ಮುಂಬೈ:ಹೆತ್ತ ತಾಯಿಯ ಮೃತದೇಹಕ್ಕೆ ಸಹೋದರಿಯರೇ ಹೆಗಲು ನೀಡಿ ಸ್ಮಶಾನದವರೆಗೆ ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ:ಮದುವೆ ಮನೆಯಲ್ಲಿಯೇ ನಡೆಯಿತು ದುರಂತ: ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ..?ಅಲೆಮಾರಿ ಸಮಾಜದ ಕುಟುಂಬವವೊಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಅವರಿಗೆ ಸ್ಥಾನವಿರಲಿಲ್ಲ. ಈ ಬುಡಕಟ್ಟಿನ ಪ್ರತಿಯೊಂದು ನಿರ್ಧಾರವನ್ನು ಪಂಚಾಯತಿ ಮೂಲಕ ಅಥವಾ ಸಮುದಾಯದ ಪುರುಷರು ತೆಗೆದುಕೊಳ್ಳುತ್ತಾರೆ. ಆದರೆ, ಐದು ದಿನಗಳ ಹಿಂದೆ ಮೃತಪಟ್ಟ ತಾಯಿಯೊಬ್ಬಳಿಗೆ ಯಾರು ಗಂಡು ಮಕ್ಕಳಿರಲಿಲ್ಲ. ಕೊನೆಗೆ ಆಕೆಯ ಮಕ್ಕಳಾದ ದೀಪಾ ಮತ್ತು ಸಹೋದರಿಯರು ಧೈರ್ಯದಿಂದ ಆಕೆಯ ಶವವನ್ನು ಹೆಗಲಿಗೆ ಹಾಕಿಕೊಂಡು ಅಂತ್ಯಸಂಸ್ಕಾರ ಮಾಡಿ ತದಿಗೆಗೆ ಕೊಂಡೊಯ್ಯಲು ನಿರ್ಧರಿಸಿದ್ದರು.
ಈ ವೇಳೆ ಕೆಲವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಆಗ ಎಲ್ಲ ಸಹೋದರಿಯರು ತಮ್ಮ ತಾಯಿಯ ಅಂತ್ಯಕ್ರಿಯೆ ಮಾಡಲು ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು? ನಮಗೆ ಯಾರು ಸಹೋದರರಿಲ್ಲ. ಎಂಬ ಗೊಂದಲದ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿರಲಿಲ್ಲ ಕೊನೆಗೆ ಹೆಣ್ಣು ಮಕ್ಕಳೇ ತಾಯಿಯ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡಿರುವ ಮೃತ ಮಹಿಳೆಯ ಮಗಳು ದೀಪಾ, ಈ ನಿರ್ಧಾರ ಕ್ರಾಂತಿಕಾರಿಯಾಗಿದೆ. ಇಂದಿಗೂ ಅಲೆಮಾರಿ ಸಮಾಜದ ಹೆಣ್ಣುಮಕ್ಕಳಿಗೆ ಈ ನಿರ್ಧಾರ ಕೈಗೊಳ್ಳುವುದು ತುಂಬಾ ಸವಾಲಿನ ಸಂಗತಿ. ನಮ್ಮ ತಂದೆ ಹೋದಾಗ ತುಂಬಾ ಚಿಕ್ಕವರು. ತಮ್ಮ ತಾಯಿ ಕುಲುಮೆಯನ್ನು ಕಾಯಿಸುವುದರಿಂದ ಹಿಡಿದು ಕಾದ ಕಬ್ಬಿಣಕ್ಕೆ ಪೆಟ್ಟು ನೀಡುವ ಕೆಲಸವನ್ನ ಮಾಡಿದ್ದಾರೆ. ತಾಯಿ ನಮ್ಮನ್ನು ಬದುಕಿಸಲು ನೂರಾರು ಕೆಲಸಗಳನ್ನು ಮಾಡಿದ್ದು, ಅವಳಿಗೆ ಹೆಗಲು ಕೊಡುವ ಹಕ್ಕು ನಮಗೇಕೆ ಇಲ್ಲ? ಈ ಕ್ರಮವು ವೈಯಕ್ತಿಕವಾಗಿದ್ದರೂ ಸಮಾಜವನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 8 =
Remember me
