ಹರಿಯಾಣ:15 ವರ್ಷದ ಅಪ್ರಾಪ್ತ ಬಾಲಕಿ ತನ್ನ ಪೋಷಕರು ತಮ್ಮನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಭಾವಿಸಿ, ತಮ್ಮನ ಕತ್ತುಹಿಸುಕಿ ಹತ್ಯೆಗೈದಿರುವ ಘಟನೆ ಹರಿಯಾಣದ, ಬಲ್ಲಬರ್ಗ್​ನಲ್ಲಿ ವರದಿಯಾಗಿದೆ.
ಈ ಘಟನೆಯನ್ನು ಪರಿಶೀಲಿಸಿದ ಪೊಲೀಸರು, “ಬಾಲಕಿ ತನ್ನ ತಮ್ಮನ ಬಳಿ ಮೊಬೈಲ್ ಕೇಳಿದ್ದಾಳೆ. ಮೊಬೈಲ್ ಕೊಡಲು ಆತ ನಿರಾಕರಿಸಿದ ಬೆನ್ನಲ್ಲೇ ಕತ್ತು ಹಿಸುಕಿ ಕೊಂದಿದ್ದಾಳೆ” ಎಂದು ವರದಿಯಲ್ಲಿ ತಿಳಿಸಿದ್ದಾರೆ. ಘಟನೆ ಅರಿತ ಪೋಷಕರು ಘಟನೆ ಸಂಭವಿಸಿದಾಗ ನಾವು ಮನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಾಯ್​ಫ್ರೆಂಡ್​ ಸಹಾಯದೊಂದಿಗೆ ಸೋದರಿಯನ್ನು ಕೊಂದ 13ರ ಬಾಲಕಿ! ನಂತರ ನಡೆದದ್ದು ಇನ್ನೂ ಭೀಕರ…
ಹರಿಯಾಣದ ಬಲ್ಲಬರ್ಗ್​ನಲ್ಲಿ 15 ವರ್ಷದ ಬಾಲಕಿ ತನ್ನ 12 ವರ್ಷದ ಸಹೋದರನನ್ನು ಹತ್ಯೆಗೈದಿದ್ದಾಳೆ. ಈ ಘಟನೆಯನ್ನು ಅರಿತ ಪೋಷಕರು ಕಣ್ಣೀರಿಟ್ಟಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಪೋಷಕರು, “ಎಂದಿನಂತೆ ನಮ್ಮ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ ನಮ್ಮ ಮಗ ಮನೆಯಲ್ಲಿ ಕಾಣಿಸಲಿಲ್ಲ! ಬಳಿಕ ಮನೆಯ ಶೀಟ್​ ಅಡಿ ಮಲಗಿರುವುದನ್ನು ನೋಡಿದೆವು. ಅವನನ್ನು ಎಬ್ಬಿಸಲು ನಿರಂತರ ಪ್ರಯತ್ನ ಮಾಡಿದೆವು. ಆದ್ರೆ, ಅದ್ಯಾವುದು ಸಫಲವಾಗಲಿಲ್ಲ! ನನ್ನ ಮಗನ ಕತ್ತು ಹಿಸುಕಿರುವುದು ತಿಳಿಯಿತು. ಆ ವೇಳೆ ಮನೆಯಲ್ಲಿ ನನ್ನ ಮಗಳು ಮಾತ್ರ ಇದ್ದಳು” ಎಂಬುದನ್ನು ಪೋಷಕರು ಹೇಳಿದ್ದಾರೆ.
ಇದನ್ನೂ ಓದಿ:ಗಿನ್ನೆಸ್​ ದಾಖಲೆ | ಅವಳಿ ಸೋದರಿಯರ ನಡುವೆ 2.5 ಅಡಿ ಅಂತರ!3
ಬಾಲಕಿಯನ್ನು ವಿಚಾರಣೆ ಮಾಡಿದ ಪೊಲೀಸ್ ಅಧಿಕಾರಿ ಸುಬೆ ಸಿಂಗ್, “ತನ್ನ ಪೋಷಕರು ತನ್ನ ತಮ್ಮನನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ಆಕೆ ಭಾವಿಸಿದ್ದಾಳೆ. ತಮ್ಮನಿಗೆ ಪೋಷಕರು ಮೊಬೈಲ್ ನೀಡುತ್ತಾರೆ. ತಾನು ಮೊಬೈಲ್ ಕೇಳಿದ್ರೆ ಕೊಡುತ್ತಿರಲಿಲ್ಲ ಎಂದು ಬಾಲಕಿ ಹೇಳಿದ್ದಾಳೆ. ತಮ್ಮನ ಬಳಿ ಮೊಬೈಲ್ ಕೇಳಿದಾಗ ಆತ ಕೊಡಲು ನಿರಾಕರಿಸಿದ್ದೇ ಈ ದುರ್ಘಟನೆ ನಡೆಯಲು ಕಾರಣ” ಎಂದು ಅಧಿಕಾರಿ ಸುಬೆ ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
