ಹೈದರಾಬಾದ್​:ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಸೇರಿದಂತೆ ಆರು ಮಂದಿ ತೆಲಂಗಾಣ ಪೊಲೀಸರು ಕಂಠಪೂರ್ತಿ ಕುಡಿದು ನಾಗಿನ್ ಅಥವಾ ನಾಗನೃತ್ಯ ಮಾಡುವ ವಿಡಿಯೋವೊಂದು ವೈರಲ್​ ಆಗಿ, ಇದೀಗ ಪೊಲೀಸರಿಗೆ ಸಂಕಷ್ಟ ಎದುರಾಗಿದ್ದು, ಕಾನೂನು ಕ್ರಮ ಎದುರಿಸುವಂತಾಗಿದೆ. ​​
ಸಮವಸ್ತ್ರದಲ್ಲಿ ಇರದ ಪೊಲೀಸ್​ ಸಿಬ್ಬಂದಿ ಮದುವೆ ಕಾರ್ಯವೊಂದಕ್ಕೆ ಭಾಗಿಯಾಗಿದ್ದ ಸಂದರ್ಭದಲ್ಲಿ ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಆ ಸಮಯದಲ್ಲಿ ಅವರು ಕರ್ತವ್ಯದಲ್ಲಿದ್ದರಾ ಎಂದು ಸ್ಪಷ್ಟವಾಗಿಲ್ಲ.
ವೈರಲ್​ ಆಗಿರುವ ವಿಡಿಯೋದಲ್ಲಿ ಪಾನಮತ್ತ ಸ್ಥಿತಿಯಲ್ಲಿರುವ ಪೊಲೀಸ್​ ಸಿಬ್ಬಂದಿ ಕಾರಿನಲ್ಲಿ ಜೋರು ಧ್ವನಿಯಲ್ಲಿ ಹಾಡೊಂದನ್ನು ಪ್ಲೇ ಮಾಡಿ, ನೆಲದ ಮೇಲೆಲ್ಲಾ ಹೊರಳಾಡಿ ನಾಗಿನ್​ ಡ್ಯಾನ್ಸ್​ ಮಾಡಿದ್ದಾರೆ. ಕೈಯಲ್ಲಿ ಬಿಯರ್​ ಬಾಟಲ್​ ಕೂಡ ಹಿಡಿದಿದ್ದಾರೆ.
ಈ ವಿಡಿಯೋವನ್ನು ಸೈಬರ್​ಬಾದ್​ ಪೊಲೀಸರಿಗೆ ಅಟ್ಯಾಚ್​ ಮಾಡಲಾಡಿದ್ದು, ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗಿದೆ. ಈಗಾಗಲೇ ವಿಡಿಯೋ ಸಂಬಂಧ ವರದಿಯನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.
ಮಾಧ್ಯಮ ವರದಿಯ ಪ್ರಕಾರ ವಿಡಿಯೋದಲ್ಲಿರುವವರು ಕೊತ್ತೂರು ಪೊಲೀಸ್​ ಠಾಣೆಯ ಸಿಬ್ಬಂದಿಯಾಗಿದ್ದಾರೆ. ತಮ್ಮ ಸಹದ್ಯೋಗಿಯ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಘಟನೆ ಕಳೆದ ವಾರ ನಡೆದಿದೆ ಎನ್ನಲಾಗಿದೆ.
ವಿಡಿಯೋದಲ್ಲಿರುವವರನ್ನು ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಬಾಲಾ ಸ್ವಾಮಿ ಮತ್ತು ಕಾನ್​ಸ್ಟೇಬಲ್​ಗಳಾದ ಅಶೋಕ್​ ರೆಡ್ಡಿ, ಚಂದ್ರಮೋಹನ್​, ಅಮರ್​ನಾಥ್​, ವೆಂಕಟೇಶ್​ ಗೌಡ ಮತ್ತು ಹೋಮ್​ಗಾರ್ಡ್​ ರಾಮಕೃಷ್ಣ ರೆಡ್ಡಿ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ತೆಲಂಗಾಣದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುವುದು ಅಪರಾಧ. ತಪ್ಪಿತಸ್ಥರು ಎಂದು ಪರಿಗಣಿಸಿದ್ದಲ್ಲಿ ಅವರಿಗೆ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ.(ಏಜೆನ್ಸೀಸ್​)
This video was shot while cops were purportedly dancing and drinking openly.pic.twitter.com/xI7Nz0qqUX
— CharanTeja (@CharanT16)March 1, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
