ಅಮೃತಸರ:ಅತಿ ಉದ್ದನೆಯ ಕೂದಲನ್ನು ಬೆಳೆಸುವ ಮೂಲಕ ಬಾಲಕನೋರ್ವ ಗಿನ್ನಿಸ್​ ದಾಖಲೆಯನ್ನು ಬರೆದಿದ್ದಾನೆ. ಪಂಜಾಬ್​ ಮೂಲದ ಸಿದ್ದಕ್​ದೀಪ್​ ಸಿಂಗ್​ ಚಹಲ್ ಈ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.
ಸಿದ್ದಕ್​ದೀಪ್​ ಸಿಂಗ್​ ಚಹಲ್​ ಸಾಧನೆಯ ವಿಡಿಯೋವನ್ನು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಸುಮಾರು 4 ಅಡಿ 3 ಇಂಚು ಉದ್ದ ಕೂದಲು ಬೆಳೆದಿದ್ದು, ಸಿದ್ದಕ್​ದೀಪ್​ ಸಿಂಗ್​ ಕೇಶವನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಈ ಕುರಿತು ಮಾತನಾಡಿರುವ ಸಿದ್ದಕ್​ದೀಪ್​ ಸಿಂಗ್​ ಚಹಲ್​ ಜನರು ನನ್ನ ಕೂದಲನ್ನು ನೋಡಿ ತುಂಬಾ ಉದ್ದ ಹಾಗೂ ದಟ್ಟವಾಗಿದೆ ಎಂದು ಹೇಳುತ್ತಾರೆ. ಹಲವರು ನನ್ನ ಬಳಿ ಬಂದು ನಮಗೆ ಈ ರೀತಿಯ ಕೂದಲು ಬೆಳೆಯಬೇಕಿತ್ತು ಎಂದು ಅಸೂಯೆಯಿಂದ ಮಾತನಾಡಿದ್ದಾರೆ. ನನ್ನ ಕೂದಲು ಸುಮಾರು 130 ಸೆಂಟಿಮೀಟರ್​ ಅಥವಾ 4 ಅಡಿ ಉದ್ದ ಇರಬಹುದು.
Indian teen Sidakdeep Singh Chahal has never cut his hair. It's took him 15 years to grow the longest head of hair on a teenager.
ಇದನ್ನೂ ಓದಿ:ಮೂವರು ಡಿಸಿಎಂಗಳನ್ನು ನೇಮಕ ಮಾಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ: ಕೆ.ಎನ್​. ರಾಜಣ್ಣ
ನಮ್ಮ ಧರ್ಮದ ನಾನು ನನ್ನ ಕೂದಲನ್ನು ಕತ್ತರಿಸದೆ ಹಾಗೆ ಬಿಟ್ಟಿದ್ದೇನೆ. ಎಂದಿಗೂ ನನಗೆ ಕೂದಲನ್ನೂ ಕತ್ತರಿಸಿಕೊರ್ಳಳಬೇಕೆಂಬ ಆಲೋಚನೆಯೂ ಸಹ ಬಂದಿಲ್ಲ. ದಿನದಿಂದ ದಿನಕ್ಕೆ ಕೂದಲು ಹೆಚ್ಚಾಗಿ ಬೆಳೆಯುತ್ತಾ ಹೋದಂತೆ ನಾನು ಕತ್ತರಿಸದೆ ಹಾಗೆಯೇ ಬಿಟ್ಟೆ. ಈಗ ಅದು ಗಿನ್ನಿಸ್​ ದಾಖಲೆಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ.
ನನ್ನ ಕೂದಲನ್ನು ತೊಳೆದು, ಒಣಗಿಸಿ ಕಟ್ಟಿಕೊಳ್ಳಲು ಸುಮಾರು ಒಂದು ಘಂಟೆ ಬೇಕಾಗುತ್ತದೆ. ಇದನ್ನೆಲ್ಲಾ ನನ್ನ ತಾಯಿ ಅವರೇ ಮಾಡುತ್ತಾರೆ. ಅವರಿಗೆ ಈ ಗೌರವ ಸಲ್ಲಬೇಕು. ಕೂದಲನ್ನು ಈ ರೀತಿ ಕಾಪಾಡಿಕೊಳ್ಳುವುದು ಕಠಿಣ ಕೆಲಸವಾದರೂ ಅದಕ್ಕೆ ತಕ್ಕ ಗೌರವ ದೊರೆತಿದೆ ಎಂದು ಸಿದ್ದಕ್​ದೀಪ್​ ಸಿಂಗ್​ ಚಹಲ್​ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − twelve =
Remember me
