ಮುಂಬೈ:ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ, ಅಲ್ಲಿವರೆಗೂ ಮೋಸ ಹೋಗುವವರು ಇರುತ್ತಾರೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಸೈಬರ್​ ಕ್ರೈಂ ಪ್ರಕರಣಗಳೇ ಪ್ರಮುಖ ಸಾಕ್ಷಿಯಾಗಿದೆ. ಮುಗ್ದ ಜನರ ನಂಬಿಕೆಗಳನ್ನೇ ಸೈಬರ್ ಖದೀಮರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದೀಗ ಬಾಲಿವುಡ್​ನ ದಿ ಮೋಸ್ಟ್​ ಕ್ಯೂಟೆಸ್ಟ್​ ಕಪಲ್ ಎಂದೇ ಖ್ಯಾತಿ ಪಡೆದಿರುವ ಕಿಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ ಅವರನ್ನು ದೂರ ಮಾಡುವುದಾಗಿ ನಂಬಿಸಿ ಸೈಬರ್​ ಖದೀಮರು ಅಭಿಮಾನಿಯೊಬ್ಬರಿಂದ 50 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೆಂಡ್​ ಆಗುತ್ತಿದೆ.
ಇತ್ತೀಚಿನ ಸಿನಿಮಾ ನಟರ ಮೇಲಿನ ಕ್ರೇಜ್​ಗೆ ಜನ ಇಲ್ಲಸಲ್ಲದ ಕೆಲಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಿದ್ದು, ಅದೇ ರೀತಿ ಇಲ್ಲೊಬ್ಬ ಮಹಿಳೆ ಸಿದ್ಧಾರ್ಥ್​ ಮೇಲಿನ ಅಭಿಮಾನಕ್ಕೆ ಕಿಯಾರಾ ಅಡ್ವಾನಿ ಮೇಲೆ ಸರಣಿ ಆರೋಪಗಳನ್ನು ಮಾಡಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಅಮೆರಿಕದಲ್ಲಿ ವಾಸವಿರುವ ಭಾರತೀಯ ಮಹಿಳೆ ಮೀನು ವಾಸುದೇವನ್​ ಸಿದ್ಧಾರ್ಥ್​ಗೆ ಕಿಯಾರಾ ಮಾಟ ಮಾಡಿಸಿದ್ದಾಳೆ, ನಾವು ಕಿಯಾರಾ ಇಂದ ಸಿದ್ಧಾರ್ಥ್ ಅನ್ನು ರಕ್ಷಿಸಬೇಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಲಿಜಾ ಸಿದ್ ಲವರ್ ಎಂಬುವವರನ್ನು ಸಂಪರ್ಕಿಸಿದ್ದರಂತೆ. ಬಳಿಕ ಆ ವ್ಯಕ್ತಿಯ ಬಳಿ ತನ್ನ ನೋವನ್ನು ತೋಡಿಕೊಂಡಿರುವ ಮಹಿಳೆ ಸಿದ್ಧಾರ್ಥ್​​ ಮಲ್ಹೋತ್ರಾರನ್ನು ಕಾಪಾಡಲು ಸಾಮಾಜಿಕ ಜಾಲತಾಣದ ಮೂಲಕವೇ ಪ್ಲಾನ್​ ಒಂದನ್ನು ಹಾಕಿದ್ದಾರೆ. ಆದರೆ, ಅಲಿಜಾ ಎಂಬ ವ್ಯಕ್ತಿಯು ಆನ್​ಲೈನ್​ ಖದೀಮ ಎಂಬ ವಿಚಾರ ಮೀನು ವಾಸುದೇವನ್​ಗೆ ತಿಳಿದಿರಲಿಲ್ಲ.
ದಿನಕಳೆದಂತೆ ಅಲಿಜಾ ಎಂಬ ಹೆಸರಿನ ಖದೀಮ ದಿನ ಕಳೆದಂತೆ  ಸಿದ್​ ಹಾಗೂ ಕಿಯಾರಾ ಮನೆಯಲ್ಲಿ ಕೆಲಸ ಮಾಡುವವರು, ಆಪ್ತರು ಎಂದೆಲ್ಲ ಪರಿಚಯಿಸಿ, ಇನ್ನು ಮುಂದೆ ಕಿಯಾರಾ ಏನು ಮಾಡುತ್ತಾಳೆ ಅದೆಲ್ಲದರ ಮೇಲೆ ನಾವು ಕಣ್ಣಿಡೋಣ ಎಂದೆಲ್ಲ ನಂಬಿಸಿ ನಕಲಿ ವ್ಯಕ್ತಿಗಳನ್ನು ಪರಿಚಯಿಸಿ ಹಣ ಪಡೆದಿದ್ದಾನೆ. ದಿನ ಕಳೆದಂತೆ ಮೀನು ಅಲಿಜಾ ಪರಿಚಯಿಸಿದ ನಕಲಿ ವ್ಯಕ್ತಿಗಳಿಗೆ ಹಣ ಕಳಿಸಲು ಶುರು ಮಾಡಿದ್ದು, 50 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ.
ಮೀನು ವಾಸುದೇವನ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್​ ನೋಡುವುದಾದರೆ  ಕಿಯಾರಾ ಅತ್ಯಂತ ಕೆಟ್ಟ ಮಹಿಳೆ. ಆಕೆ ಸಿದ್ಧಾರ್ಥ್ ಮೇಲೆ ಮೋಡಿ ಆತನನ್ನು ಮದುವೆಯಾಗಿದ್ದಾಳೆ, ಸಿದ್ಧಾರ್ಥ್ ಮೇಲೆ ಕಿಯಾರಾ ಮಾಟ ಮಾಡಿದ್ದು, ಸಿದ್ಧಾರ್ಥ್​ರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಕಿಯಾರಾಗೆ ರಾಮ್ ಚರಣ್ ಸೇರಿದಂತೆ ಚಿತ್ರರಂಗದ ಎಲ್ಲರೊಟ್ಟಿಗೆ ಸಂಪರ್ಕವಿದೆ. ಧರ್ಮ ಪ್ರೊಡಕ್ಷನ್​ನ ಬೇಸ್​ಮೆಂಟ್​ನಲ್ಲಿ ಕಿಯಾರಾ, ಕರಣ್ ಜೋಹರ್, ಮನೀಷ್ ಮಲ್ಹೋತ್ರಾ ಇನ್ನಿತರೆ ವ್ಯಕ್ತಿಗಳು ಸಿದ್ಧಾರ್ಥ್ ಮೇಲೆ ಮಾಟ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸಂತ್ರಸ್ತರ ಮುಗ್ದತೆಯನ್ನು ಲಾಭ ಪಡೆದ ಸೈಬರ್​ ಖದೀಮರು, ಧರ್ಮ ಪ್ರೊಡಕ್ಷನ್​ನ ಬೇಸ್​ಮೆಂಟ್​ನಲ್ಲಿ ನಡೆದಿದೆ ಎಂದು ಹೇಳಿ ಕೆಲವು ಮಾಟ ಮಂತ್ರಗಳ ಚಿತ್ರ, ವಿಡಿಯೋಗಳನ್ನೆಲ್ಲ ಕಳಿಸಿದ್ದಾರೆ. ಇದನ್ನೆಲ್ಲ ನೋಡಿ ಮೀನೂ ಇನ್ನಷ್ಟು ಗಾಬರಿಯಾಗಿದ್ದಾಳೆ. ಕಿಯಾರಾ ಮತ್ತೊಮ್ಮೆ ಸಿದ್ಧಾರ್ಥ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ ಅದನ್ನು ಹೇಗಾದರೂ ಮಾಡಿ ತಪ್ಪಿಸಬೇಕು. ನಾವು ಕಾಸ್ಟಿಂಗ್ ಡೈರೆಕ್ಟರ್​ಗೆ ಹತ್ತು ಲಕ್ಷ ಲಂಚ ಕೊಟ್ಟು ಕಿಯಾರಾ-ಸಿದ್ಧಾರ್ಥ್ ಒಟ್ಟಿಗೆ ನಟಿಸದಂತೆ ಮಾಡೋಣ ಎಂದೆಲ್ಲ ಮಾತನಾಡಿಕೊಂಡಿದ್ದಾರೆ.
ಮೀನು ಸುಮಾರು 100ಕ್ಕೂ ಹೆಚ್ಚು ಸ್ಕ್ರೀನ್ ಶಾಟ್, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈಗಲೂ ಸಹ ಸಿದ್​ಗೆ ಕಿಯಾರಾ ಮಾಟ ಮಾಡಿದ್ದನ್ನು ನಂಬಿಕೊಂಡೇ ಇದ್ದಾರೆ. ಆದರೆ ಅಲಿಜಾ ಮತ್ತು ಇತರರು ತಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಟ ಸಿದ್ಧಾರ್ಥ್​ ಹಾಗೂ ಕಿಯಾರಾ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಮತ್ತು ದೂರು ನೀಡಲಿದ್ದಾರ ಎಂದು ಕಾದು ನೋಡಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
