ನವದೆಹಲಿ:ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಇಂದು ಬೆಳಗ್ಗೆ ಉತ್ತರ ಪ್ರದೇಶ ವಿಶೇಷ ಟಾಸ್ಕ್​ ಫೋರ್ಸ್​ನ ಪೊಲೀಸರು ಎನ್​​ಕೌಂಟರ್​​ನಲ್ಲಿ ಕೊಂದಾಗಿನಿಂದಲೂ ಹಲವು ರಾಜಕೀಯ ಮುಖಂಡರು ತಮ್ಮದೇ ಆದ ದೃಷ್ಟಿಕೋನದಲ್ಲಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ.
ಅದರಲ್ಲೂ ಪ್ರತಿಪಕ್ಷಗಳ ನಾಯಕರಂತೂ ಎನ್​ಕೌಂಟರ್​ನ್ನು ವಿರೋಧ ಮಾಡುತ್ತಿದ್ದಾರೆ. ಹಾಗೇ, ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ ಕೂಡ ಟ್ವೀಟ್​ ಮೂಲಕ ಎನ್​ಕೌಂಟರ್​ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಹಲವು ಪ್ರತಿಕ್ರಿಯೆಗಳನ್ನು ನೀಡುವುದಕ್ಕಿಂತ ಮೌನವಾಗಿರುವುದೇ ಉತ್ತಮ. ಅದೆಷ್ಟು ಪ್ರಶ್ನೆಗಳು ಹಾಗೇ ರಕ್ಷಿಸಲ್ಪಟ್ಟವು ಎಂಬುದು ನನಗೆ ಗೊತ್ತಿಲ್ಲ ಎಂದು ಹಿಂದಿಯಲ್ಲಿ ಮಾರ್ಮಿಕವಾಗಿ ಟ್ವೀಟ್​ ಮಾಡಿದ್ದಾರೆ. ದುಬೆಯನ್ನು ಹತ್ಯೆ ಮಾಡಿದ್ದರಿಂದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ ಎಂಬರ್ಥದಲ್ಲಿ ಟ್ವೀಟ್​ ಮಾಡಿ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ:24 ವರ್ಷದ ಸಿನಿಜರ್ನಿಯಲ್ಲಿ ಸುದೀಪ್​ ಸಂಪಾದಿಸಿದ್ದೇನು?; ಅವರೇ ಹೇಳಿದ್ದಾರೆ ನೋಡಿ!!
ಉತ್ತರ ಪ್ರದೇಶ ಪೊಲೀಸರು ದುಬೆಯನ್ನು ಹತ್ಯೆ ಮಾಡಿದ್ದು, ಅದೆಷ್ಟೋ ಪ್ರತಿಪಕ್ಷಗಳ ನಾಯಕರ ಅಸಮಾಧಾನ, ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ದುಬೆಯ ಹಿಂದಿರುವ ರಾಜಕೀಯ ಮುಖಂಡರು ಯಾರು? ಅವನಿಗೆ ಯಾರೆಲ್ಲ ಗಣ್ಯರೊಂದಿಗೆ ಸಂಪರ್ಕ ಇತ್ತು ಎಂಬುದನ್ನು ಮುಚ್ಚಿಹಾಕಲೆಂದೇ ಈ ಎನ್​ಕೌಂಟರ್​ ಮಾಡಲಾಗಿದೆ ಎಂದು ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​ ಕೂಡ ಆರೋಪಿಸಿದ್ದಾರೆ. (ಏಜೆನ್ಸೀಸ್​)
ವಿಕಾಸ್​ ದುಬೆ ಎನ್​ಕೌಂಟರ್​ಗೆ ಮರುಗಿದ ಟಿಎಂಸಿ ಸಂಸದೆ; ನ್ಯಾಯವನ್ನೇ ಕೊಲ್ಲುತ್ತಿದ್ದಾರೆ ಯೋಗಿ ಜಿ ಎಂದ ಮಾಹುವಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seven =
Remember me
