ತೊಡಪುಳ: ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಅಕ್ರಮ ಮಸಾಜ್​ ಕೇಂದ್ರ ನಡೆಸುತ್ತಿದ್ದ ಪ್ರಕರಣದಲ್ಲಿ ಮಹಿಳೆಯರು ಸೇರಿ ಒಟ್ಟು ಐದು ಮಂದಿಯನ್ನು ಕೇರಳ ಪೊಲೀಸರು ಬಂಧಿಸಲಾಗಿದ್ದು, ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.
ಬಂಧಿತರನ್ನು ಮಸಾಜ್ ಪಾರ್ಲರ್‌ನ ನೌಕರರಾದ ವಯನಾಡ್ ಮೂಲದ ಲೀನಾ (35(, ತಿರುವನಂತಪುರಂ ಮೂಲದ ವಿನೋಫಾ (33) ಹಾಗೂ ಮಸಾಜ್ ಮಾಡಲು ಬಂದಿದ್ದ ಮುತ್ತೋಮ್​ನ ನಿವಾಸಿಗಳಾದ ಜೇಮ್ಸ್ (24) ಮತ್ತು ಕಣ್ಣನ್ (23) ಎಂದು ಗುರುತಿಸಲಾಗಿದೆ. ಮಸಾಜ್​ ಕೇಂದ್ರದ ಸ್ವಚ್ಛತಾ ಕೆಲಸಗಾರನನ್ನು ಬಂಧಿಸಲಾಗಿದೆ. ಕೇಂದ್ರದ ಮಾಲೀಕ ಕೊಟ್ಟಾಯಂನ ಕನಕರಿ ಮೂಲದ ಟಿ ಕೆ ಸಂತೋಷ್ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಖ್ಯಾತ ಖಳನಾಯಕನಿಗೆ ವಿಷವುಣಿಸಿದ ಸಹೋದರ: ಕಿಡ್ನಿ ಸಮಸ್ಯೆಯಿಂದ ಕಣ್ಣೀರಿಡುತ್ತಿರುವ ಪೊನ್ನಂಬಲಂ
ನಿನ್ನೆ ಮಧ್ಯಾಹ್ನ ತೊಡುಪುಳ ನಗರದ ಹೊಸ ಕೆಎಸ್‌ಆರ್‌ಟಿಸಿ ಟರ್ಮಿನಲ್ ಬಳಿಯ ಖಾಸಗಿ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಾವಾ ಬ್ಯೂಟಿ ಪಾರ್ಲರ್ ಮೇಲೆ ಡಿವೈಎಸ್ಪಿ ಎಂ.ಆರ್.ಮಧುಬಾಬು ನೇತೃತ್ವದ ತಂಡ ದಾಳಿ ನಡೆಸಿತು. ಈ ಪಾರ್ಲರ್ ಆರು ತಿಂಗಳಿಗೂ ಹೆಚ್ಚು ಕಾಲ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಬ್ಯೂಟಿ ಪಾರ್ಲರ್ ನೆಪದಲ್ಲಿ ಅಕ್ರಮವಾಗಿ ಮಸಾಜ್ ಸೆಂಟರ್ ನಡೆಸುತ್ತಿದ್ದರು
ಪೊಲೀಸರು ಮಹಿಳೆಯರನ್ನು ಬಂಧಿಸಲು ಬಂದಾಗ, ದಯವಿಟ್ಟು ಸರ್, ನಮ್ಮ ಫೋಟೋಗಳನ್ನು ತೆಗೆದುಕೊಳ್ಳಬೇಡಿ ಎಂದು ಮಾತ್ರ ಹೇಳಿದ್ದಾರೆ. ಪಾರ್ಲರ್‌ನಿಂದ ಮಸಾಜ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಸಾಜ್ ಮಾಡಲು ಮೂರು ಕೊಠಡಿಗಳಿದ್ದವು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)
ನಕಲಿ ವೀಸಾ ಹೊಂದಿದ್ದಕ್ಕೆ 700 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್! ಹೊರಬಿತ್ತು ಹೊಸ ದಂಧೆ…

ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಶವ ಪತ್ತೆ ಪ್ರಕರಣ; ಹತ್ಯೆಗೀಡಾದ ಮಹಿಳೆ ಯಾರೆಂದು ಪತ್ತೆ ಮಾಡಿದ ಪೊಲೀಸರು

ಕಾಂಗ್ರೆಸ್​ನಿಂದ ಟೋಲ್ ರಾಜಕಾರಣ: ಸಿಎಂ ಬೊಮ್ಮಾಯಿ‌ ಕಟು ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
