ನವದೆಹಲಿ:ಕರೊನಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಸರ್​ ಗಂಗಾ ರಾಮ್​ ಆಸ್ಪತ್ರೆಯ 108 ಸಿಬ್ಬಂದಿ ಕ್ವಾರಂಟೈನ್​ಗೆ ಗುರಿಯಾಗಿದ್ದಾರೆ.
ರೋಗಿಗಳಿಬ್ಬರ ಎರಡನೇ ಪರೀಕ್ಷೆಯಲ್ಲೂ ಕೋವಿಡ್​-19 ಪಾಸಿಟಿವ್​ ಫಲಿತಾಂಶ ಬಂದಿದ್ದರಿಂದ ಅವರೊಂದಿಗೆ ಸಂಪರ್ಕದಲ್ಲಿದ್ದ ವೈದ್ಯರು, ನರ್ಸ್​ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗೆ ದಿಗ್ಬಂಧನ ವಿಧಿಸಲಾಗಿದೆ.
108 ಸಿಬ್ಬಂದಿಯಲ್ಲಿ 85 ಮಂದಿ ಮನೆಯಲ್ಲಿ ಹಾಗೂ 23 ಮಂದಿ ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಆದರೆ, ಈವರೆಗೂ ಸಿಬ್ಬಂದಿಯಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. ಇನ್ನು 2 ರಿಂದ 3 ಮೂರು ದಿನಗಳಲ್ಲಿ ಯಾವುದಾದರೂ ರೋಗ ಲಕ್ಷಣಗಳು ಕಂಡುಬಂದರೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಸರ್​ ಗಂಗಾ ರಾಮ್​ ಆಸ್ಪತ್ರೆಯ ಚೇರ್ಮನ್​ ಡಾ. ಡಿ.ಎಸ್​. ರಾಣಾ ತಿಳಿಸಿದ್ದಾರೆ.(ಏಜೆನ್ಸೀಸ್​)
ಚೀನಾದ ನಾಯಿ ಮಾಂಸ ಇಂಡಸ್ಟ್ರಿಯ ಕಠೋರ ಸತ್ಯ ಬಿಚ್ಚಿಟ್ಟ ರೆಸ್ಟೋರೆಂಟ್​ ಮಾಲೀಕ!

ತಬ್ಲಿಘಿ​ ಜಮಾತ್​ ದೇಶದ ಕರೊನಾ ವೈರಸ್​ ಹಾಟ್​ಸ್ಪಾಟ್: 1,023 ಸೋಂಕಿತರಿಗೆ ತಬ್ಲಿಘಿ ನಂಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
