ಗ್ಯಾಂಗ್ಟಾಕ್:ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಏಕಪಕ್ಷೀಯವಾಗಿತ್ತು. ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಸತತ ಎರಡನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡಿದೆ. ಎಸ್‌ಕೆಎಂ 32 ವಿಧಾನಸಭಾ ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆದ್ದು ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.
ಇದನ್ನೂ ಓದಿ:ಅರುಣಾಚಲದ 60 ಸದಸ್ಯ ಬಲದ ಅಸೆಂಬ್ಲಿಯಲ್ಲಿ 46 ಸ್ಥಾನ ಪಡೆದು ಅಧಿಕಾರಕ್ಕೆ ಮರಳಿದ ಬಿಜೆಪಿ
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಎದುರು ನಿಲ್ಲಲಾಗದೆ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಕೇವಲ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿ ಸೋಲೊಪ್ಪಿಕೊಂಡಿದೆ. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 2019 ರವರೆಗೆ ಅಂದರೆ 25 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು.
ಕುತೂಹಲಕಾರಿಯಾಗಿ, ಎಸ್‌ಡಿಎಫ್ ಸುಪ್ರೀಂ ಮತ್ತು ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಪೊಕ್ಲೋಕ್ ಕ್ಯಾಮ್ರಾಂಗ್ ಮತ್ತು ನಾಮ್‌ಚೆಬಂಗ್ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು, ಆದರೆ ಎರಡೂ ಸ್ಥಾನಗಳಲ್ಲಿ ಅವರು ಎಸ್‌ಕೆಎಂ ಅಭ್ಯರ್ಥಿಗಳಿಂದ ಸೋಲಿಸಲ್ಪಟ್ಟರು.
ಏಪ್ರಿಲ್ 19 ರಂದು ಸಿಕ್ಕಿಂ ವಿಧಾನಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆದಿತ್ತು. ಭಾರಿ ಭದ್ರತೆಯ ನಡುವೆ ಭಾನುವಾರ ಬೆಳಗ್ಗೆ 6 ಗಂಟೆಗೆ ವಿಧಾನಸಭಾ ಕ್ಷೇತ್ರಗಳ ಎಣಿಕೆ ಆರಂಭವಾಯಿತು.
ತಮೊಂಗ್ ಎರಡೂ ಕಡೆ ಗೆಲುವು:ಮುಖ್ಯಮಂತ್ರಿ ತಮಾಂಗ್ ಈ ಬಾರಿ ರೆನಾಕ್ ಮತ್ತು ಸೊರೆಂಗ್ ಚಕುಂಗ್ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಸ್ಥಾನಗಳನ್ನು ಗೆದ್ದಿದ್ದಾರೆ. ರೆನಾಕ್‌ನಲ್ಲಿ ಎಸ್‌ಡಿಎಫ್‌ ಅಭ್ಯರ್ಥಿ ಸೋಮನಾಥ್‌ ವಿರುದ್ಧ 7,044 ಮತಗಳ ಅಂತರದಿಂದ ತಮಂಗ್‌ ಗೆಲುವು ಸಾಧಿಸಿದ್ದಾರೆ.
ಇಂಡಿಯಾ ಕೂಟ ಎಷ್ಟು ಸೀಟು ಎಂದು ಕೇಳಿದಾಗ ರಾಹುಲ್ ನೀಡಿದ್ದು ತಮಾಷೆಯ ಉತ್ತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
