ನವದೆಹಲಿ:ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕಾಗಿ ಆ.5ರ ಮಧ್ಯಾಹ್ನ 12:15:15ರ ಸುಮುಹೂರ್ತದಲ್ಲಿ ಶಿಲ್ಯಾನ್ಯಾಸ ನೆರವೇರುತ್ತಿದೆ. ಇದಕ್ಕಾಗಿ ಸಿದ್ಧವಾಗಿರುವ 22 ಕೆ.ಜಿ. ಬೆಳ್ಳಿ ಇಟ್ಟಿಗೆ ಅಯೋಧ್ಯೆಗೆ ರವಾನೆಗೊಂಡಿದೆ.
ಬಿಜೆಪಿಯ ವಕ್ತಾರ ಸುರೇಶ್​ ನಕುವಾ 22,600 ಗ್ರಾಂ ಭಾರವಿರುವ ಬೆಳ್ಳಿ ಇಟ್ಟಿಗೆಯ ಎರಡು ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಬಿಡುಗಡೆ ಮಾಡಿದ್ದು, ಅದರ ಮೇಲೆ, ಪ್ರಧಾನಿ ನರೇಂದ್ರ ದಾಮೋದರ ದಾಸ್​ ಮೋದಿಜಿ ಅವರು ಶಿಲ್ಯಾನ್ಯಾಸ ನೆರವೇರಿಸಿದರು… ಜೈ ಶ್ರೀರಾಮ್​… ಆಗಸ್ಟ್​ 5, 2020, ಸಮಯ 12:15:15 ಎಂದು ಕೆತ್ತನೆ ಮಾಡಲಾಗಿದೆ.
ಲಭ್ಯ ಮಾಹಿತಿಯ ಪ್ರಕಾರ ಶಿಲ್ಯಾನ್ಯಾಸ ಕಾರ್ಯಕ್ರಮ ಆ.5ರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. 200 ಜನ ಅತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ 11.30ಕ್ಕೆ ಆಗಮಿಸಲಿದ್ದಾರೆ. ಭೂಮಿ ಪೂಜೆ 1 ಗಂಟೆ ನಡೆಯಲಿದ್ದು, ನಂತರ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ಗ್ರಾಹಕರ ಖಾತೆಗೆ ಬ್ಯಾಂಕ್​ ನೌಕರನಿಂದಲೇ ಕನ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + nine =
Remember me
