ನವದೆಹಲಿ:ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇರುವ ಈ ಸಂದರ್ಭದಲ್ಲಿ ಯೋಧರೊಬ್ಬರ ಮರಣಾವಶೇಷ 38 ವರ್ಷಗಳ ಬಳಿಕ ಪತ್ತೆಯಾಗಿದೆ. ಈ ಮೂಲಕ ಹಿಮಪಾತಕ್ಕೆ ಒಳಗಾಗಿದ್ದ ಸೈನಿಕರ ಪೈಕಿ ಇನ್ನೊಬ್ಬರ ಅವಶೇಷ ಹಾಗೂ ಗುರುತು ಪತ್ತೆ ಆದಂತಾಗಿದೆ.
ಸಿಯಾಚಿನ್ ಹೀರೋ ಲ್ಯಾನ್ಸ್​ ನಾಯ್ಕ್​ ಚಂದ್ರಶೇಖರ್ ಅವರು ಅಸ್ಥಿಪಂಜರದ ಭಾಗಗಳು ಆ. 13ರಂದು ಸಿಯಾಚಿನ್​ನ 16,000 ಅಡಿ ಆಳದಲ್ಲಿ ಸಿಕ್ಕಿವೆ. ಇವರ ಪತ್ನಿಗೆ ಈಗ 65 ವರ್ಷವಾಗಿದ್ದು, ಇವರೊಂದಿಗೆ ಇಬ್ಬರು ಪುತ್ರಿಯರು 38 ವರ್ಷಗಳ ಬಳಿಕ ಇವರ ಮರಣಾವಶೇಷವನ್ನಾದರೂ ಪಡೆಯುವಂತಾಗಿದೆ. ಚಂದ್ರಶೇಖರ್​ 1984ರಲ್ಲಿ ಸಿಯಾಚಿನ್​ನಲ್ಲಿ ನಡೆದ ಆಪರೇಷನ್ ಮೇಘದೂತ್​ನಲ್ಲಿ ಪಾಲ್ಗೊಂಡಿದ್ದರು.
ಪಾಕಿಸ್ತಾನ ಕಣ್ಣಿಟ್ಟಿದ್ದ ಪಾಯಿಂಟ್ 5965 ವಶದಲ್ಲಿರಿಸಿಕೊಳ್ಳುವ ಕಾರ್ಯಾಚರಣೆಯಲ್ಲಿದ್ದ ತಂಡದಲ್ಲಿ ಚಂದ್ರಶೇಖರ್ ಇದ್ದರು. ಇವರಿದ್ದ 19 ಕುಮಾವೊನ್ ರೆಜಿಮೆಂಟ್ 1984ರ ಮೇ 29ರಂದು ಸಿಯಾಚಿನ್ ಗ್ಲೇಸಿಯರ್​ನಲ್ಲಿ ನಡೆದ ಆಪರೇಷನ್​ ಮೇಘದೂತ್​ನಲ್ಲಿ ಪಾಲ್ಗೊಂಡಿತ್ತು. ಆದರೆ ಅಂದು ಒಬ್ಬ ಅಧಿಕಾರಿ ಸೇರಿದಂತೆ 18 ಮಂದಿ ಯೋಧರು ಹಿಮಪಾತಕ್ಕೆ ಸಿಲುಕಿದ್ದು, ಆ ಪೈಕಿ 14 ಮಂದಿಯ ಪತ್ತೆಯಾಗಿತ್ತು. ಉಳಿದವರ ಸುಳಿವು ಕೂಡ ಸಿಕ್ಕಿರಲಿಲ್ಲ. ಆದರೆ ಆಗಸ್ಟ್ 13ರಂದು ಸೈನಿಕರಿಗೆ ಅದೃಷ್ಟವಶಾತ್​ ಲ್ಯಾನ್ಸ್​ ನಾಯ್ಕ್ ಅಸ್ತಿಪಂಜರದ ಅವಶೇಷಗಳು ಸಿಕ್ಕಿವೆ. ಇದರೊಂದಿಗೆ ಸೇನೆಯ ಸಂಖ್ಯೆ ಇರುವ ಡಿಸ್ಕ್ ಕೂಡ ಸಿಕ್ಕಿದ್ದರಿಂದು ಅದು ಲ್ಯಾನ್ಸ್​ ನಾಯ್ಕ್​ ಚಂದ್ರಶೇಖರ್ ಮರಣಾವಶೇಷ ಎಂಬುದನ್ನು ಗುರುತು ಹಿಡಿಯಲಾಗಿದೆ.
ಹಿಮ ಕರಗಲಾರಂಭಿಸಿದಾಗ ನಾಪತ್ತೆಯಾದ ಯೋಧರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತದೆ. ಅಂಥದ್ದೇ ಕಾರ್ಯಾಚರಣೆಯಲ್ಲಿ ಸಿಯಾಚಿನ್​ ಗ್ಲೇಷಿಯರ್​ನ ಹಳೇ ಬಂಕರ್​ನಲ್ಲಿ ಈ ಮರಣಾವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ದುರಂತ ಸಂಭವಿಸಿದ್ದಾಗ ಲ್ಯಾನ್ಸ್ ನಾಯ್ಕ್ ಚಂದ್ರೇಶೇಖರ್ ಅವರ ಮೊದಲ ಪುತ್ರಿಗೆ 8 ಹಾಗೂ ಎರಡನೇ ಪುತ್ರಿ ನಾಲ್ಕು ವರ್ಷಗಳಾಗಿದ್ದವು. ಈಗ 38 ವರ್ಷಗಳ ಬಳಿಕ ಅವರು ತಮ್ಮ ತಂದೆಯನ್ನು ಈ ರೀತಿ ನೋಡುವಂತಾಗಿದೆ. ಈ ಮರಣಾವಶೇಷಗಳನ್ನು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದು, ಅಲ್ಲಿಯೇ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ.
ಚಾಮರಾಜಪೇಟೆ ಮೈದಾನ: ಆ.15ರಂದಷ್ಟೇ ಅಲ್ಲ, ಜ.26ರಂದೂ ನಡೆಯಲಿದೆ ಧ್ವಜಾರೋಹಣ..
‘ನನ್ನನ್ಯಾರೋ ಕೊಲೆ ಮಾಡ್ತಾರೆ’ ಎಂದು ಪೊಲೀಸರಿಗೆ ಆಗಾಗ ಕರೆ ಮಾಡ್ತಿದ್ದ ಮಹಿಳೆಯ ಕೊಲೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 9 =
Remember me
