ಕೊಚ್ಚಿ:ಮನಕಲಕುವ ಘಟನೆಯೊಂದರಲ್ಲಿ ಕೇರಳದ ಕಣ್ಣೂರು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನರ್ಸ್​ ದುರಂತ ಅಂತ್ಯ ಕಂಡಿದ್ದಾರೆ. ಆರು ತಿಂಗಳು ಗರ್ಭಿಣಿಯಾಗಿದ್ದ ನರ್ಸ್ ದಿವ್ಯಾ ಜಾರ್ಜ್​ (27) ಬುಧವಾರ ಬೆಳಗ್ಗೆ 7 ಗಂಟೆಗೆ ತಮ್ಮ ಮನೆ ಸಮೀಪದ ಬಸ್​ ನಿಲ್ದಾಣದಲ್ಲಿ ಬೋರ್ಡಿಂಗ್​ ಬಸ್​ಗಾಗಿ ಕಾಯುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ದಿವ್ಯಾ ಕಣ್ಣೂರಿನ ಆಸ್ತರ್​ ಮಿಮ್ಸ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಸಹ ತನ್ನ ಕೆಲಸಕ್ಕೆ ಹೊರಡಲು ತಯಾರಾದ ದಿವ್ಯಾ, ಬೆಳಗ್ಗೆ ಏಳು ಗಂಟೆಗೆ ತಮ್ಮ ಮನೆ ಸಮೀಪದ ಬಸ್​ ನಿಲ್ದಾಣಲದಲ್ಲಿ ಬೋರ್ಡಿಂಗ್​ ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಆಗಮಿಸಿದ ಬಸ್​ಗೆ ನಿಲ್ಲಿಸಿ ಎಂದು ದಿವ್ಯಾ ಕೈ ತೋರಿದರು. ಆದರೆ, ಬಸ್​ ಸ್ವಲ್ಪ ದೂರದಲ್ಲಿ ಹೋಗಿ ನಿಂತಿತು. ಬಳಿಕ ಬಸ್ಸನ್ನೇರಲು ದಿವ್ಯಾ ಓಡುವಾಗ ಕಾಲು ಸ್ಲಿಪ್​ ಆಗಿ ಕೆಳಗೆ ರಸ್ತೆ ಮೇಲೆ ಬಿದ್ದಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ ಆಕೆಯನ್ನು ಆಸ್ಪತ್ರೆಗೆ ತರುವಷ್ಟರಲ್ಲೇ ಮೃತಪಟ್ಟಿದ್ದಾಳೆಂದು ವೈದ್ಯರು ದೃಢಪಡಿಸಿದರು.
ಇದನ್ನೂ ಓದಿ:ವಧುವಿನ ಕೆನ್ನೆಗೆ ಚುಂಬಿಸುತ್ತಿರುವುದು ಮೌಲ್ವಿಯಲ್ಲ: ವೈರಲ್​ ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!
ದುರಾದೃಷ್ಟಕರವೆಂದರೆ ಪ್ರತಿದಿನ ಬಸ್​ ನಿಲ್ದಾಣಕ್ಕೆ ದಿವ್ಯಾರನ್ನು ಡ್ರಾಪ್​ ಮಾಡುವ ಪತಿ ವಿನು ಅವರ ಕಣ್ಣೆದುರಲ್ಲೇ ಈ ದುರ್ಘಟನೆ ನಡೆದಿದೆ. ಬಿದ್ದ ಕೂಡಲೇ ರಸ್ತೆಗೆ ತಲೆ ಡಿಕ್ಕಿ ಹೊಡೆದೋ? ಅಥವಾ ಬಸ್​ನ ಕೆಲ ಭಾಗ ಆಕೆಗೆ ಡಿಕ್ಕಿ ಆಗಿಯೋ? ಸಾವಿಗೀಡಾದಳಾ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ, ತಲೆಗೆ ಆಗಿರುವ ಗಂಭೀರ ಗಾಯದಿಂದಲೇ ಆಕೆ ಮೃತಪಟ್ಟಿದ್ದಾಳೆಂದು ನಂಬಲಾಗಿದೆ. ಆದರೆ, ತಲೆ ಗಾಯ ಹೇಗಾಯಿತು ಎಂಬುದಿನ್ನು ಸ್ಪಷ್ಟವಾಗಿಲ್ಲ ಎಂದು ಪೆರವೂರ್​ ಠಾಣಾ ಪೊಲೀಸರು ತಿಳಿಸಿದ್ದಾರೆ.
ದಿವ್ಯಾ ಬಿದ್ದ ಕೂಡಲೇ ಸ್ಥಳೀಯರ ನೆರವಿನಿಂದ ವಿನು ಪತ್ನಿಯನ್ನು ಆಸ್ತರ್​ ಮಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಲು ಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಘಟನಾ ಸಮೀಪದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ಸಾವಿಗೆ ಕಾರಣ ಏನೆಂಬುದನ್ನು ಹುಡುಕುತ್ತಿದ್ದಾರೆ. ದಿವ್ಯಾ ಮೃತದೇಹವನ್ನು ಪೆರಿಯಾರಮ್​ ಮೆಡಿಕಲ್​ ಕಾಲೇಜಿನಲ್ಲಿ ಇಡಲಾಗಿದ್ದು, ಕೋವಿಡ್​ 19 ಪರೀಕ್ಷೆ ಮಾಡಿದ ಬಳಿಕ ಶವಸಂಸ್ಕಾರ ನಡೆಯಲಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಕಂಪನಿಯೊಂದರ ಮೇಲೆ ದಾಳಿ ಮಾಡಿದ ಎಸಿಬಿಗೆ ಸಿಕ್ತು ರಾಶಿ ರಾಶಿ ಹಣ: ಅದೆಲ್ಲವೂ ಭ್ರಷ್ಟಾಚಾರದ ರಾಣಿಗೆ ಸೇರಿದ್ದು!
ಪಬ್​ಜಿ ಬ್ಯಾನ್​ ಆದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹರಿದುಬಂದ ಮೀಮ್ಸ್​ ನೋಡಿದ್ರೆ ನೀವು ನಗದೇ ಇರಲಾರಿರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 13 =
Remember me
