ನವದೆಹಲಿ:ಆರಂಭಿಕ ಹಂತದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿರುವ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ (ಮಾನವರ ಮೇಲೆ ಪ್ರಯೋಗ) ಭಾರತದಲ್ಲೂ ಆರಂಭವಾಗಲಿದೆ.
ಇದಕ್ಕಾಗಿ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಭಾರತೀಯ ಔಷಧ ಮಹಾನಿಯಂತ್ರಕರ (ಡಿಜಿಸಿಐ) ಒಪ್ಪಿಗೆ ಪಡೆಯಲಿದೆ.ಜತೆಗೆ ಉತ್ಪಾದನೆಯನ್ನೂ ಆರಂಭಿಸಲಿದೆ. ಏಕೆಂದರೆ ಸಿರಂ ಇನ್​ಸ್ಟಿಟ್ಯೂಟ್​ ಈಗಾಗಲೇ ಸಂಸ್ಥೆಯು ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬ್ರಿಟನ್ನಿನ ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಉತ್ಪಾದನೆ ಒಪ್ಪಂದ ಮಾಡಿಕೊಂಡಿದೆ.
ಇನ್ನೊಂದು ವಾರದಲ್ಲಿ ಡಿಜಿಸಿಎ ಪರವಾನಗಿ ಪಡೆದುಕೊಳ್ಳಲಾಗುತ್ತದೆ. ಇದಾಗುತ್ತಿದ್ದಂತೆ ಕ್ಲಿನಿಕಲ್​ ಟ್ರಯಲ್​ ಆರಂಭವಾಗಲಿದೆ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯ ನಿರ್ವಹಣಾಧಿಕಾರಿ ಆದಾರ್​ ಪೂನಾವಾಲಾ ಹೇಳಿದ್ದಾರೆ.
ಇದನ್ನೂ ಓದಿ;ರಾಜ್ಯದಲ್ಲಿ ಹಿಡಿತಕ್ಕೆ ಸಿಗುತ್ತಿದೆಯೇ ಕರೊನಾ? ನಿನ್ನೆಗಿಂತ ಒಂದೇ ಪ್ರಕರಣ ಹೆಚ್ಚು…!
ಆಕ್ಸ್​ಫರ್ಡ್​ ಲಸಿಕೆ ಕರೊನಾ ರೋಗಿಗಳಲ್ಲಿ ಪ್ರತಿರೋಧಕ ಶಕ್ತಿ ಸೃಷ್ಟಿಸುತ್ತಿದೆ ಹಾಗೂ ಇದು ಮಾನವರ ಬಳಕೆಗೆ ಸುರಕ್ಷಿತವಾಗಿದೆ ಎಂದು ಫಲಿತಾಂಶದಲ್ಲಿ ಗೊತ್ತಾಗಿದೆ. ಸಾವಿರಾರು ಜನರನ್ನು ಒಳಗೊಂಡ ಇದರ ಮೂರನೇ ಹಂತದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತಕ್ಕೇನು ಲಾಭ: ಆಸ್ಟ್ರಾ ಜೆನೆಕಾ ಕಂಪನಿಯೊಂದಿಗೆ ಸಿರಂ ಇನ್​ಸ್ಟಿಟ್ಯೂಟ್​ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ. ಇದರಂತೆ ವರ್ಷದ ಕೊನೆವರೆಗೆ ಆರು ಕೋಟಿ ಡೋಸ್​ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ. ಮುಂದಿನ ಒಂದು ವರ್ಷದಲ್ಲಿ ಇದರ ಪ್ರಮಾಣ 100 ಕೋಟಿ ಡೋಸ್​ ಉತ್ಪಾದನೆ ಗುರಿ ಹೊಂದಲಾಗಿದೆ.
ಇದನ್ನೂ ಓದಿ;ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಫಲಿತಾಂಶ ಪ್ರಕಟ; ಹೊಸ ಭರವಸೆ ಮೂಡಿದ್ದೇಕೆ?
ಒಪ್ಪಂದದನ್ವಯ ಆರು ಕೋಟಿ ಡೋಸ್​ನಲ್ಲಿ ಕನಿಷ್ಠ 20-30 ಲಕ್ಷ ಡೋಸ್​ ಭಾರತದ ಬಳಕೆಗೆ ಸಿಗಲಿದೆ. ಹೀಗಾಗಿ ಆಕ್ಸ್​ಫರ್ಡ್​ ಲಸಿಕೆ ಯಶಸ್ವಿಯಾದಲ್ಲಿ ಬ್ರಿಟನ್​ ಜತೆಗೆ ಭಾರತಕ್ಕೂ ಲಸಿಕೆ ಏಕಕಾಲದಲ್ಲಿ ಅಲಬ್ಯವಾಗಲಿದೆ.
ಇದಲ್ಲದೇ ಜಾಗತಿಕವಾಗಿ ಲಸಿಕೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇತರ ನಾಲ್ಕು ಕಂಪನಿಗಳು ಕೂಡ ಭಾರತದ ವಿವಿಧ ಔಷಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇದಲ್ಲದೇ, ದೇಶೀಯ ಕಂಪನಿ ಭಾರತ್​ ಬಯೋಟೆಕ್​, ಜೈಡಸ್​ ಕ್ಯಾಡಿಲ್ಲಾ ಸೇರಿ ಭಾರತದಲ್ಲಿಯೇ ಏಳು ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ.
ಈ ರಾಸಾಯನಿಕವಿರುವ ಹ್ಯಾಂಡ್​ ಸ್ಯಾನಿಟೈಸರ್​ ಬಳಸದಿರಿ…! ಎಚ್ಚರ ಜೀವಕ್ಕೆ ಅಪಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
