ನವದೆಹಲಿ:ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿನ ಎಲ್ಲ ಪದವಿಪೂರ್ವ ವಿದ್ಯಾರ್ಥಿಗಳು 8-10 ಹತ್ತು ವಾರಗಳವರೆಗೆ ಸಂಶೋಧನಾ ಇಂಟರ್ನ್‌ಷಿಪ್ ಕಡ್ಡಾಯವಾಗಿ ಮಾಡಬೇಕು ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹೇಳಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2022ರ ಅನುಷ್ಠಾನದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಒಂದೊಂದೇ ಬದಲಾವಣೆಗಳು ಆರಂಭವಾಗಿದ್ದು, ಅದರ ಒಂದು ಭಾಗವಾಗಿ ಈ ನಿಯಮ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ಇಂಟರ್ನ್​ಷಿಪ್ ಮಾಡಬೇಕು ಎಂದಿರುವ ಯುಜಿಸಿ, ಸಂಶೋಧನಾ ಇಂಟರ್ನ್​ಷಿಪ್‌ಗಳ ಮಾರ್ಗಸೂಚಿಗಳಿಗೆ ಅನುಮೋದನೆ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ)- 2020ಯಲ್ಲಿಯೂ ಇಂಟರ್ನ್​ಷಿಪ್​ ಕಡ್ಡಾಯ ಮಾಡಲಾಗಿದೆ. ಇದರ ಅನ್ವಯ ಪದವಿಯಲ್ಲಿ ಯಾವುದೇ ವಿಷಯಗಳನ್ನು ಆಯ್ಕೆ ಮಾಡಿಕೊಂಡರೂ ನಿರ್ದಿಷ್ಟವಾಗಿ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮಗಳಿಗೆ ಸಂಶೋಧನೆ ಕೈಗೊಳ್ಳಬೇಕು ಎಂದು ಇದೆ.
ಮಾರ್ಗಸೂಚಿಯಲ್ಲಿ ಏನಿದೆ?ಇಂಟರ್ನ್‌ಶಿಪ್ ಕಡ್ಡಾಯವಾಗಿದ್ದರೂ, ಇದರ ಕಾಲಾವಧಿಯು ವಿದ್ಯಾರ್ಥಿಯು ಮುಂದುವರಿಸಲು ಬಯಸುವ ಕೋರ್ಸ್‌ನ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ವಿದ್ಯಾರ್ಥಿಗಳು ಎರಡು ಸೆಮಿಸ್ಟರ್‌ಗಳು (ಮೊದಲ ವರ್ಷ) ಅಥವಾ ನಾಲ್ಕು ಸೆಮಿಸ್ಟರ್‌ಗಳು (ಎರಡನೇ ವರ್ಷ) ನಂತರ ಕೋರ್ಸ್‌ನಿಂದ ನಿರ್ಗಮಿಸಬಹುದು. ಒಂದು ವರ್ಷದ ನಂತರ ನಿರ್ಗಮಿಸಿದರೆ ಅವರಿಗೆ ಪ್ರಮಾಣಪತ್ರ ಮಾತ್ರ ಸಿಗುತ್ತದೆ. ಎರಡು ವರ್ಷಗಳ ನಂತರ ನಿರ್ಗಮಿಸಿದರೆ ಅವರಿಗೆ ಡಿಪ್ಲೊಮಾ ಪದವಿಯನ್ನು ನೀಡಲಾಗುತ್ತದೆ.
ಆದರೆ ಒಂದು ವೇಳೆ ಈ ಅವಧಿಯಲ್ಲಿ ಅರ್ಥಾತ್​ 2 ಅಥವಾ 4ನೇ ಸೆಮಿಸ್ಟರ್‌ನ ನಂತರ ಕೋರ್ಸ್​ ಬಿಟ್ಟರೆ ಅಂಥವರಿಗೆ 8-10 ವಾರಗಳ 10 ಕ್ರೆಡಿಟ್‌ಗಳ ಇಂಟರ್ನ್‌ಶಿಪ್‌ಗಳು ಪ್ರಮಾಣಪತ್ರ ಅಥವಾ ಡಿಪ್ಲೊಮಾದೊಂದಿಗೆ ಕಡ್ಡಾಯವಾಗಿರುತ್ತದೆ ಎಂದು ಹೇಳಿದೆ.
ಸಂಶೋಧನೆಯೊಂದಿಗೆ ನಾಲ್ಕು ವರ್ಷಗಳ ಪದವಿಯನ್ನು ಮುಂದುವರಿಸಿದರೆ ಅಂಥ ವಿದ್ಯಾರ್ಥಿಗಳು 10 ವಾರಗಳ ಇಂಟರ್ನ್‌ಶಿಪ್ ಜತೆಗೆ ಒಂದು ವರ್ಷದ ನಿಜವಾದ ಸಂಶೋಧನಾ ಕಾರ್ಯವನ್ನು ಮಾಡಬೇಕಾದುದು ಕಡ್ಡಾಯ. ಸರಳ ನಾಲ್ಕು ವರ್ಷಗಳ ಪದವಿಪೂರ್ವ ಶಿಕ್ಷಣವನ್ನು ಪಡೆಯಬಯಸುವವರು ಕನಿಷ್ಠ 8-10 ವಾರಗಳ ಇಂಟರ್ನ್‌ಶಿಪ್ ಮುಂದುವರಿಸಬೇಕಾಗುತ್ತದೆ.
ಈ ನಟಿ ಅಟೆನ್ಷನ್​ ಸೀಕರ್​.. ಟವಲ್​ ಹಾಕೋಕೆ ಬಂದಿದ್ದಾರೆ ಅಷ್ಟೇ: ರಮ್ಯಾ ವಿರುದ್ಧ ನಲಪಾಡ್​ ಕಿಡಿ

ಹನಿಮೂನ್​ಗೂ ನಮ್ದೇ ದುಡ್ಡು ತಗೊಂಡ ಮಗ ಈಗ ಬರೀ ಹೆಂಡ್ತಿ ಮಾತು ಕೇಳ್ತಾನೆ: ಕೋರ್ಟ್​ಗೆ ಅಮ್ಮನ ಅರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − three =
Remember me
