ಮುಂಬೈ:ರಕ್ಷಾ ಬಂಧನ ಅಂದ ತಕ್ಷಣ ಹೆಣ್ಣುಮಕ್ಕಳು ಅಣ್ಣ ಅಥವಾ ತಮ್ಮನ ಕೈಗೆ ರಾಖಿ ಕಟ್ಟುವ ಚಿತ್ರಣವೇ ಮೂಡುತ್ತದೆ. ಹೀಗಿರುವಾಗ, ತಮ್ಮ ಸೋದರಿಯರಾದ ನೀತಿ ಮತ್ತು ಕ್ರಿತಿ ಜೊತೆ ಹಬ್ಬವನ್ನು ಆಚರಿಸುತ್ತಿರುವ ಡ್ಯಾನ್ಸ್​ ದಿವಾಗಳಾದ ಶಕ್ತಿ ಮೋಹನ್ ಮತ್ತು ಮುಕ್ತಿ ಮೋಹನ್​, “ಸೋದರರು ಮಾತ್ರ ಸೋದರಿಯರನ್ನು ರಕ್ಷಿಸುತ್ತಾರೆ ಎಂಬ ಮನೋಭಾವ ಬದಲಾಗಬೇಕು” ಎಂದಿದ್ದಾರೆ.
“ಇದು ನಮಗೆ ವಿಶೇಷವಾದ ದಿನ. ಶತಮಾನಗಳಿಂದ, ಸೋದರ ಸೋದರಿಯನ್ನು ರಕ್ಷಿಸುತ್ತಾನೆ ಎಂದು ಹೇಳಲಾಗಿದೆ. ಆದರೆ ನಮ್ಮ ಮನೆಯಲ್ಲಿ ಹೀಗಿಲ್ಲ. ನಾವು ಅಕ್ಕತಂಗಿಯರು ಒಬ್ಬರನ್ನೊಬ್ಬರು ರಕ್ಷಿಸುತ್ತೇವೆ. ನಮ್ಮ ಬಾಂಧವ್ಯವನ್ನು ಸೆಲೆಬ್ರೇಟ್​ ಮಾಡಲು ಈ ಹಬ್ಬವನ್ನು ಆಚರಿಸುತ್ತೇವೆ. ಸೋದರ-ಸೋದರಿ ಬಾಂಧವ್ಯವಷ್ಟೇ ಅಲ್ಲ, ಇದು ಸೋದರರ ಅಥವಾ ಸೋದರಿಯರ ನಡುವಿನ ಬಾಂಧ್ಯವ್ಯದ ಸಂಕೇತ ಕೂಡ. ಸೋದರಿಯರು ಪರಸ್ಪರರನ್ನು ನೋಡಿಕೊಳ್ಳಬಲ್ಲರು ಮತ್ತು ತಮ್ಮ ಸೋದರರನ್ನೂ ರಕ್ಷಿಸಬಲ್ಲರು” ಎನ್ನುತ್ತಾರೆ ಶಕ್ತಿ.
ಇದನ್ನೂ ಓದಿ:ಬ್ರೇಕಿಂಗ್​: 2022ರ ಏಪ್ರಿಲ್​ 14ಕ್ಕೆ ‘ಕೆಜಿಎಫ್​ 2’ ಬಿಡುಗಡೆ
“ಪ್ರತಿವರ್ಷ ರಕ್ಷಾ ಬಂಧನದ ದಿನ ಒಡಹುಟ್ಟಿದವರ ಪ್ರೀತಿ ಮತ್ತು ತ್ಯಾಗಗಳ ಬಗೆಗಿನ ಕಥೆಯನ್ನು ನಮ್ಮ ತಾಯಿ ನಮಗೆ ಹೇಳುತ್ತಾರೆ. ಈ ಕಥೆ ಕೇಳಲು ನಾನು ಉತ್ಸುಕಳಾಗಿರುತ್ತೇನೆ” ಎನ್ನುತ್ತಾರೆ, ಮುಕ್ತಿ. ತಮ್ಮ ಸೋದರಿ ತಮ್ಮ ವೃತ್ತಿಯಲ್ಲೇ ಇರುವುದು ಒಂದು ಆಶೀರ್ವಾದದಂತೆ ಎನ್ನುವ ಮುಕ್ತಿ, ತಮಗೆ ಯಾವ ಪ್ರಾಜೆಕ್ಟ್​ ಮಾಡಬೇಕು ಎಂದು ಗೊಂದಲವಾದಾಗ ಪರಸ್ಪರ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎನ್ನುತ್ತಾರೆ.
ನೃತ್ಯದಿಂದಾಗಿ ಪರಸ್ಪರ ಬೆಸೆದುಕೊಂಡಿರುವ ಶಕ್ತಿ ಮತ್ತು ಮುಕ್ತಿಗೆ ಇನ್ನೂ ಇಬ್ಬರು ಸೋದರಿಯರಿದ್ದಾರೆ. ಅವರ ಸೋದರಿ ನೀತಿ ಗಾಯಕಿಯಾಗಿದ್ದರೆ, ಮತ್ತೊಬ್ಬ ಸೋದರಿ ಕ್ರಿತಿ ಆರ್ಟಿಸ್ಟ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಾರೆ. ಹಲವು ಜನಪ್ರಿಯ ಬಾಲಿವುಡ್​ ಗೀತೆಗಳಲ್ಲಿ ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಇವರು ಡ್ಯಾನ್ಸ್​ ವಿತ್​ ಮಿ ರಿಯಾಲಿಟಿ ಶೋನ ಆ್ಯಂಖರ್​ ಮತ್ತು ಡ್ಯಾನ್ಸ್​ ಎಕ್ಸ್​​ಪರ್ಟ್ಸ್​ ಕೂಡ ಆಗಿದ್ದಾರೆ. ವೃತ್ತಿಯಲ್ಲಾಗಲಿ, ಜೀವನದಲ್ಲಾಗಲಿ ತಾವಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿರುತ್ತೇವೆ ಎನ್ನುತ್ತಾರೆ ಈ ಸೋದರಿಯರು.(ಏಜೆನ್ಸೀಸ್)
VIDEO| ‘ಈಗ ಎಲ್ಲಾ ಜೀರೋ ಆಗಿಬಿಟ್ಟಿದೆ’ – ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಾಜಿ ಸಂಸದ

‘ಸಂಸ್ಕೃತ ದಿನ’ಕ್ಕೆ ಸಂಸ್ಕೃತದಲ್ಲೇ ಟ್ವೀಟ್​ ಮಾಡಿದ ಪ್ರಧಾನಿ ಮೋದಿ!

ಭಾರತದ ದೋಣಿಗಳ ಮೇಲೆ ಕಲ್ಲು ತೂರಿದ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
