ಜಮ್ಮು: ಪಾಕಿಸ್ಥಾನ ಮೂಲದ ಜೈಷ್ ಏ ಮೊಹಮ್ಮದ್​ (ಜೆಇಎಂ)ಗೆ ಸೇರಿದ ಉಗ್ರ ನೆಲೆಯೊಂದನ್ನು ರಕ್ಷಣಾ ಪಡೆ ನಾಶಗೊಳಿಸಿದ್ದು, ಆರು ಉಗ್ರ ಸಹಚರರನ್ನು ಬಂಧಿಸಿದೆ. ಈ ಸಹಚರರು ಸಕ್ರಿಯ ಉಗ್ರರಿಗೆ ಹಣ, ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಡ್ರಗ್ಸ್​ ವ್ಯವಹಾರಗಳನ್ನು ಮಾಡುವವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!
ಬಂಧಿತರನ್ನು ಕ್ರಲ್​ಪೋರಾದ ಮುದಾಸ್ಸಿರ್ ಫಯಾಜ್, ವತೂರಾದ ಶಬೀರ್ ಗನಿಯೆ, ಕುಪ್ವಾರಾದ ಸಗೀರ್​ ಅಹಮದ್​ ಪೊಸ್ವಾಲ್​, ಶೋಪಿಯಾನ್​ನ ಇಸಾಕ್ ಭಟ್​, ಅರ್ಷಿದ್ ಥೋಕರ್​ ಮತ್ತು ಚಾದೂರ ಪ್ರದೇಶದ ಬಾಲಕ ಎಂದು ಗುರುತಿಸಲಾಗಿದೆ. ​ಬಂಧಿತರು ಪಾಕಿಸ್ಥಾನಿ ಮೂಲದವರ ಜತೆಗೆ ಸಂಪರ್ಕದಲ್ಲಿದ್ದು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದವರು. ಸಕ್ರಿಯ ಉಗ್ರರಿಗೆ ಎಲ್ಲ ರೀತಿಯ ನೆರವನ್ನೂ ಇವರು ಕೊಡುತ್ತಿದ್ದರು. ಬಂಧಿತರ ವಿಚಾರಣೆ ನಂತರದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕರೊನಾಘಾತದ ನಡುವೆಯೇ 100ಕಿ.ಮೀ ವೇಗದಲ್ಲಿ ನುಗ್ಗುತಿದೆ ‘ನಿಸರ್ಗ’: ಮುಂಬೈನಲ್ಲಿ ನಡುಕ
ವಿಶ್ವಾಸಾರ್ಹ ಮಾಹಿತಿ ಆಧರಿಸಿ ಪೊಲೀಸರು, ಸೇನೆ ಮತ್ತು ಸಿಆರ್​ಪಿಎಫ್​ನ ಜಂಟಿ ಕಾರ್ಯಪಡೆ ಈ ಕಾರ್ಯಾಚರಣೆಯನ್ನು ನಡೆಸಿತ್ತು. ಬದ್ಗಾಮ್​ನ ಚಾದೂರಾ ಪ್ರದೇಶದಲ್ಲಿ ಈ ಉಗ್ರ ಸಹಚರರನ್ನು ಬಂಧಿಸಿದ್ದು ಅವರಿಂದ ಒಂದು ಚೀನಿ ಪಿಸ್ತೂಲ್​, ಹ್ಯಾಂಡ್​ ಗ್ರೆನೇಡ್​, ಒಂದು ಕಿಲೋ ಹೆರಾಯಿನ್ ವಶಪಡಿಸಿಕೊಂಡಿದೆ. (ಏಜೆನ್ಸೀಸ್)
FULL DETAILS | ಸೈಕ್ಲೋನ್​ಗೆ ಹೆಸರಿಡೋದು ಯಾರು, ಹೇಗೆ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × one =
Remember me
