ನವದೆಹಲಿ:ಮಗು ಹುಟ್ಟುವ ಮುಂದೆಯೇ ತಂದೆ ಕುಟುಂಬ ತೊರೆದಿದ್ದು ತಾಯಿ ಏಕಾಂಗಿಯಾಗಿ ಕಷ್ಟಪಟ್ಟು ಮಗನನ್ನು ಬೆಳೆಸಿದ್ದಾಳೆ. ಈ ವಿಚಾರವಾಗಿ ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪನ್ನು ನೀಡಿದೆ.
ಮಗುವಿನ ತಂದೆಯ ಹೆಸರು ಪಾಸ್​ಪೋರ್ಟ್ನಲ್ಲಿ ಇರಬೇಕಾ ಬೇಡವಾ ಎಂಬುದರ ಕುರಿತು ದೆಹಲಿ ಹೈಕೋರ್ಟ್​ ತೀರ್ಪು ನೀಡಿದ್ದು ತಾಯಿಯ ಹೋರಾಟಕ್ಕೆ ಜಯ ಸಿಕ್ಕಿದೆ.
ಮಗುವಿನ ಪಾಸ್​ಪೋರ್ಟ್​ನ;್ಲಲಿ ತಂದೆಯ ಹೆಸರು ತೆಗೆದುಹಾಕು ಕುರಿತು ದೆಹಲಿ ಮೂಲದ ಮಹಿಳೆಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ.ಎಂ. ಸಿಂಗ್​ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣ ವಿಶೇಷವಾಗಿದ್ದು ತಂದೆ ಮಗುವನ್ನು ಸಂಪೂರ್ಣವಾಗಿ ತೊರೆದು ಹೋಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಆಯುರ್ವೇದ ವೈದ್ಯರು ಎಂಬಿಬಿಎಸ್‌ ವೇತನಕ್ಕೆ ಅರ್ಹರಲ್ಲ: ಸುಪ್ರೀಂ ಕೋರ್ಟ್​
ಇಂತಹ ವಿಶೇಷ ಪ್ರಕರಣಗಳಲ್ಲಿ ಅಧ್ಯಾಯ 8 ಹಾಗೂ 9ರ 4.5.1, 4.1 ಅಡಿಯಲ್ಲಿ ಷರತ್ತು ಸ್ಪಷ್ಟವಾಗಿ ಅನ್ವಯಿಸುತ್ತದೆ. ಮಗುವಿನ ಪಾಸ್‌ಪೋರ್ಟ್‌ನಲ್ಲಿರುವ ತಂದೆಯ ಹೆಸರನ್ನು ತೆಗೆಯಬೇಕು.  ಮಗುವಿನ ಸರ್ನೇಮ್ ತೆಗೆದು ಹೊಸ ದಾಖಲಾತಿ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ದೆಹಲಿ ಮೂಲದ ಮಹಿಳೆ ಮದುವೆಯಾದ ಕೆಲ ತಿಂಗಳಲ್ಲೇ ಪತಿ ಬಿಟ್ಟು ಹೋಗಿದ್ದಾನೆ. ಗರ್ಭಿಣಿಯಾಗಿದ್ದ ಮಹಿಳೆ ಏಕಾಂಗಿಯಾಗಿ ಜೀವನ ಸಾಗಿಸಿದ್ದಾಳೆ. ಮಗು ಹುಟ್ಟಿದ ಬಳಿಕವೂ ಯಾರ ನೆರವಿಲ್ಲದೆ ಬೆಳೆಸಿದ್ದಾಳೆ. ಇತ್ತ ಮಗುವಿನ ಪಾಸ್‌ಪೋರ್ಟ್ ಮಾಡಿಸಿದ್ದಾಳೆ. ಈ ವೇಳೆ ಮಗುವಿನ ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ತಂದೆಯ ತೆಗೆಯುವಂತೆ ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ನಿಯಮದ ಪ್ರಕಾರ ಇದು ಸಾಧ್ಯವಿಲ್ಲ ಅನ್ನೋ ಉತ್ತರ ಬಂದಿತ್ತು. ಹೀಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ, ತಂದೆ ಇದುವರೆಗೂ ಮಗುವನ್ನು ನೋಡಿಲ್ಲ. ಆರೈಕೆ ಮಾಡಿಲ್ಲ. ನೆರವು ನೀಡಿಲ್ಲ. ಕಷ್ಟಪಟ್ಟು ಏಕಾಂಗಿಯಾಗಿ ಬೆಳೆಸಿದ್ದೇನೆ. ಹೀಗಾಗಿ ಮಗುವಿನ ಪಾಸ್‌ಪೋರ್ಟ್‌ನಲ್ಲಿ ತಂದೆಯ ಹೆಸರು ಯಾಕೆ ಇದನ್ನು ತೆಗೆಯಬೇಕು ಎಂದು ಮಹಿಳೆ ಮನವಿ ಮಾಡಿದ್ದಳು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
