ಇಂಫಾಲ:ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್​ ಹೈಕಮಾಂಡ್​ ರಾಜಸ್ಥಾನದಲ್ಲಿ ಉಂಟಾಗಿದ್ದ ಬಿಕ್ಕಟ್ಟಿಗೆ ತೇಪೆ ಹಚ್ಚಿದೆ. ಆದರೆ, ಅತ್ತ ಅಧಿವೇಶನ ನಡೆದ ಮಣಿಪುರದಲ್ಲಿ ಕೈ ಇಬ್ಭಾಗವಾಗಿದೆ…!
ಕಾಂಗ್ರೆಸ್​ನ ಆರು ಶಾಸಕರು ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ಪಕ್ಷಕ್ಕೂ ಗುಡ್​ಬೈ ಹೇಳಿದ್ದಾರೆ. ಮಂಗಳವಾರ ಸ್ಪೀಕರ್​ ಯಮ್ನಾಮ್​ ಖೇಮ್​ಚಂದ್​ಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಮಣಿಪುರ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಹರೇಶ್ವರ್​ ಗೋಸ್ವಾಮಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ನಡೆದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್​ನ ಎಂಟು ಶಾಸಕರು ಗೈರು ಹಾಜರಾಗಿ ಪಕ್ಷದ ವಿಪ್​ ಉಲ್ಲಂಘಿಸಿದ್ದರು. ಈ ಪೈಕಿ ಆರು ಸದಸ್ಯರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ;ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ; ಸುಪ್ರೀಂ ಕೋರ್ಟ್​ ತೀರ್ಪು
ವಿಧಾನಸಭೆಯಲ್ಲಿ 28 ಶಾಸಕರ ಬಲದೊಂದಿಗೆ ಸಿಎಂ ಎನ್​. ಬಿರೇನ್​ ಸಿಂಗ್​ ನೇತೃತ್ವದ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಜಯಗಳಿಸಿತ್ತು. 60 ಸದಸ್ಯ ಬಲದ ಸದನದಲ್ಲಿ ನಾಲ್ವರು ಕಾಂಗ್ರೆಸ್​ ಸದಸ್ಯರ ಅನರ್ಹಗೊಂಡಿದ್ದರೆ, ಮೂವರು ಬಿಜೆಪಿ ಸದಸ್ಯರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್​ ಶಾಸಕರಲ್ಲಿ ಮಾಜಿ ಸಿಎಂ ಇಬೋಬಿ ಸಿಂಗ್​ ಸಂಬಂಧಿ ಓಕ್ರಂ ಹೆನ್ರಿ ಸಿಂಗ್​ ಕೂಡ ಸೇರಿದ್ದಾರೆ. ಓಯಿನಾಮ್​ ಲುಖೋಯಿ, ಮಹಮ್ಮದ್​ ಅಬ್ದುಲ್​ ನಾಸೀರ್​, ಪಾವೋನಾಂ ಬ್ರೊಜೆನ್​, ನಾಮ್​ಥಾಂಗ್​ ಹಾವೋಕಿಪ್​ ಹಾಗೂ ಗಿನ್​ಸುವಾನ್​ಹಾವ್​ ಕಾಂಗ್ರೆಸ್​ ತೊರೆದಿದ್ದಾರೆ. ಈ ಪೈಕಿ ಐವರ ರಾಜೀನಾಮೆ ಸ್ವೀಕಾರವಾಗಿದೆ. ಸದನದಿಂದ ದೂರವುಳಿದ ಇನ್ನಿಬ್ಬರು ಸದಸ್ಯರು ಹೋಮ್​ ಕ್ವಾರಂಟೈನ್​ನಲ್ಲಿ ಇರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಎಂದು ಸ್ಪೀಕರ್​ ತಿಳಿಸಿದ್ದಾರೆ.
ಇದನ್ನೂ ಓದಿ;ಮಣಿಪುರದಲ್ಲಿ ವಿಶ್ವಾಸಮತ ವೇಳೆ ಕಾಂಗ್ರೆಸ್​ ಶಾಸಕರೇ ಕೈಕೊಟ್ಟರು; ಗೆಲುವು ಸಾಧಿಸಿದ ಬಿಜೆಪಿ
ಇವರೆಲ್ಲ ಮಾಜಿ ಸಿಎಂ ಇಬೋಬಿ ಸಿಂಗ್​ ನೇತೃತ್ವದ ವಿರುದ್ಧ ಸಿಡಿದೆದ್ದು ರಾಜೀನಾಮೆ ಸಲ್ಲಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ 24 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್​ 16 ಶಾಸಕರನ್ನು ತನ್ನೊಂದಿಗೆ ಉಳಿಸಿಕೊಂಡಿದ್ದರೆ, 18 ಸ್ಥಾನದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆಯಲ್ಲಿ ಭದ್ರವಾಗಿದೆ.
ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
