ಪಂಜಾಬ್:ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮನೆಯಲ್ಲಿ ಮತ್ತೊಮ್ಮೆ ಸಂತೋಷದ ವಾತವರಣ ನಿರ್ಮಾಣವಾಗಲಿದೆ. ಹೌದು, ಸಿಧು ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಗರ್ಭಿಣಿ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಚರಣ್ ಕೌರ್ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಬಲ್ಕೌರ್ ಸಿಂಗ್ ಮತ್ತು ಚರಣ್ ಕೌರ್ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ತಂತ್ರದ ಮೂಲಕ ಮತ್ತೆ ಪೋಷಕರಾಗಲಿದ್ದಾರೆ.

A post shared by Viral Bhayani (@viralbhayani)
ಸಿದ್ದು ಮೂಸೆವಾಲ ಅವರ ತಂದೆ ತಾಯಿಗೆ ಒಬ್ಬನೇ ಮಗ. ಇದುವರೆಗೂ ಸಿದ್ದು ಮೂಸೆವಾಲ ಪೋಷಕರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಚರಣ್ ಕೌರ್ ಸುಮಾರು ಆರು ತಿಂಗಳ ಕಾಲ ಸಾರ್ವಜನಿಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಊಹಾಪೋಹಗಳಿವೆ. ಶೀಘ್ರದಲ್ಲೇ ಹೆರಿಗೆಯಾಗುವ ನಿರೀಕ್ಷೆಯಿದೆ ಎಂದು ಕುಟುಂಬದ ನಿಕಟ ಮೂಲಗಳು ತಿಳಿಸಿವೆ.
ಖ್ಯಾತ ಗಾಯಕ ಮೂಸೆವಾಲಾ ಅವರು 2022 ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಾನ್ಸಾದಿಂದ ಸ್ಪರ್ಧಿಸಿದ್ದರು. ಆದರೆ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಅದೇ ವರ್ಷ ಮೇ 29 ರಂದು ಗಾಯಕನನ್ನು ಕೊಲೆ ಮಾಡಲಾಯಿತು.
ಪಂಜಾಬ್‌ನ ಶ್ರೀಮಂತ ಗಾಯಕರಲ್ಲಿ ಒಬ್ಬರಾದ ಸಿಧು ಮೂಸೆವಾಲಾ ತಮ್ಮ ಹಾಡುಗಳಿಗಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ನಿಧನ ಎಲ್ಲರಿಗೂ ಶಾಕ್ ಉಂಟು ಮಾಡಿತ್ತು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಅವರ ಸಾವಿನ ನಂತರವೂ ಹಲವು ಹಾಡುಗಳು ಬಿಡುಗಡೆಯಾಗಿ ದೊಡ್ಡ ಹಿಟ್ ಆದವು.
ಇತ್ತೀಚಿನ ದಿನಗಳಲ್ಲಿ ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಬಟಿಂಡಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹವೂ ಇದೆ. ಇತ್ತೀಚೆಗೆ, ಚರಣ್ ಕೌರ್ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸುವ ರೈತರಿಗೆ ಬೆಂಬಲ ನೀಡಿದ್ದರು. ಖಾನೌರಿ ಗಡಿಯಲ್ಲಿ ಹತ್ಯೆಗೀಡಾದ ರೈತ ಶುಭಕರನ್ ಸಿಂಗ್‌ಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ ಅವರು, ಸಿಧು ಮೂಸೆವಾಲಾ, ದೀಪ್ ಸಿಧು ಮತ್ತು ಶುಭಕರನ್ ಸಿಂಗ್ ಅವರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
