ಹೈದರಾಬಾದ್​:ಇಂದು ನಸುಕಿನ ಜಾವ ಹೈದರಾಬಾದ್​ನ ವಿಪ್ರೋ ಸರ್ಕಲ್​ ಬಳಿ ಟಿಪ್ಪರ್​ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟೆಕ್​ ಮಹೀಂದ್ರಾ ಕಂಪನಿಯ ಉದ್ಯೋಗಿ ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟಿದ್ದಾರೆ.
ನಸುಕಿನ ಜಾವ 3 ಗಂಟೆ ಸುಮಾರಿಗೆ ಸ್ವಿಫ್ಟ್​ ಕಾರು ಹೈದರಾಬಾದ್​ನ ಐಐಐಟಿಯಿಂದ ಬರುತ್ತಿತ್ತು. ಗಚಿಬೌಲಿ ಕಡೆ ತೆರಳುವಾಗ ವಿಪ್ರೋ ಸರ್ಕಲ್​ ಬಳಿಯಿರುವ ಸಿಗ್ನಲ್​ನಲ್ಲಿ ಕೆಂಪು ಬಣ್ಣದ ಎಚ್ಚರಿಕೆ ಸೂಚನೆಯಿದ್ದರೂ ಸಿಗ್ನಲ್​ ಕ್ರಾಸ್​ ಮಾಡುವಾಗ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಅದೇ ಸಮಯದಲ್ಲಿ ಕೊಕಪೇಟೆಯಿಂದ ಐಐಐಟಿ ಕಡೆಗೆ ಬರುತ್ತಿದ್ದ ಟಿಪ್ಪರ್​ ಲಾರಿ, ಕಾರಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ಬಸ್​ನಿಂದ ಹೊರ ಜಿಗಿದ ಓರ್ವ ಯುವಕ, ಇಬ್ಬರು ಯುವತಿಯರು
ಪೊಲೀಸ್​ ಮೂಲಗಳ ಪ್ರಕಾರ ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಮೃತರನ್ನು ಕಾತ್ರಗಡ್ಡ ಸಂತೋಷ್​ (25), ಟೆಕ್​ ಮಹೀಂದ್ರಾ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್ ಆಗಿರುವ ಕೊಲ್ಲೂರು ಪವನ್​ ಕುಮಾರ್​ (24), ಚಿಂತ ಮನೋಹರ್​ (23), ಪಪ್ಪು ಭಾರಧ್ವಜ್​ (20) ಮತ್ತು ನಾಗಿಸೆಟ್ಟಿ ರೋಶನ್​ (23) ಎಂದು ಗುರುತಿಸಲಾಗಿದೆ.
ಘಟನಾ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​​)​
(ವಿಡಿಯೋ ಕೃಪೆ: ನ್ಯೂಸ್​ ಮೀಟರ್​)
#Hyderabad– At 02.48 AM an accident took place at Wipro circle. A Maruthi swift car going from iiit to Gawlidoddi side at Wipro circle while taking right turn has jumped red signal. During that a tipper vehicle coming from Kokapet towards iiit side has hit to swift car.Five dead.pic.twitter.com/BvoJMUnnHT
— NewsMeter (@NewsMeter_In)December 13, 2020

VIDEO| ಬಾಲ್​ ನೋಡದೆ ಸಿಕ್ಸರ್​ ಸಿಡಿಸಿದ ಫ್ಲೆಚರ್: ವೈರಲ್​​ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
