ಮುಂಬೈ:ರಿಲಯನ್ಸ್​ ಫೌಂಡೇಷನ್​​ನಿಂದ ನಡೆಸಲ್ಪಡುತ್ತಿರುವ ಸರ್​ ಎಚ್​ಎನ್​ ರಿಲಯನ್ಸ್​ ಫೌಂಡೇಷನ್​ ಹಾಸ್ಪಿಟಲ್​ ಈಗ ಭಾರತದ ಟಾಪ್​ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲೇ ನಂಬರ್ ಒನ್ ಎಂದೆನಿಸಿಕೊಂಡಿದೆ. ಟೈಮ್ಸ್​ ಆಫ್​ ಇಂಡಿಯಾ ಹೆಲ್ತ್ ಸರ್ವೇಯ ಭಾಗವಾದ ಆಲ್​ ಇಂಡಿಯಾ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಸ್​ ರ‌್ಯಾಂಕಿಂಗ್ ಸರ್ವೇ-2021ರಲ್ಲಿ ಈ ಮನ್ನಣೆಗೆ ಪಾತ್ರವಾಗಿದೆ.
2020-21ನೇ ಸಾಲಿನಲ್ಲಿ ಭಾರತದ ಟಾಪ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಗುರುತಿಸುವ ಉದ್ದೇಶದಿಂದ ಈ ಸರ್ವೇಯನ್ನು ನಡೆಸಲಾಗಿತ್ತು. ಕನಿಷ್ಠ ಮೂರು ಅಥವಾ ಅಧಿಕ ಕ್ರಿಟಿಕಲ್​ ಕೇರ್ ಸ್ಪೆಷಾಲಿಟಿ ಡಿಪಾರ್ಟ್​ಮೆಂಟ್ ಹೊಂದಿರುವ ಆಸ್ಪತ್ರೆಗಳನ್ನಷ್ಟೇ ಈ ಸರ್ವೇಯಲ್ಲಿ ಪರಿಗಣಿಸಲಾಗಿದೆ.
ಅಂದರೆ ಆಂಕಾಲಜಿ, ನೆಫ್ರಾಲಜಿ, ಯುರಾಲಜಿ, ಕಾರ್ಡಿಯಾಲಜಿ, ಪೀಡಿಯಾಟ್ರಿಕ್ಸ್, ಗೈನಕಾಲಜಿ/ಅಬ್​ಸ್ಟೆಟ್ರಿಕ್ಸ್​, ನ್ಯೂರಾಲಜಿ, ಎಮರ್ಜೆನ್ಸಿ ಆ್ಯಂಡ್ ಟ್ರಾಮಾ ಮತ್ತು ಗ್ಯಾಸ್ಟ್ರೊಎಂಟೆರಾಲಜಿ/ಹೆಪಟಾಲಜಿಗಳಲ್ಲಿ ಯಾವುದಾದರೂ ಮೂರು ಅಥವಾ ಅದಕ್ಕಿಂತಲೂ ಹೆಚ್ಚಿನ ವಿಭಾಗಗಳನ್ನು ಹೊಂದಿರುವ ಆಸ್ಪತ್ರೆಗಳನ್ನಷ್ಟೇ ಪರಿಗಣಿಸಿ ಈ ಸರ್ವೇ ನಡೆಸಲಾಗಿದೆ.
ಇದನ್ನೂ ಓದಿ:ರಿಲಯನ್ಸ್‌ನ ‘ಒನ್ ಸ್ಟಾಪ್ ಬ್ರೆಸ್ಟ್ ಕ್ಲಿನಿಕ್’ಗೆ ಚಾಲನೆ ನೀಡಿದ ನೀತಾ ಅಂಬಾನಿ
ವೆಸ್ಟ್​ ರೀಜನ್​ ಮತ್ತು ಮುಂಬೈ ಎಂಬ ಎರಡು ವಿಭಾಗಗಳಲ್ಲಿ ಟಾಪ್​ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಸ್ ಸರ್ವೇ ನಡೆಸಲಾಗಿದ್ದು, ಈ ಎರಡೂ ವಿಭಾಗಗಳಲ್ಲಿ ಸರ್​ ಎಚ್​ಎನ್​ ರಿಲಯನ್ಸ್​ ಫೌಂಡೇಷನ್​ ಹಾಸ್ಪಿಟಲ್​ ನಂಬರ್ ಒನ್​ ಎನಿಸಿಕೊಂಡಿದೆ. ಎಲ್ಲ ವೈದ್ಯರ ಹಾಗೂ ಸಿಬ್ಬಂದಿ ವರ್ಗದ ಅವಿರತ ಶ್ರಮ ಹಾಗೂ ನಿಸ್ವಾರ್ಥ ಮಾನವೀಯ ಸೇವೆಯಿಂದ ಇದು ಸಾಧ್ಯವಾಗಿದೆ ಎಂದು ರಿಲಯನ್ಸ್​ ಫೌಂಡೇಷನ್​ ಅಧ್ಯಕ್ಷೆ ನೀತಾ ಅಂಬಾನಿ ತಮ್ಮ ತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ನೀತಾ ಅಂಬಾನಿ ಬೆಂಬಲ; ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಭರವಸೆ
‘ವಿಮೆನ್ಸ್​ ಟಿ-20 ಚಾಲೆಂಜ್​’ಗೆ ಜಿಯೋ ಬಲ; ಸಕಲ ಬೆಂಬಲ ಘೋಷಿಸಿದ ನೀತಾ ಅಂಬಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
