ನವದೆಹಲಿ:ಕೇಂದ್ರ ಸರ್ಕಾರದ ಮಹತ್ವದ ಸ್ಮಾರ್ಟ್​ಸಿಟಿ ಯೋಜನೆಯಲ್ಲಿ ಕಳೆದ ಐದು ವರ್ಷಗಳಿಂದ ಉತ್ತಮ ಪ್ರಗತಿ ಸಾಧಿಸಿರುವ ಪ್ರಮುಖ 20 ನಗರಗಳ ಪಟ್ಟಿ ಯನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ್ದು, ರಾಜ್ಯದ ದಾವಣಗೆರೆ ಕೂಡ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಗುಜರಾತ್​ನ ಅಹಮದಾಬಾದ್ ಮೊದಲ ಸ್ಥಾನದಲ್ಲಿದೆ.
100 ಸ್ಮಾರ್ಟ್ ಸಿಟಿಗಳ ಪೈಕಿ ಯೋಜನೆ ಅನುಷ್ಠಾನದಲ್ಲಿ ಹಿಂದಿರುವ ಕೊನೆಯ 20 ನಗರಗಳಲ್ಲಿ ಪ್ರಗತಿ ಸಾಧಿಸಲು ಟಾಪ್ 20 ನಗರಗಳ ಜತೆ ಇವುಗಳನ್ನು ಹೊಂದಿಸಲಾಗಿದೆ. ಇದಕ್ಕಾಗಿ ’ಸಿಸ್ಟರ್ ಸಿಟಿ’ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಈ ಪ್ರಗತಿ ಸಾಧಿಸುವ ನಗರಗಳು ಯೋಜನೆ ಅನುಷ್ಠಾನಕ್ಕೆ ಅಳವಡಿಸಿಕೊಂಡ ಮಾರ್ಗವನ್ನು ಹಿನ್ನಡೆಯಲ್ಲಿರುವ ನಗರಗಳು ಅನುಸರಿಸಬೇಕು ಮತ್ತು 100 ದಿನಗಳ ಒಳಗಾಗಿ ಅಭಿವೃದ್ಧಿಗೊಳಿಸಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶ.
ಉತ್ತಮ ಮತ್ತು ಕಳಪೆ ಪ್ರಗತಿಯ ನಗರಗಳನ್ನು ಪ್ರಾದೇಶಿಕವಾಗಿ ಮತ್ತು ಸಾಂಸ್ಕ್ರತಿಕವಾಗಿ ಸಾಮ್ಯತೆ ಆಧಾರದ ಮೇಲೆ ಸಿಸ್ಟರ್ ಸಿಟಿಗಳಾಗಿ ಜೋಡಿಸಲಾಗಿದೆ. ಫೆ.20ರೊಳಗಾಗಿ ಈ ಎರಡು ಜಂಟಿ ನಗರಗಳ ಸ್ಮಾರ್ಟ್ ಸಿಟಿ ಯೋಜನೆಯ ಸಿಇಒ ಮತ್ತು ನಿರ್ದೇಶಕರು ಸಭೆ ನಡೆಸಿ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಬೇಕಾಗುತ್ತದೆ. 100 ದಿನಗಳ ನಂತರ ಸಚಿವಾಲಯ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತದೆ.
ವಾರಾಣಸಿ-ಅಮೃತಸರ
ನಾಸಿಕ್-ಜಮ್ಮು
ಆಗ್ರಾ-ಪುದುಚೆರಿ
ಅಹಮದಾಬಾದ್-ಚಂಡೀಗಢ
ಭೋಪಾಲ್-ಐಜ್ವಾಲ್
ಅಮರಾವತಿ-ಅಟಲ್​ನಗರ
ಡೆಹರಾಡೂನ್-ಶಿಲ್ಲಾಂಗ್
ರಾಂಚಿ-ಶಿಮ್ಲಾ
ಪುಣೆ-ಧರ್ಮಶಾಲಾ
ವಿಶಾಖಪಟ್ಟಣ-ದಿವ್
ಉದಯಪುರ್-ಇಟಾನಗರ್
ಇಂದೋರ್-ಗುವಾಹಟಿ
ಕೋಟಾ-ಪಾಸಿಘಾಟ್
ಬೆಲ್ಲೋರ್-ಕರವಟ್ಟಿ (ಲಕ್ಷದ್ವೀಪ)
ಸೂರತ್-ಸಹಾರನ್​ಪುರ
ವಡೋದರಾ-ಮುರ್ದಾಬಾದ್
ಕಾನ್ಪುರ-ಕರಿಂನಗರ
ನಾಗ್ಪುರ-ಪೋರ್ಟ್​ಬ್ಲೇರ್
ತಿರುಪ್ಪುರ್​-ಸಿಲವಾಸ
ದಾವಣಗೆರೆ-ಬರೇಲಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + four =
Remember me
