ಟೋಕಿಯೋ:ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಟೇಬಲ್​ ಟೆನ್ನಿಸ್​ ಆಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿರುವ ಭವೀನಾ ಬೇನ್ ಪಟೇಲ್​ ಅವರು ಗೆಲುವಿನ ಸಂತಸದಲ್ಲಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. 2016 ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಶಾಟ್​ಪುಟ್​ನಲ್ಲಿ ಭಾರತಕ್ಕೆ ರಜತ ಪದಕ ಗೆದ್ದಿದ್ದ ದೀಪಾ ಮಲಿಕ್​ ಅವರು, ಮತ್ತೊಬ್ಬ ಆಟಗಾರ್ತಿ ವೀಲ್​ ಚೇರ್​ ಮೇಲೆ ಆಡಿ ಪದಕ ಗಳಿಸಿರುವುದು ಶ್ಲಾಘನೀಯ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಭವೀನಾ, ಅತ್ಯಂತ ಕಡಿಮೆ ಸಮಯದಲ್ಲಿ ನಡೆಯುವಂತಹ ಟೇಬಲ್​ ಟೆನ್ನಿಸ್​ ಆಟದಲ್ಲಿ ಪೂರ್ಣ ತಲ್ಲೀನತೆಯಿಂದ ಭಾಗವಹಿಸಬೇಕು. ಇದಕ್ಕೆ ಧ್ಯಾನ ಮಾಡುವ ಅಭ್ಯಾಸವನ್ನು ತಾವು ರೂಢಿಸಿಕೊಂಡಿರುವುದಾಗಿ ಹೇಳಿದ್ದಾರೆ. ತಮ್ಮ ಕೋಚ್​​ ನಿಕುಲ್​ ಪಟೇಲ್ ಅವರು ಟೋಕಿಯೋಗೆ ಬಾರದಿದ್ದರೂ, ವಿಡಿಯೋ ಕಾಲ್​ನ ಮೂಲಕ ತಮಗೆ ಪಂದ್ಯಾವಳಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರೆಂದು ಸ್ಮರಿಸಿದ್ದಾರೆ.
ಇದನ್ನೂ ಓದಿ:ಸಾಕು ಮಕ್ಕಳಿಗೆ ಅಪ್ಪ-ಅಮ್ಮನ ಆಸ್ತಿಯಲ್ಲಿ ಹಕ್ಕು ಇರುತ್ತಾ? ಕಾನೂನು ಹೇಳುವುದೇನು?
ನಿಮ್ಮ ಪದಕವನ್ನು ಯಾರಿಗೆ ತೋರಿಸಿ ಸೆಲೆಬ್ರೇಟ್​​ ಮಾಡಲಿಚ್ಛಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭವೀನಾ, “ನನಗೆ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್​ ಅವರು ಪ್ರೇರಣಾದಾಯಕವಾಗಿದ್ದು, ಅವರನ್ನು ಒಮ್ಮೆ ಖುದ್ದು ಮಾತನಾಡಿಸಲಿಚ್ಛಿಸುತ್ತೇನೆ. ಅವರಿಂದ ಇನ್ನಷ್ಟು ಪ್ರೋತ್ಸಾಹದಾಯಕ ಮಾತುಗಳನ್ನು ಕೇಳಲಿಚ್ಛಿಸುತ್ತೇನೆ” ಎಂದಿದ್ದಾರೆ.(ಏಜೆನ್ಸೀಸ್)
ಮೆಟ್ರೊ 2ನೇ ಹಂತ 2024ಕ್ಕೇ ಪೂರ್ಣಗೊಳಿಸಲು ಸೂಚನೆ: ಸಿಎಂ ಬೊಮ್ಮಾಯಿ

ಅಣ್ಣಮ್ಮದೇವಿ ಭಕ್ತೆಯ ಸರ ಕದ್ದ ಹಳೇ ಕಳ್ಳ, ಜೈಲು ಪಾಲು; 300 ಗ್ರಾಂ ಚಿನ್ನಾಭರಣ ಜಪ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 15 =
Remember me
