ಚಂಡೀಗಡ:ಪಂಜಾಬ್​​ ಕಾಂಗ್ರೆಸ್​​ನಲ್ಲಿ ತಳಮಳ ಮೂಡಿಸಿದ್ದ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ರಾಜೀನಾಮೆ ಪ್ರಸಂಗಕ್ಕೆ ಅಂತೂ ತೆರೆಬಿದ್ದಿದೆ. ತಾವು ಪಂಜಾಬ್​​ ಪ್ರದೇಶ್​ ಕಾಂಗ್ರೆಸ್​ ಕಮಿಟಿ(ಪಿಪಿಸಿಸಿ) ಅಧ್ಯಕ್ಷಗಿರಿಗೆ ಸೆಪ್ಟೆಂಬರ್​ ಅಂತ್ಯದಲ್ಲಿ ಸಲ್ಲಿಸಿದ್ದ ರಾಜೀನಾಮೆಯನ್ನು ವಾಪಸ್​ ಪಡೆದಿರುವುದಾಗಿ ಅವರು ಘೋಷಿಸಿದ್ದಾರೆ.
ಇಂದು(ನ.5) ಚಂಡೀಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಸಂಗತಿ ತಿಳಿಸಿದ ಸಿಧು, ರಾಜ್ಯಕ್ಕೆ ಹೊಸ ಅಟೋರ್ನಿ ಜನರಲ್​ರ ನೇಮಕವಾದ ನಂತರ ತಾವು ಮತ್ತೆ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. “ಇದು ವೈಯಕ್ತಿಕ ಅಹಂಕಾರದ ವಿಷಯವಾಗಿರಲಿಲ್ಲ, ಬದಲಿಗೆ ಪ್ರತಿಯೊಬ್ಬ ಪಂಜಾಬಿಯ ಹಿತಾಸಕ್ತಿಯಾಗಿತ್ತು” ಎಂದವರು ಹೇಳಿದ್ದಾರೆ.
ಇದನ್ನೂ ಓದಿ:ಹಾನಗಲ್​​ ಗೆಲುವು 2023ರ ಗೆಲುವಿನ ಪ್ರಾರಂಭ ಎಂದ ಡಿಕೆಶಿ
ಪಂಜಾಬ್​ ಅಡ್ವೊಕೇಟ್​ ಜನರಲ್​ ಆಗಿ ಅಮರ್​ ಪ್ರೀತ್​ ಸಿಂಗ್​ ಡಿಯೋಲ್​ ಅವರನ್ನು ನೇಮಕ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಧು, ಕೆಲವು ರಾಜಕಾರಣಿಗಳ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡುತ್ತಾ ಬಂದಿರುವವರಿಗೆ ರಾಜ್ಯವನ್ನು ರಕ್ಷಿಸುವ ಸ್ಥಾನ ನೀಡಲಾಗುತ್ತಿದೆ ಎಂದು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು.(ಏಜೆನ್ಸೀಸ್)
ವೈಟ್​ಹೌಸ್​ನಲ್ಲೂ ಬೆಳಗಿದ ದೀಪ! ಹಬ್ಬಕ್ಕೆ ಶುಭ ಕೋರಿದ ಅಮೆರಿಕ ಅಧ್ಯಕ್ಷ

ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ! ಹಾಡುಹಗಲೇ ಕಿಡ್ನಾಪ್​ ಯತ್ನಕ್ಕೆ ಬೆದರಿದ ಗ್ರಾಮಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 9 =
Remember me
