ತೆಲಂಗಾಣ:ನೋಡುಗರಿಗೆ ಎದೆ ಝಲ್ ಎನಿಸುವ ಸಿಸಿಟಿವಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ ಮಹಿಳೆಯೋರ್ವಳನ್ನು ರೈಲ್ವೆ ಪೊಲೀಸ್ ಅಧಿಕಾರಿ ರಕ್ಷಿಸಿರುವ ಘಟನೆ ಸಿಕಂದರಾಬಾದ್​​​ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
#WATCH| Telangana: A constable of Railway Protection Force (RPF) saved a woman from falling under moving train in Secunderabad. (30.07)pic.twitter.com/evlanew8op— ANI (@ANI)July 31, 2021
#WATCH| Telangana: A constable of Railway Protection Force (RPF) saved a woman from falling under moving train in Secunderabad. (30.07)pic.twitter.com/evlanew8op
ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲನ್ನು ಮಹಿಳೆ ಹತ್ತಲು ಮುಂದಾಗಿದ್ದಾರೆ. ಅವಸರದಲ್ಲಿದ್ದ ಮಹಿಳೆ ರೈಲಿನ ಮೆಟ್ಟಿಲುಗಳಿಂದ ಜಾರಿ ಇನ್ನೇನು ರೈಲಿನಡಿ ಬೀಳಬೇಕು ಎನ್ನುವಷ್ಟರಲ್ಲೇ, ಅಲ್ಲೇ ಇದ್ದ ಆರ್​ಪಿಎಫ್​ ಅಧಿಕಾರಿ ತಕ್ಷಣ ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಈ ಎಲ್ಲಾ ದೃಶ್ಯ ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ರಾಜ್ಯ ಪ್ರವಾಸದತ್ತ ಬಿಎಸ್​​ವೈ ಚಿತ್ತ… ಪಕ್ಷ ಸಂಘಟನೆಗೆ ಮುಂದಾದ ಮಾಜಿ ಸಿಎಂ
ಕಳೆದ ತಿಂಗಳು ಕೂಡ ಇದೇ ರೀತಿಯ ವಿಡಿಯೋ ಒಂದು ವೈರಲ್ ಆಗಿತ್ತು. ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ನಲ್ಲಿ ರೈಲು ಏರಲು ಹೋದ ಮಹಿಳೆ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸ್ ಕಾನ್ಸ್​​ಟೇಬಲ್ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಬಚಾವ್ ಆಗಿದ್ದರು.(ಏಜೆನ್ಸೀಸ್)
PHOTOS| ಬೆಂಗಳೂರಿಗರೇ, ಈ ರಸ್ತೆಗೆ ಹೋಗೋಕು ಮುನ್ನ ಎಚ್ಚರ! ಗಂಟೆಗಟ್ಟಲೇ ಟ್ರಾಫಿಕ್ ಜಾಮ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
