ಪ್ರತಾಪಗಢ :ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಮಾಣಿಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಕ್ಕಳು ಸೇರಿ 14 ಜನ ಮೃತಪಟ್ಟಿದ್ದಾರೆ. ಕೆಲವು ಗಾಯಗೊಂಡಿದ್ದಾರೆ.
ಪ್ರಯಾಗ್​ರಾಜ್​ – ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇಶ್​ರಾಜ್​ ಕಾ ಇನಾರಾ ಗ್ರಾಮದ ಸಮೀಪ ಗುರುವಾರ ತಡರಾತ್ರಿ ರಸ್ತೆ ಬದಿ ನಿಂತಿದ್ದ ಟ್ರಕ್​​​ಗೆ ಎಸ್​ಯುವಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಎಸ್​ಯುವಿ ಚಾಲಕನಿಗೆ ನಿಂತಿದ್ದ ಟ್ರಕ್ ಕಾಣಿಸದೇ ಹೋದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಊಹಿಸಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಅಸೀಮ ಸಾಧಕಿ ಸೀಮಾಗೆ ಬಡ್ತಿ – ಕಾಣೆಯಾದ 76 ಮಕ್ಕಳನ್ನು ಪತ್ತೆ ಮಾಡಿದ ಪೊಲೀಸ್
ಮೃತರನ್ನು ದಿನೇಶ್ ಕುಮಾರ್ (40), ಪವನ್ ಕುಮಾರ್ (10) ದಯಾರಾಮ್​ (40), ಅಮನ್ (7), ರಾಮ್​ಸಮುಜ್​ (40), ಅಂಶ್​ (9), ಗೌರವ್ ಕುಮಾರ್ (10), ನಾನ್ ಭೈಯಾ (55), ಸಚಿನ್ (12), ಹಿಮಾಂಶು (12), ಮಿಥಿಲೇಶ್​ ಕುಮಾರ್ (17), ಅಭಿಮನ್ಯು (28), ಪ್ರಶಾಂತ್ (40), ಬೊಲೆರೋ ಚಾಲಕ ಬಬ್ಲು (22) ಎಂದು ಗುರುತಿಸಲಾಗಿದೆ. ಚಾಲಕ ಮತ್ತು ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಜಿಗ್ರಪುರ ಗ್ರಾಮದವರು. ಇವರೆಲ್ಲ ಶೇಖಪುರ ಗ್ರಾಮಕ್ಕೆ ವಿವಾಹ ಸಮಾರಂಭಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. (ಏಜೆನ್ಸೀಸ್)
ಸೆನ್ಸೆಕ್ಸ್ 250 ಪಾಯಿಂಟ್ ಜಂಪ್​, ನಿಫ್ಟಿ 12,800ರ ಮೇಲಕ್ಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − five =
Remember me
