿದ ಗುಂಪು ಅವರ ಎಡಗೈಯನ್ನೇ ಕತ್ತರಿಸಿತ್ತು. ಬಳಿಕ ಗುರುದ್ವಾರದಲ್ಲಿ ಅಡಗಿದ್ದವರನ್ನು ಭಾರಿ ಪೊಲೀಸ್​ ಬಂದೋಬಸ್ತ್​ ಬಳಸಿ ಬಂಧಿಸಲಾಗಿತ್ತು.
ಈ ನಡುವೆ, ಎಸ್​ಐ ಹರ್ಜಿತ್​ ಸಿಂಗ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಡಿಗಢ್​ನ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಗೆ ಸೇರಿಸಲಾಗಿತ್ತು. ತುಂಡಾಗಿದ್ದ ಕೈಯನ್ನು ಸತತ ಏಳು ತಾಸುಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಮರುಜೋಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಎಎಸ್​ಐ ಕರ್ತವ್ಯ ನಿಷ್ಠೆ ಶ್ಲಾಘಿಸಿದ್ದ ಇಲಾಖೆ ಹರ್ಜಿತ್​ ಸಿಂಗ್​ ಅವರನ್ನು ಎಸ್​ಐ ಹುದ್ದೆಗೆ ಬಡ್ತಿಗೊಳಿಸಿತ್ತು.
ಸತತ 18 ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಹರ್ಜಿತ್​ ಸಿಂಗ್​ ಗುರುವಾರ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್​ ಆಗಿದ್ದಾರೆ. ಪಟಿಯಾಲಾದಲ್ಲಿ ಪೊಲೀಸ್​ ಇಲಾಖೆ ಹಾಗೂ ಸಾರ್ವಜನಿಕರು ಕೆಂಪುಹಾಸಿನ ಮೇಲೆ ಬರಮಾಡಿಕೊಂಡು ಅವರಿಗೆ ವೀರೋಚಿತ ಸ್ವಾಗತ ನೀಡಿದೆ. ಅಲ್ಲದೇ. ಇದರ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದೆ.
ಇನ್ನೊಂದು ವಿಶೇಷವೆಂದರೆ, ಹರ್ಜಿತ್​ ಸಿಂಗ್​ ಪುತ್ರ ಅರ್ಷ್​ಪ್ರೀತ್​ ಸಿಂಗ್​ಗೆ ಕಾನ್​ಸ್ಟೆಬಲ್​ ಹುದ್ದೆ ನೀಡಲಾಗಿದೆ. ಡಿಜಿಪಿ ದಿನಕರ್​ ಗುಪ್ತಾ ಖುದ್ದಾಗಿ ನೇಮಕಾತಿ ಪತ್ರವನ್ನು ಆಸ್ಪತ್ರೆಯಲ್ಲೇ ಹರ್ಜಿತ್​ ಸಿಂಗ್​ಗೆ ಹಸ್ತಾಂತರಿಸಿದ್ದಾರೆ. ಇದನ್ನು ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಗೌರವ:ಹರ್ಜಿತ್​ ಸಿಂಗ್​ ನೇಮ್​ಪ್ಲೇಟ್​ಅನ್ನು ತಮ್ಮ ಎದೆಯ ಮೇಲೆ ಧರಿಸುವ ಮೂಲಕ ಪಂಜಾಬ್​ ಪೊಲೀಸರು ವಿಶೇಷ ಗೌರವ ಸಲ್ಲಿಸಿದ್ದರು.

Happy to share that SI Harjeet Singh has been discharged from PGI, Chandigarh today. I thank Doctors, Nurses, Paramedics & all the staff of PGI for taking good care of him. Before getting discharged, he was handed over his son's appointment letter with Punjab Police.pic.twitter.com/E2DnnvYIh8
— Capt.Amarinder Singh (@capt_amarinder)April 30, 2020

ಕರೊನಾಗೆ ಭಾರತದಲ್ಲಿಯೇ ಸಿದ್ಧವಾಗಿದೆ ಔಷಧ, ಕ್ಲಿನಿಕಲ್​ ಟ್ರಯಲ್​ಗೆ ಸಿಕ್ತು ಡಿಜಿಸಿಐ ಅನುಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
