ಮುಂಬೈ: ಖ್ಯಾತ ಬಾಲಿವುಡ್ ಗಾಯಕಿ ಅನುರಾಧಾ ಪೌಡ್ವಾಲ್ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ, ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ದಿನಾಂಕವನ್ನು ಘೋಷಿಸುವ ಕೆಲವೇ ಗಂಟೆಗಳ ಮೊದಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಮಾಧ್ಯಮ ಉಸ್ತುವಾರಿ ಅನಿಲ್ ಬಲುನಿ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಅನುರಾಧಾ ಕೇಸರಿ ಪಡೆಗೆ ಸೇರ್ಪಡೆಯಾದರು.
ಇದನ್ನೂ ಓದಿ:‘ಸೆಕ್ಸಿ ನನ್ನ ವಿಷಯವಲ್ಲ, ನಾನು ಸುಂದರವಾಗಿಲ್ಲ’: ಹೀಗಂದಿದ್ದೇಕೆ ಸಮಂತಾ?
ಗಾಯಕಿಯನ್ನು ಪಕ್ಷಕ್ಕೆ ಸ್ವಾಗತಿಸಿದ ಅರುಣ್ ಸಿಂಗ್ ಮಾತನಾಡಿ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬವು ವಿಸ್ತರಿಸಿದೆ. ಅನುರಾಧಾ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಹೇಳಿದರು.
#WATCH| Famous singer Anuradha Paudwal joins the Bharatiya Janata Party in Delhipic.twitter.com/SBFSVLjVU8
— ANI (@ANI)March 16, 2024

ದೇಶ-ವಿದೇಶಗಳಲ್ಲಿ ಭಕ್ತಿಗೀತೆಗಳು ಚರ್ಚೆಯಾದಾಗಲೆಲ್ಲ ಅನುರಾಧಾ ಪೌಡ್ವಾಲ್ ಅವರಿಗಿಂತ ದೊಡ್ಡ ಹೆಸರು ಮತ್ತೊಂದು ಬರುವುದಿಲ್ಲ. ಅವರು 35 ವರ್ಷಗಳಿಂದ ಭಕ್ತಿಗೀತೆ ಮತ್ತು ಚಿತ್ರಗೀತೆಗಳನ್ನು ಹಾಡಿದ್ದಾರೆ, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರ ಬೆಳವಣಿಗೆಯಾಗಿದ್ದು, ಇದರಿಂದ ಪ್ರಭಾವಿತರಾದ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.
ಪಕ್ಷಕ್ಕೆ ಸೇರ್ಪಡೆಯಾದ ನಂತರ ಅನುರಾಧಾ ಮಾತನಾಡಿ, “ಸನಾತನ ಧರ್ಮದೊಂದಿಗೆ ಆಳವಾದ ಸಂಪರ್ಕ ಹೊಂದಿರುವ ಪಕ್ಷಕ್ಕೆ ಇಂದು ನಾನು ಸೇರ್ಪಡೆಯಾಗುತ್ತಿರುವುದು ಸಂತೋಷ ತಂದಿದೆ. ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ನನ್ನ ಅದೃಷ್ಟ” ಎಂದು ಹೇಳಿದರು.
ಛತ್ತೀಸ್‌ಗಢದಲ್ಲಿ ಪೊಲೀಸರ ಎನ್‌ಕೌಂಟರ್.. ಇಬ್ಬರು ನಕ್ಸಲೀಯರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 3 =
Remember me
