ಉತ್ತರಕಾಶಿ:ಕುಸಿದ ಸಿಲ್ಕ್​ಯಾರಾ ಸುರಂಗದೊಳಗೆ ಎರಡು ವಾರಗಳ ಕಾಲದಿಂದ ಸಿಲುಕಿರುವ 41 ಕಾರ್ಮಿಕರಿಗೆ ರಕ್ಷಣೆಗಾಗಿ ಪರ್ಯಾಯ ಮಾರ್ಗವಾಗಿ ಲಂಬ ಕೊರೆತ ಅರಂಭಿಸಲಾಗಿದೆ. ಅಂದರೆ, ನಿರ್ಮಾಣ ಹಂತದಲ್ಲಿರುವ ಸುರಂಗ ಮೇಲಿನಿಂದ ದೊಡ್ಡ ರಂಧ್ರ ಕೊರೆದು ಒಳಗೆ ಸಿಲುಕಿದವರನ್ನು ಹೊರಗೆ ಕರೆತರಲು ಉದ್ದೇಶಿಸಲಾಗಿದ. ಈ ಕಾರ್ಯ ಶುರುವಾದ ಭಾನುವಾರ (ನ. 26) ಮೊದಲ ದಿನವೇ19.2 ಮೀಟರ್‌ಗಳ ಲಂಬ ಕೊರೆತ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಸಿದಿರುವ ಸುರಂಗದ ಮೇಲಿನ ಬೆಟ್ಟದ ತುದಿಯಿಂದ ಲಂಬವಾದ ಮಾರ್ಗವನ್ನು ರೂಪಿಸುವ ಕೊರೆಯುವಿಕೆಯು ಭಾನುವಾರ ಪ್ರಾರಂಭವಾಗಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಮೇಲಿನಿಂದ 86 ಮೀಟರ್ ಕೆಳಗೆ ರಂಧ್ರ ಕೊರೆಯಬೇಕು. ಈಗ ಮಾಡಿರುವ ಲಂಬ ಕೊರೆತವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಇನ್ನು ಬಾಕಿ ಉಳಿದಿರುವುದು 66.8 ಮೀಟರ್​. ಇನ್ನು ನಾಲ್ಕು ದಿನಗಳ ಒಳಗಾಗಿ ಇದು ಪೂರ್ಣಗೊಳ್ಳುವ ಭರವಸೆ ಮೂಡಿದೆ.
VIDEO | Uttarkashi tunnel collapse UPDATE: Vertical drilling begins at Silkyara tunnel.#UttarakhandTunnelRescuepic.twitter.com/c96xeU0u7B
— Press Trust of India (@PTI_News)November 26, 2023

ಇಲ್ಲಿಯವರೆಗೆ ವರ್ಟಿಕಲ್ ಡ್ರಿಲ್ಲಿಂಗ್ 19.2 ಮೀಟರ್‌ಗೆ ತಲುಪಿದೆ ಎಂದು ಎನ್‌ಎಚ್‌ಐಡಿಸಿಎಲ್ ಎಂಡಿ ಮಹಮೂದ್ ಅಹ್ಮದ್ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದು, ಅಡೆತಡೆಗಳಿಲ್ಲದೆ ಹೀಗೆ ಸಾಗಿದರೆ ನವೆಂಬರ್ 30ರೊಳಗೆ ನಾಲ್ಕು ದಿನದಲ್ಲಿ ಮುಗಿಸುವ ಭರವಸೆ ಇದೆ ಎಂದರು.
ಶನಿವಾರ, ಆಗರ್ ಯಂತ್ರದ ಬ್ಲೇಡ್‌ಗಳು ಅವಶೇಷಗಳೊಳಗೆ ಸಿಲುಕಿಕೊಂಡಿದ್ದರಿಂದ ಅಡ್ಡಲಾಗಿ ಕೊರೆಯುವ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ನವೆಂಬರ್ 12 ರಂದು ಉತ್ತರಾಖಂಡ್‌ನ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗವು ಭೂಕುಸಿದ ಕಾರಣ 41 ಕಾರ್ಮಿಕರು ಒಳಗಡೆ ಸಿಕ್ಕಿಬಿದ್ದಿದ್ದಾರೆ.
ರಾಜಸ್ಥಾನದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ; ಶೇಕಡಾ 74.62ರ ವೋಟಿಂಗ್​ನಿಂದ ಯಾರಿಗೆ ಲಾಭ?

ಬಿರುಗಾಳಿಗೆ ಹೊಡೆತಕ್ಕೆ ಮುಳುಗಿದ ಹಡಗು; 4 ಭಾರತೀಯರು ಸೇರಿ 13 ಸಿಬ್ಬಂದಿ ನಾಪತ್ತೆ

ಮಾಜಿ ಪ್ರಧಾನಿ ಇಮ್ರಾನ್​ ವಿರುದ್ಧ ಆಘಾತಕಾರಿ ಆರೋಪ ಮಾಡಿದ ಪಾಕ್ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + thirteen =
Remember me
