ಚೆನ್ನೈ :ಲಾಕ್​ಡೌನ್​ನಿಂದಾಗಿ ಮದ್ಯ ಮಾರಾಟ ನಿಂತಿರುವ ತಮಿಳುನಾಡಿನಲ್ಲಿ, ಯಥೇಚ್ಛವಾಗಿ ಸಿಗುತ್ತಿರುವ ಹ್ಯಾಂಡ್​ ಸ್ಯಾನಿಟೈಸರ್​​ನಿಂದ ಹೆಂಡ ತಯಾರಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಕುಡ್ಡಲೋರ್ ಜಿಲ್ಲೆಯ ರಾಮನಾಥನ್ ಕುಪ್ಪಂ ಎಂಬಲ್ಲಿ ಈ ಪ್ರಸಂಗ ನಡೆದಿದ್ದು, ಈ ಸಂಬಂಧ 6 ಜನರನ್ನು ಬಂಧಿಸಲಾಗಿದೆ.
ನಿನ್ನೆ ಸಿಕ್ಕ ಖಚಿತ ಮಾಹಿತಿಯ ಪ್ರಕಾರ ಕುಡ್ಡಲೋರ್ ಪೊಲೀಸರು ನಡೆಸಿದ ದಾಳಿಯಲ್ಲಿ ಆರು ಜನ ಸ್ಯಾನಿಟೈಸರ್​​ನಿಂದ ಅಕ್ರಮವಾಗಿ ಆಲ್ಕೊಹಾಲ್ ಉತ್ಪಾದಿಸುವ ಪ್ರಯತ್ನದಲ್ಲಿದ್ದುದು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯವರ ತಪಾಸಣೆಯ ನಂತರ ಆರೋಪಿಗಳು ಉಪಯೋಗಿಸುತ್ತಿದ್ದ ಕಚ್ಚಾ ಸಾಮಗ್ರಿ ಸ್ಯಾನಿಟೈಸರೇ ಎಂದು ಖಾತ್ರಿಯಾಗಿದೆ.
ಇದನ್ನೂ ಓದಿ:ಟೆಸ್ಟಿಂಗ್ ಕಡಿಮೆ ಮಾಡಲು ಯಾವುದೇ ಆದೇಶ ಹೊರಡಿಸಿಲ್ಲ : ಸಚಿವ ಅಶೋಕ್
ಆರೋಪಿಗಳಿಂದ 300 ಲೀಟರ್ ಹ್ಯಾಂಡ್​ ಸ್ಯಾನಿಟೈಸರ್​, ಖಾಲಿ ಬಾಟಲಿಗಳು ಮತ್ತು ಒಂದು ಟಾಟಾ ಏಸ್​ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ತಮಿಳುನಾಡು ಸರ್ಕಾರ ಮೇ 24 ರವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ವಿಧಿಸಿದ್ದು, ಟಾಸ್ಮಾಕ್ ಎಂದು ಕರೆಯಲ್ಪಡುವ ಸರ್ಕಾರಿ ಮದ್ಯದಂಗಡಿಗಳೂ ಮುಚ್ಚಲ್ಪಟ್ಟಿವೆ ಎನ್ನಲಾಗಿದೆ.(ಏಜೆನ್ಸೀಸ್)
ಚಿಂಕಾರ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರ ಬಂಧನ

ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × 3 =
Remember me
