ಚೆನ್ನೈ:ಪರ್ಯಾಯ ಇಂಧನ ವಾಹನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಸ್ವಾಗತ ಲಭಿಸುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಸಿಂಪಲ್​ ಒನ್​​ ಎಲೆಕ್ಟ್ರಿಕ್​ ಸ್ಕೂಟರ್​​ಗೆ ಲಾಂಚ್​​ ಆದ 5 ದಿನಗಳಲ್ಲೇ 30,000 ಆರ್ಡರ್​ಗಳು ಲಭಿಸಿವೆ ಎಂದು ಸಿಂಪಲ್​ ಎನರ್ಜಿ ಸಿಇಒ ಸುಹಾಸ್​ ರಾಜ್​ಕುಮಾರ್​ ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವದಂದು ಲಾಂಚ್​ ಆದ ಸಿಂಪಲ್​ ಒನ್​​ನ ಎಕ್ಸ್​ ಶೋರೂಂ ಬೆಲೆಯು 1.1 ಲಕ್ಷ ರೂಪಾಯಿಗಳಾಗಿವೆ. 4.8 ಕೆಡಬ್ಲ್ಯೂಎಚ್​ ಲೀಥಿಯಮ್ ಅಯಾನ್ ಬ್ಯಾಟರಿ ಹೊಂದಿರುವ ಸಿಂಪಲ್ ಒನ್,​​ ಗಂಟೆಗೆ 105 ಕಿಲೋಮೀಟರ್​ಗಳ ಟಾಪ್​ ಸ್ಪೀಡ್​ಅನ್ನು ಸಾಧಿಸಬಲ್ಲದು. ಒಮ್ಮೆ ಚಾರ್ಜ್​ ಮಾಡಿದರೆ 240 ಕಿಲೋಮೀಟರ್​​ಗಳಷ್ಟು ದೂರ ಸಂಚರಿಸಬಲ್ಲದು ಎನ್ನಲಾಗಿದೆ.
ಇದನ್ನೂ ಓದಿ:‘ಸೂಪರ್​​ ಸ್ಟಾರ್’​ ಟೀಸರ್​ ಬಿಡುಗಡೆ: ಅಣ್ಣನ ಮಗ ನಿರಂಜನ್​​ ಲುಕ್ಸ್​ಗೆ ಉಪ್ಪಿ ಹ್ಯಾಪಿ!
ಎಕೋ, ರೈಡ್​ ಮತ್ತು ಡ್ಯಾಶ್​ ಎಂಬ ಮೂರು ರೈಡಿಂಗ್​ ಮೋಡ್​ಗಳನ್ನು ಹೊಂದಿದ ಸಿಂಪಲ್​ ಒನ್​​ ಸ್ಕೂಟರ್​​ನ ಬುಕ್ಕಿಂಗ್​ಅನ್ನು 1947 ರೂ.ಗಳ ಟೋಕನ್​ ಮೊತ್ತದೊಂದಿಗೆ ಆರಂಭಿಸಲಾಗಿದೆ. ತಮಿಳುನಾಡುವಿನ ಕಾರ್ಖಾನೆಗಳಲ್ಲಿ ಉತ್ಪಾದಿಸಲ್ಪಡುವ ಈ ಸ್ಕೂಟರ್​​ಗಳ ಡೆಲಿವರಿಯು ಮುಂದಿನ ತಿಂಗಳಿಂದ ಆರಂಭವಾಗಲಿದೆ ಎಂದು ಸಿಇಒ ರಾಜ್​ಕುಮಾರ್​ ಹೇಳಿದ್ದಾರೆ.(ಏಜೆನ್ಸೀಸ್)
VIDEO | ‘ಅಫ್ಘಾನಿಸ್ತಾನಕ್ಕೆ ಹೋಗಿಬಿಡಿ, ಅಲ್ಲಿ ಪೆಟ್ರೋಲ್​ ಬೆಲೆ ಕಡಿಮೆ ಇದೆ’ ಎಂದ ಬಿಜೆಪಿ ನಾಯಕ!

ಸದ್ಯದಲ್ಲೇ ಈ ಮಹಾನಗರದಲ್ಲಿ ಕರೊನಾ ಲಸಿಕಾ ಅಭಿಯಾನ ಕಂಪ್ಲೀಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
