ನವದೆಹಲಿ:ಪಂಜಾಬಿ ಗಾಯಕ ರ್ಯಾಪರ್ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ವಿಚ್ಛೇದನ ಪಡೆದಿದ್ದಾರೆ. ಪತ್ನಿಗೆ ಒಂದು ಕೋಟಿ ರೂಪಾಯಿಗಳ ಜೀವನಾಂಶ ನೀಡಲು ಹನಿ ಸಿಂಗ್ ಮುಂದಾಗಿದ್ದಾರೆ.
2014 ರಲ್ಲಿ ರಿಯಾಲಿಟಿ ಶೋ ಇಂಡಿಯಾಸ್ ರೋಸ್ಟರ್ ಶೋನಲ್ಲಿ ಮೊದಲ ಬಾರಿಗೆ ಶಾಲಿನಿ ತಲ್ವಾರ್ ಅವರನ್ನು ಹನಿ ಸಿಂಗ್ ಭೇಟಿ ಮಾಡಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೂ ತಿರುಗಿತ್ತು. ಇದಾದ ಬಳಿಕ 2011 ರಲ್ಲಿ ದೆಹಲಿಯ ಗುರುದ್ವಾರದಲ್ಲಿ ಇಬ್ಬರೂ ವಿವಾಹವಾದ್ದರು. ಇದೀಗ 11 ವರ್ಷಗಳ ನಂತರ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ದೂರವಾಗಿದ್ದಾರೆ.
ಶಾಲಿನಿ ಕಳೆದ ವರ್ಷ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹನಿ ಸಿಂಗ್​ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಮತ್ತು ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವಿದೆ ಎಂದು ಶಾಲಿನಿ ಆರೋಪಿಸಿದ್ದರು. ಅಲ್ಲದೇ, ಹನಿ ಸಿಂಗ್‌ಗೆ ವಿಚ್ಛೇದನ ಭತ್ಯೆಗಾಗಿ 10 ಕೋಟಿ ರೂ.ಗಳ ಪರಿಹಾರವನ್ನು ಶಾಲಿನಿ ಕೇಳಿದ್ದರು ಎನ್ನಲಾಗಿದೆ.
ಆದರೆ, ಈಗ ಇಬ್ಬರೂ 1 ಕೋಟಿ ಪರಿಹಾರದ ಒಪ್ಪಂದಕ್ಕೆ ಬಂದಿದ್ದಾರೆ. ಅಂತೆಯೇ, ಹನಿ ಸಿಂಗ್ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಮುಚ್ಚಿದ ಲಕೋಟೆಯಲ್ಲಿ ಶಾಲಿನಿ ತಲ್ವಾರ್ ಅವರಿಗೆ 1 ಕೋಟಿ ರೂ. ಜೀವನಾಂಶದ ಚೆಕ್​​ ನೀಡಿದ್ದಾರೆ.
ಕನ್ನಡದಲ್ಲಿ ಬರೆದ ಚೆಕ್​ ಅಮಾನ್ಯ: ಎಸ್​ಬಿಐಗೆ ಧಾರವಾಡದ ಗ್ರಾಹಕರ ಕೋರ್ಟ್​ನಿಂದ ದಂಡ

ಒಂದು ಲಡ್ಡುವಿನ ಬೆಲೆ 24.60 ಲಕ್ಷ ರೂ! ಹರಾಜಿನಲ್ಲಿ ದಾಖಲೆ ಬರೆದ ಬಾಲಾಪುರದ ಗಣಪ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 13 =
Remember me
