ನವದೆಹಲಿ/ಚಂಡೀಗಢ:ಖಲಿಸ್ತಾನಿ ಭಯೋತ್ಪಾದಕ ಹರ್​ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ‘ಪ್ರತೀಕಾರ’ ತೀರಿಸಿಕೊಳ್ಳುವುದಾಗಿ ನ್ಯಾಯಕ್ಕಾಗಿ ಸಿಖ್ ಸಂಘಟನೆಯ ಸಂಸ್ಥಾಪಕ, ಘೋಷಿತ ಖಲಿಸ್ತಾನಿ ಉಗ್ರ ಗುರ್​ಪತ್ವಂತ್ ಸಿಂಗ್ ಪನ್ನೂನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದು ರಾಷ್ಟŠ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪನ್ನೂನ್ ಕೆಲವು ಪತ್ರಕರ್ತರಿಗೆ ಇಮೇಲ್ ವಿಡಿಯೋ ಕಳಿಸಿದ್ದು ನೇರವಾಗಿ ಪ್ರಧಾನಿಯನ್ನು ಗುರಿಯಾಗಿಸಿ ಮಾತಾಡಿರುವುದು ಈ ವಿಡಿಯೋದಲ್ಲಿದೆ.
‘ಮೋದಿ ಅವರೇ.. ಧೈರ್ಯವಿದ್ದರೆ ಭದ್ರತೆ ಇಲ್ಲದೆ ದೆಹಲಿಗೆ ಬನ್ನಿ. ನೀವು ಜನಪ್ರಿಯ ನಾಯಕ ಆಗಿದ್ದೇ ಆದಲ್ಲಿ ಗಣರಾಜ್ಯ ದಿನದಂದು ಭದ್ರತೆ ಇಲ್ಲದೆ ಹೊರಗೆ ಬನ್ನಿ. ಖಲಿಸ್ತಾನಿ ಧ್ವಜವನ್ನು ಹಾರಿಸುವ ಮೂಲಕ ಶಹೀದ್ ನಿಜ್ಜರ್ ಹತ್ಯೆಗೆ ಎಸ್​ಎಫ್​ಜೆ ಪ್ರತೀಕಾರ ತೀರಿಸಿ ಕೊಳ್ಳುತ್ತದೆ’ ಎಂದು ಪನ್ನೂನ್ ಬೆದರಿಕೆ ಹಾಕಿದ್ದಾನೆ.
ನಿಜ್ಜರ್ ಹತ್ಯೆಗೆ ‘ಪ್ರತೀಕಾರ’ ತೀರಿಸಿಕೊಳ್ಳುವು ದಾಗಿ ದೆಹಲಿಯಲ್ಲಿ ಅಂಟಿಸಲಾಗಿರುವ ಭಿತ್ತಿಪತ್ರಗಳಲ್ಲೂ ಬೆದರಿಸಲಾಗಿದ್ದು ಅವು ವೈರಲ್ ಆಗಿವೆ. ಪನ್ನೂನ್ ಹಾಕಿರುವ ಬೆದರಿಕೆಯಿಂದ ಕಳವಳ ಉಂಟಾಗಿದ್ದು ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯ ವಿವಿಧೆಡೆ ಅಂಟಿಸಲಾಗಿರುವ ಬೆದರಿಕೆ ಭಿತ್ತಿಪತ್ರಗಳ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ನಿಜ್ಜರ್ ಹತ್ಯೆಗೆ ಪ್ರತೀಕಾರ ಕೈಗೊಳ್ಳುವುದು ಎಸ್​ಎಫ್​ಜೆ ಗುರಿ ಎಂದು ಅವುಗಳಲ್ಲಿ ಹೇಳಲಾಗಿದೆ. ಕೆನಡಾದ ಸರ್ರೆಯಲ್ಲಿರುವ ಒಂದು ಗುರುದ್ವಾರದ ಹೊರಗೆ ಕಳೆದ ವರ್ಷ ಜೂನ್ 18ರಂದು ಕೆಲವು ಅಪರಿಚಿತರು ನಿಜ್ಜರ್​ನನ್ನು ಕೊಂದಿದ್ದರು. ಪನ್ನೂನ್ ಒಬ್ಬ ‘ನಿಯೋಜಿತ ವೈಯಕ್ತಿಕ ಭಯೋತ್ಪಾದಕ’ ಎಂದು ಭಾರತ 2020ರ ಜುಲೈ ಒಂದರಂದು ಘೋಷಿಸಿತ್ತು.
ಧ್ವಜಾರೋಹಣ ತಡೆಗೆ ಕರೆ:ಎಸ್​ಎಫ್​ಜೆ ಸಂಘಟನೆಗೆ ಸೇರುವಂತೆ ಪಂಜಾಬ್​ನ ಗ್ಯಾಂಗ್​ಸ್ಟರ್​ಗಳಿಗೆ ಪನ್ನೂನ್ ಕರೆ ನೀಡಿದ್ದು, ಸಿಎಂ ಭಗವಂತ್ ಮಾನ್ ಸಹಿತ ರಾಜಕಾರಣಿಗಳಿಗೆ ಗಣರಾಜ್ಯದ ದಿನ ಧ್ವಜಾರೋಹಣ ಮಾಡಲು ಬಿಡದಂತೆ ಒತ್ತಾಯಿಸಿದ್ದಾನೆ. ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್​ಗೂ ಪನ್ನೂನ್ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಆತ ಕೆಲ ಪತ್ರಕರ್ತರಿಗೆ ಇಮೇಲ್ ಸಂದೇಶ, ವಿಡಿಯೋ ರವಾನಿಸಿದ್ದಾನೆ. ಸಿಎಂ ಮಾನ್​ರನ್ನು 1995ರ ಆ.31ರಂದು ಬಾಂಬ್ ದಾಳಿಗೆ ಬಲಿಯಾದ ಮಾಜಿ ಸಿಎಂ ಬೇಅಂತ್ ಸಿಂಗ್​ಗೆ ಹೋಲಿಸಿದ್ದಾನೆ. ಡಿಜಿಪಿ ಗೌರವ್ ಯಾದವ್ ಅವರನ್ನು 1990ರಲ್ಲಿ ಬಾಂಬ್ ದಾಳಿಯಲ್ಲಿ ಹತರಾದ ಪೊಲೀಸ್ ಅಧಿಕಾರಿ ಗೋವಿಂದ್ ರಾಮ್ೆ ಹೋಲಿಸಿದ್ದಾನೆ. ಪನ್ನೂನ್ ಹಿಂದೆಯೂ ಇಂಥ ಬೆದರಿಕೆಗಳನ್ನು ಹಾಕಿದ್ದು ವಿಐಪಿಗಳ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಪಂಜಾಬ್​ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟಿŠೕಯ ತನಿಖಾ ಸಂಸ್ಥೆಯ (ಎನ್​ಐಎ) ವಿಶೇಷ ಕೋರ್ಟ್, 2021ರ ಫೆ.3ರಂದು ಪನ್ನೂನ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − two =
Remember me
