ಮುಂಬೈ:ಗಾಯಕಿ ನೇಹಾ ಕಕ್ಕರ್​ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬಾಲಿವುಡ್​ನ ಸೂಪರ್​ ಸ್ಟಾರ್​ ಸಿಂಗರ್​ ಎನಿಸಿಕೊಂಡಿರುವ ನೇಹಾ ಅಕ್ಟೋಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾಗಿ ಎರಡೇ ತಿಂಗಳಲ್ಲಿ ಗಂಡನ ಜತೆ, ಹೊಟ್ಟೆ ಹಿಡಿದುಕೊಂಡಿರುವ ಫೋಟೋ ಹಾಕಿದ ಗಾಯಕಿ, ಎಲ್ಲರಿಗೂ ಅಚ್ಚರಿ ತರಿಸಿದ್ದರು. ಇದೀಗ ತಮ್ಮ ಹೊಟ್ಟೆಯ ಹಿಂದಿನ ಸತ್ಯವನ್ನು ಗಾಯಕಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ:ಕರೊನಾ ವಾಕ್ಸಿನ್ ಹಾಕಿಸಿಕೊಂಡ ನಂತರ ಈಕೆಯ ಧ್ವನಿ ಪುರುಷರ ಧ್ವನಿಯಂತಾಯ್ತು!
ಶುಕ್ರವಾರದಂದು ಗಾಯಕಿ ಹೊಟ್ಟೆ ಹಿಡಿದಿರುವ ಫೋಟೋ ಹಾಕುತ್ತಿದ್ದಂತೆ, ಅಭಿಮಾನಿಗಳು ಕಣ್ಣರಳಿಸಿ ನೋಡಲಾರಂಭಿಸಿದ್ದರು. ಇದೇನು ಎರಡೇ ತಿಂಗಳಲ್ಲಿ ಇಷ್ಟು ದೊಡ್ಡ ಹೊಟ್ಟೆ? ಮದುವೆಗೂ ಮೊದಲೇ ಗರ್ಭವತಿ ಆಗಿದ್ದರೆ, ಅದಕ್ಕೆಂದೇ ಮದುವೆಯಾದರೆ, ಏಕಿಷ್ಟು ಅವಸರ? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದರು. ಅಭಿಮಾನಿಗಳ ಎಲ್ಲ ಪ್ರಶ್ನೆಗೂ ನೇಹಾ ಇದೀಗ ಉತ್ತರ ಕೊಟ್ಟಿದ್ದಾರೆ.
ನಿಜವಾಗಿಯೂ ನೇಹಾ ಗರ್ಭವತಿ ಅಲ್ಲವೇ ಅಲ್ಲ. ಅವರ ಹೊಸ ಆಲ್ಬಂ ಸಾಂಗ್​ಗಾಗಿ ಅವರು ಈ ಅವತಾರ ತೊಟ್ಟಿದ್ದಾರೆ ಅಷ್ಟೇ. ನೇಹಾ ಅವರ ಹೊಸ ಆಲ್ಬಂ ಸಾಂಗ್​ ‘ಕಯಾಲ್​ ರಕ್ಯಾ ಕರ್​’ ಡಿಸೆಂಬರ್​ 22ರಂದು ಬಿಡುಗಡೆಯಾಗಲಿದೆ. ಅದರಲ್ಲಿ ನೇಹಾ ಜತೆ ಆಕೆಯ ಪತಿ ರೋಹನ್​ ಪ್ರೀತ್ ಸಿಂಗ್​ ಕೂಡ ಕಾಣಿಸಿಕೊಂಡಿದ್ದಾರೆ. ಆ ಹಾಡಿನಲ್ಲಿ ಗಾಯಕಿ ಗರ್ಭವತಿ ಆಗಿರುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಈ ರೀತಿಯದ್ದೊಂದು ಫೋಟೋ ತೆಗೆಸಿಕೊಂಡಿದ್ದಾರೆ. ಗುರುವಾರ ಶೇರ್​ ಮಾಡಿದ್ದ ಫೋಟೋವೇ ಆಲ್ಬಂ ಸಾಂಗ್​ನ ಪೋಸ್ಟರ್​ನಲ್ಲೂ ಇದೆ. ಹಾಗಾಗಿ ಇದು ಪೋಸ್ಟರ್​ಗಾಗಿಯೇ ತೆಗೆದ ಚಿತ್ರ ಎನ್ನುವುದು ಬಹುತೇಕ ಖಚಿತ.
ಇದನ್ನೂ ಓದಿ:21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ
ಹೊಸ ಆಲ್ಬಂ ಸಾಂಗ್​ನ ಬಗ್ಗೆ ಗಾಯಕಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್​ ಹಂಚಿಕೊಂಡಿದ್ದಾರೆ. ನೆಚ್ಚಿನ ಗಾಯಕಿ ಗರ್ಭವತಿ ಎಂದು ತಿಳಿದು ಸಂತಸದಿಂದ ಆಕೆಯ ಮಗುವಿನ ಹೆಸರು ಏನಾಗಬಹುದು ಎಂದು ಈಗಾಗಲೇ ಯೋಚಿಸಿದ್ದ ಅಭಿಮಾನಿಗಳಿಗೆ ಗಾಯಕಿ ನಿರಾಸೆ ಉಂಟು ಮಾಡಿದ್ದಾರೆ. ಆದರೆ ಹೊಸ ಹಾಡೊಂದರ ಮೂಲಕ ರಂಜಿಸಲು ಮುಂದಾಗಿದ್ದಾರೆ. (ಏಜೆನ್ಸೀಸ್​)

A post shared by Neha Kakkar (Mrs. Singh) (@nehakakkar)

ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
