ನವದೆಹಲಿ:ಗಾಲ್ವಾನ್​ ಕಣಿವೆ ಕಲೆದ 2 ಶತಮಾನಗಳಿಂದಲೂ ಭಾರತದ ಆಡಳಿತಕ್ಕೆ ಒಳಪಟ್ಟಿದೆ ಎಂದು ಈ ಪ್ರದೇಶಕ್ಕೆ ಹೆಸರು ಗಾಲ್ವಾನ್​ ಎಂಬ ಹೆಸರು ಬರಲು ಕಾರಣರಾದ ಗುಲಾಂ ರಸೂಲ್​ ಗಾಲ್ವಾನ್​ ಅವರ ಮೊಮ್ಮದ ಅಮೀನ್​ ಗಾಲ್ವಾನ್​ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಾಲ್ವಾನ ಕಣಿವೆಯಲ್ಲಿ ಹಲವು ಘಟನೆಗಳು ಸಂಭವಿಸುತ್ತಿವೆ. ಆದರೆ, ಈ ಪ್ರದೇಶ 200 ವರ್ಷಗಳಿಂದಲೂ ಭಾರತದ ಆಡಳಿತಕ್ಕೆ ಒಳಪಟ್ಟಿದ್ದಾಗಿದೆ. ಈ ಬಗೆಗಿನ ವಿವಾದವನ್ನು ಪರಿಹರಿಸಿಕೊಳ್ಳಲು ಯುದ್ಧ ಒಂದೇ ಪರಿಹಾರವಲ್ಲ. ಮಾತುಕತೆಯ ಮೂಲಕ ಇದನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಗಾಲ್ವಾನ್​ನಲ್ಲಿನ ಜನತೆ ಸದಾ ಭಾರತೀಯ ಸೇನೆಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಮುಂದೆಯೂ ಕೂಡ ಭಾರತೀಯ ಸೇನೆಗೇ ಬೆಂಬಲ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಚೀನಿಯರದ್ದು ಯೋಜಿತ ದಾಳಿ; ಕರ್ನಲ್ ಸಂತೋಷ್​​ ಬಾಬು ಅವರ ಮರಣೋತ್ತರ ಪರೀಕ್ಷೆಯಲ್ಲಿ ದೃಢ
ಇತ್ತೀಚಿನ ಬೆಳವಣಿಗೆಯಿಂದ ಇಲ್ಲಿನ ಜನ ಸ್ವಲ್ಪ ಹೆದರಿಕೊಂಡಿದ್ದಾರೆ. ಆದರೆ, ಇದರ ಅವಶ್ಯಕತೆ ಇಲ್ಲ. ಲಡಾಖ್​ನ ಜನರು ಸದಾ ನಮ್ಮ ಸೇನಾಪಡೆಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧದ ಸಮರದಲ್ಲೂ ಅವರು ಹೀಗೆಯೇ ನಡೆದುಕೊಂಡಿದ್ದರು. ಹಾಗಾಗಿ ಈಗಲೂ ಕೂಡ ಅವರೆಲ್ಲರೂ ಭಾರತೀಯ ಸೇನಾಪಡೆಯನ್ನು ಬೆಂಬಲಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.
ಗಾಲ್ವಾನ್​ ಕಣಿವೆ ಪ್ರದೇಶ ಭಾರತಕ್ಕೆ ಸೇರಿದ್ದರೂ, ಆಯಕಟ್ಟಿನ ಸ್ಥಳದಲ್ಲಿದೆ ಎಂಬ ಕಾರಣಕ್ಕಾಗಿ ಚೀನಾ ಈ ಪ್ರದೇಶದ ಮೇಲೆ ಕಣ್ಣಿಟ್ಟಿದೆ. ಅಲ್ಲದೆ, ಈ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು, ಭಾರತದ ವಿರುದ್ಧ ಕತ್ತಿಮಸೆಯುತ್ತಿದೆ. ಕಳೆದ ಸೋಮವಾರ ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಏರ್ಪಟ್ಟು ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಯೋಧರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸತ್ತಿರುವ ಮಾಹಿತಿ ಇದೆ.
ಗಾಲ್ವಾನ್​ ಕಣಿವೆ ಘರ್ಷಣೆ ಬಳಿಕ ಭಾರತದ ಯೋಧರು ಯಾರೂ ಕಾಣೆಯಾಗಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − twelve =
Remember me
