ನವದೆಹಲಿ:ರಕ್ಷಾಬಂಧನವನ್ನು ಸಹೋದರ-ಸಹೋದರಿಯರ ನಡುವಿನ ಬಾಂದವ್ಯದ ಸಂಕೇತವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರ ಉಡುಗೊರೆ ನೀಡುವ ಮೂಲಕ ಯಾವುದೇ ಸಮಸ್ಯೆ ಎದುರಾದರೆ ನಾನಿದ್ದೇನೆ ಎಂದು ಧೈರ್ಯ ತುಂಬುತ್ತಾರೆ. ಈ ರಾಖಿ ಹಬ್ಬದ ಸಂದರ್ಭದಲ್ಲಿ ಕೆಲವು ಘಟನೆಗಳು ಕಣ್ಣೀರು ತರಿಸುತ್ತವೆ. ಇತ್ತೀಚೆಗೆ ಇಬ್ಬರು ಸಹೋದರಿಯರು ತಮ್ಮ ಸಹೋದರನೆಂದು ಭಾವಿಸಿ ನಾಯಿಗೆ ರಾಖಿ ಕಟ್ಟಿದ್ದಾರೆ. ಅಷ್ಟಕ್ಕೂ ಅವರು ನಾಯಿಗೆ ಏಕೆ ರಾಖಿ ಕಟ್ಟಿದರು ಎಂಬುದನ್ನು ತಿಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಖಚಿತ.
ತೆಲಂಗಾಣ ರಾಜ್ಯದ ಮಂಚಿರ್ಯಾಲ ಜಿಲ್ಲೆಯ ದಂಡೆಪಲ್ಲಿ ಮಂಡಲದ ಕನ್ನೆಪಲ್ಲಿ ಗ್ರಾಮದಲ್ಲಿ ಮರ್ರಿಪೆಲ್ಲಿ ಮಲ್ಲಯ್ಯ-ಕಮಲಾ ದಂಪತಿ ವಾಸವಿದ್ದಾರೆ. 20 ವರ್ಷಗಳ ಹಿಂದೆ ಮದುವೆಯಾದ ದಂಪತಿಗೆ ಹಲವು ವರ್ಷಗಳ ಕಾಲ ಮಕ್ಕಳಿರಲಿಲ್ಲ. ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ, ಮಕ್ಕಳಿಲ್ಲದ ಕಾರಣ ರಾಮು ಎಂಬ ನಾಯಿಯನ್ನು ಸಾಕುತ್ತಿದ್ದರು. ನಾಯಿಯ ಕಾಲ್ಗುಣದಿಂದ ಮಲ್ಲಯ್ಯ ಕುಟುಂಬಕ್ಕೆ ಒಳ್ಳೆಯದಾಯಿತು. ದಂಪತಿಗೆ ಸ್ವಲ್ಪ ಸಮಯದ ನಂತರ ಅವಳಿ ಹೆಣ್ಣು ಮಕ್ಕಳು ಜನಿಸಿದರು. ಇದರಿಂದ ಮಲ್ಲಯ್ಯ ದಂಪತಿಯ ಆನಂದಕ್ಕೆ ಮಿತಿಯೇ ಇರಲಿಲ್ಲ. ಹೆಣ್ಣುಮಕ್ಕಳಿಗೆ ರಮ್ಯಾ ಮತ್ತು ರಾಮ ಎಂದು ಹೆಸರಿಟ್ಟರು.
ಶ್ವಾನ ಬಂದ ಬಳಿಕ ಮಕ್ಕಳಿಲ್ಲದ ಕೊರಗು ನೀಗಿ, ಮಲ್ಲಯ್ಯ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುತ್ತಿದೆ. ಆದರೆ, ನೆಮ್ಮದಿಯಿಂದ ನಡೆಯುತ್ತಿದ್ದ ಅವರ ಕುಟುಂಬದಲ್ಲಿ ಒಮ್ಮೆ ದುರಂತವೊಂದು ನಡೆಯಿತು. ರಾಮ ಮತ್ತು ರಮ್ಯಾ ಹುಟ್ಟಿದ ಸ್ವಲ್ಪ ಸಮಯದಲ್ಲೇ ರಾಮು ಸಾವಿಗೀಡಾದ. ಪ್ರೀತಿಯ ಮಗನಂತೆ ಸಾಕಿದ್ದ ನಾಯಿ ಮೃತಪಟ್ಟ ಸುದ್ದಿ ಮಲ್ಲಯ್ಯನ ಕುಟುಂಬಕ್ಕೆ ತೀವ್ರ ಸಂಕಟ ಪಡುವಂತೆ ಮಾಡಿತು. ಅದೇ ಸಮಯದಲ್ಲಿ ಆ ನಾಯಿಯ ಮೇಲಿನ ಪ್ರೀತಿಯಿಂದ ಅದನ್ನು ತಮ್ಮ ಜಮೀನಿನಲ್ಲಿ ಹೂತು ಹಾಕಿದರು ಮತ್ತು ಅದಕ್ಕೊಂದು ಪುಟ್ಟ ಸ್ಮಾರಕ ಸಹ ನಿರ್ಮಿಸಿದ್ದಾರೆ.
ನಾಯಿಯನ್ನು ಸಹೋದರನಂತೆ ಪರಿಗಣಿಸುತ್ತಿದ್ದ ರಾಮ ಮತ್ತು ರಮ್ಯಾ, ಪ್ರತಿ ವರ್ಷ ರಾಖಿ ಹುಣ್ಣಿಮೆಯಂದು ಜಮೀನಿಗೆ ತೆರಳಿ ನಾಯಿ ಇರುವ ಸಮಾಧಿಗೆ ಪೂಜೆ ಸಲ್ಲಿಸುತ್ತಾರೆ. ಮೇಲಾಗಿ ಆ ಸಮಾಧಿಗೆ ರಾಖಿ ಕಟ್ಟುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಇಬ್ಬರು ಸಹೋದರಿಯರು ನಾಯಿಗೆ ರಾಖಿ ಕಟ್ಟುವ ಮೂಲಕ ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ.(ಏಜೆನ್ಸೀಸ್​)
ಸಹೋದರಿ ರಾಖಿ ಕಟ್ಟಿದಾಗ ಗಿಫ್ಟ್​ ಆಗಿ ಹಣ ಕೊಡುವುದೇಕೆ? ಈ ಆಚರಣೆ ಹಿಂದಿರುವ ಉದ್ದೇಶ ಹೀಗಿದೆ….

ಪ್ರಾಸಿಕ್ಯೂಷನ್​ಗೆ ಅನುಮತಿ ಪ್ರಶ್ನಿಸಿ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ ಸಿಎಂ ಸಿದ್ದು: ಇಂದು ಮಧ್ಯಾಹ್ನವೇ ವಿಚಾರಣೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three − two =
Remember me
