ನವದೆಹಲಿ:ದೇಶದ ವೀರ ಯೋಧರಿಗೆ ನೀಡುವ ಶೌರ್ಯ ಚಕ್ರ ಪ್ರಶಸ್ತಿ ಪ್ರಕಟವಾಗಿದ್ದು ಈ ಬಾರಿ ಆರು ಮಂದಿ ಯೋಧರು ಭಾಜನರಾಗಿದ್ದಾರೆ. ಅದರಲ್ಲಿ ಓರ್ವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ.
ಲೆಫ್ಟಿನಂಟ್​ ಕರ್ನಲ್​ ಜ್ಯೋತಿ ಲಾಮಾ, ಮೇಜರ್​ ಕೊಂಜೆಂಗ್‌ಭಾಮ್ ಬಿಜೆಂದ್ರ ಸಿಂಗ್, ನಾಯಬ್​ ಸುಬೇಧಾರ್​ ನರೇಂದ್ರ್​ ಸಿಂಗ್​, ನಾಯಕ್​ ನರೇಶ್​ ಕುಮಾರ್​ ಮತ್ತು ಸಿಪಾಯಿ ಕೆ. ಒರಾನ್​ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ನಾಳೆ (ಜ.26) ಶೌರ್ಯ ಚಕ್ರ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.
ಸುಬೇಧಾರ್​ ಸೋಂಬೀರ್​ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸೋಂಬೀರ್​ ಅವರು ಜಮ್ಮುಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದಾರೆ.
ಇನ್ನು ಸಿಪಾಯಿ ಒರಾನ್​ ಅವರು ಗಡಿ ನಿಯಂತ್ರಣಾ ರೇಖೆ ಬಳಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗ ಉಗ್ರರು ಹೊಡೆದ ಗುಂಡು ಅವರ ಬುಲೆಟ್​ ಪ್ರೂಫ್​ ಜಾಕೆಟ್​ಗೆ ಬಿದ್ದಿತ್ತು. ಆದರೆ ಧೃತಿಗೆಡದ ಒರಾನ್​, ಒಂಭತ್ತು ಗ್ರೆನೇಡ್​ಗಳನ್ನು ಉಗ್ರರೆಡೆಗೆ ಫೈರ್ ಮಾಡಿದ್ದರು. ಅವರ ದಾಳಿಗೆ ಇಬ್ಬರು ಉಗ್ರರು ಹತರಾಗಿದ್ದರು.
ಇನ್ನು ಲೆಫ್ಟಿನೆಂಟ್ ಜನರಲ್​ ಜ್ಯೋತಿ ಲಾಮಾ ಅವರು ಕಳೆದ ಜುಲೈನಲ್ಲಿ ಮಣಿಪುರದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಕ್ರಿಯ ಉಗ್ರ ಸಂಘಟನೆಗಳ 14 ಉಗ್ರರನ್ನು ಜೀವಂತ ಸೆರೆಹಿಡಿದಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಶೌರ್ಯ ಚಕ್ರ ಪ್ರದಾನ ಮಾಡಲಾಗುತ್ತಿದೆ.
ಭಾರತೀಯ ಸೇನೆಯ ಪ್ಯಾರಾಚೂಟ್​ ರೆಜಿಮೆಂಟ್​ನ (ವಿಶೇಷ ಪಡೆ) ಸುಬೇಧಾರ್​ ನರೇಂದ್ರ ಸಿಂಗ್​ ಅವರು ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರ ವಿರುದ್ಧ ಹೋರಾಡಿ ಇಬ್ಬರನ್ನು ಕೊಂದಿದ್ದಾರೆ. ಅಲ್ಲದೆ, ಓರ್ವ ಉಗ್ರ ಇವರ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ. ಈ ಉಗ್ರರು ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂದು ದಾಳಿ ಮಾಡಲು ಹೊಂಚು ಹಾಕಿದ್ದರು.
ಇವರೊಟ್ಟಿಗೆ ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ಎಸ್​.ಕೆ.ಸೈನಿ, ಉತ್ತರ ಸೇನಾ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ರಣಬೀರ ಸಿಂಗ್​ ಮತ್ತು ಅಡ್ಜಟಂಟ್​ ಜನರಲ್​ ಲೆಫ್ಟಿನೆಂಟ್​ ಜನರಲ್​ ಅರವಿಂದ್​ ದತ್ತಾ ಸೇರಿ ಒಟ್ಟು 19 ಅಧಿಕಾರಿಗಳು ಪರಮ ವಿಶಿಷ್ಟ ಸೇವಾ ಪದಕವನ್ನು ಪಡೆಯಲಿದ್ದಾರೆ.
ನಾಲ್ವರು ಸೇನಾ ಅಧಿಕಾರಿಗಳು ಹಾಗೂ 104 ಸೇನಾ ಸಿಬ್ಬಂದಿ ಆರ್ಮಿ ಶೌರ್ಯ ಮೆಡಲ್​ ಸ್ವೀಕರಿಸಲಿದ್ದಾರೆ.ಕಾರ್ಗಿಲ್​ ಯುದ್ಧದ ಹೀರೋಗಳಾದ ಲೆಫ್ಟಿನೆಂಟ್​ ಜನರಲ್​ ವೈ.ಕೆ.ಜೋಶಿ, 15 ಕಾರ್ಪ್ಸ್​ನ ಕಮಾಂಡರ್​ ಕೆ.ಜೆ.ಧಿಲ್ಲಾನ್​, 3 ಕಾರ್ಪ್ಸ್​ ಕಮಾಂಡರ್​ ರಾಜೀವ್​ ಸಿರೋಹಿ ಮತ್ತು 16 ಕಾರ್ಪ್ಸ್​ನ ಮಾಜಿ ಮುಖ್ಯಸ್ಥ ಪರಮಜಿತ್​ ಸಿಂಗ್​ ಅವರು ಅತ್ಯುತ್ತಮ ಯುದ್ಧ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.(ಏಜೆನ್ಸೀಸ್​)ಶೌರ್ಯ ಚಕ್ರ, ಅತ್ಯುತ್ತಮ ಯುದ್ಧ ಸೇವಾ ಪದಕ, ಯೋಧರು, Soldiers, Shaurya Chakra, Republic Day,
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 5 =
Remember me
