ತಿರುಪತಿ:ದೂರು ನೀಡಲು ಬಂದ ಯುವತಿಯ ಮೇಲೆ ಬೆಲ್ಟ್​ನಿಂದ ಹಲ್ಲೆ ಮಾಡಿ, ಅಸಭ್ಯವಾಗಿ ವರ್ತಿಸಿದ ಆರೋಪ ಆಂಧ್ರ ಪ್ರದೇಶದ ತಿರುಪತಿಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ಕೇಳಿಬಂದಿದೆ.
ದೂರಿನ ಪ್ರತಿಯನ್ನೂ ನೋಡದೆ ಯುವತಿಯ ಮೇಲೆ ಎಸ್​ಐ ಹಲ್ಲೆ ಮಾಡಿದ್ದು, ಈ ಸಂಬಂಧ ತನಿಖೆ ನಡೆಸಲು ಹಿರಿಯ ಪೊಲೀಸ್​ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಘಟನೆಯ ವಿವರಣೆಗೆ ಬರುವುದಾದರೆ ತಿರುಪತಿ ಉಪನಗರದ ಉಪ್ಪರಪಲ್ಲೆ ನಿವಾಸಿ ವನಿತಾವಾಣಿ ಹಾಗೂ ನೆರೆಮನೆಯವರ ನಡುವೆ ಯಾವುದೋ ಒಂದು ವಿಚಾರವಾಗಿ ವಾಗ್ವಾದ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬ ವನಿತಾ ಮೇಲೆ ಹಲ್ಲೆ ಮಾಡಿದ್ದ. ಈ ಸಂಬಂಧ ದೂರು ನೀಡಲು ಎಂಆರ್​ ಪಲ್ಲಿ ಪೊಲೀಸ್​ ಠಾಣೆಗೆ ವನಿತಾ ತೆರಳಿದ್ದಳು.
ಇದನ್ನೂ ಓದಿ:ಪತ್ನಿಗೆ ತಾನೇ ಗುಂಡು ಹಾರಿಸಿ ಕಟ್ಟು ಕತೆ ಕಟ್ಟಿದ್ದ ಖತರ್ನಾಕ್​ ಪತಿ ಬಂಧನ..!
ದೂರು ಸ್ವೀಕರಿಸದ ಎಸ್​ಐ, ನನ್ನ ಮೇಲೆ ಬೆಲ್ಟ್​ನಿಂದ ಹಲ್ಲೆ ಮಾಡಿದ್ದಲ್ಲದೆ, ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಯುವತಿ ಆರೋಪಿಸಿ, ಕಣ್ಣೀರಿಟ್ಟಿದ್ದಾಳೆ. ಎಸ್​ಐ ವಿರುದ್ಧ ಕ್ರಮ ಜರುಗಿಸುವಂತೆ ವನಿತಾ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, ಪೊಲೀಸ್​ ವರಿಷ್ಠಾಧಿಕಾರಿ ರಮೇಶ್​ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ.(ಏಜೆನ್ಸೀಸ್​)
ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ, ಮದ್ವೆಯಾಗಿರುವ ಛತ್ತೀಸ್​ಗಢ ಮಹಿಳೆಯ ಹೊಸ ಸಾಹಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
