ನವದೆಹಲಿ:ಎಲ್ಲ ಸ್ಥಳೀಯ ಸಂಸ್ಥೆಗಳು, ವಿಧಾನಸಭೆಗಳು ಮತ್ತು ಲೋಕಸಭೆಗೆ ಒಂದೇ ಮತದಾರರ ಪಟ್ಟಿಯನ್ನು ಬಳಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದು ‘ಒಂದು ದೇಶ-ಒಂದು ಚುನಾವಣೆ’ ಪರಿಕಲ್ಪನೆಯ ಭಾಗವೂ ಆಗಿದೆ. ಒಂದೇ ಮತದಾರರ ಪಟ್ಟಿಯನ್ನು ಸಾಂಸ್ಥೀಕರಿಸುವ ಕುರಿತು ರ್ಚಚಿಸಲು ಪ್ರಧಾನ ಮಂತ್ರಿಯವರ ಕಚೇರಿ (ಪಿಎಂಒ) ಇತ್ತೀಚೆಗೆ ಸಭೆಯೊಂದನ್ನು ನಡೆಸಿ, ಎರಡು ಅತಿ ಮಹತ್ವದ ವಿಷಯಗಳನ್ನು ರ್ಚಚಿಸಿದೆ.
ದೇಶದಾದ್ಯಂತ ಎಲ್ಲ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಹೊಂದುವುದನ್ನು ಕಡ್ಡಾಯಗೊಳಿಸಲು ಸಂವಿಧಾನದ 243ಕೆ ಮತ್ತು 243 ಝೆಡ್​ಎ ವಿಧಿಗಳಿಗೆ ತಿದ್ದುಪಡಿ ತರುವುದು.ಚುನಾವಣೆ ಆಯೋಗದ ಮತದಾರರ ಪಟ್ಟಿಯನ್ನು ಮುನಿಸಿಪಲ್ ಮತ್ತು ಪಂಚಾಯತ್ ಚುನಾವಣೆಗಳಿಗೂ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸುವುದು ಈ ವಿಷಯಗಳಾಗಿವೆ. ಇದರಿಂದ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಮತದಾರರ ಪಟ್ಟಿಯ ಗೊಂದಲ ದೊರವಾಗುತ್ತದೆ ಎಂದು ಸಭೆ ಅಭಿಪ್ರಾಯಪಟ್ಟಿದೆ. ನರೇಂದ್ರ ಮೋದಿ ತಮ್ಮ ಆಡಳಿತದ ಮೊದಲ ಅವಧಿಯಲ್ಲೇ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಯೋಜನೆ ಬಗ್ಗೆ ಮಾತನಾಡಿದ್ದರು. 2019ರ ಲೋಕಸಭೆ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲೂ ಈ ಅಂಶ ಹಾಗೂ ಎಲ್ಲ ಚುನಾವಣೆಗೂ ಒಂದೇ ಮತದಾರರ ಪಟ್ಟಿ ವಿಚಾರವೂ ಇತ್ತು.
ಏಕ ಚುನಾವಣೆಗೆ ವ್ಯಾಪಕ ಬೆಂಬಲ:ರಾಷ್ಟ್ರ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವುದರ ಪರವಾಗಿ ಅನೇಕ ಸಮಿತಿಗಳು ಮತ್ತು ಸಂಸ್ಥೆಗಳು ಆಗಾಗ ದನಿಯೆತ್ತಿವೆ. ಸಮಯ, ಹಣ ಹಾಗೂ ಶಕ್ತಿ ಉಳಿತಾಯವಾಗುವುದರಿಂದ ಹಳ್ಳಿಯಿಂದ ದೆಹಲಿವರೆಗೆ ಏಕ ಕಾಲದಲ್ಲಿ ಚುನಾವಣೆ ನಡೆಸಬೇಕೆನ್ನುವುದು ವಾದವಾಗಿದೆ. ಆದರೆ ಈ ಪರಿಕಲ್ಪನೆ ಜಾರಿಗೆ ಸಹಮತ ಏರ್ಪಡಿಸಲು ವ್ಯಾಪಕ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ರಾಜ್ಯಗಳು ಮತ್ತು ಕೇಂದ್ರದ ನಡುವೆ ಅನುಮಾನ ಉಂಟಾಗುವುದರಿಂದ ಈ ಪ್ರಕ್ರಿಯೆ ಅಷ್ಟು ಸುಲಭದ ಮಾತಲ್ಲ ಎಂಬ ಅಭಿಪ್ರಾಯವೂ ತಜ್ಞರಲ್ಲಿದೆ.
ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + thirteen =
Remember me
