ಭೋಪಾಲ್:ಈಗ ಎಲ್ಲೆಲ್ಲೂ ಲಾಕ್‌ಡೌನ್‌. ಕರೊನಾ ವೈರಸ್‌ ಭೀತಿಯಿಂದ ಲಾಕ್‌ಡೌನ್‌ ಉಲ್ಲಂಘಿಸಬೇಡಿ, ಹೊರಗಡೆ ಹೋಗಬೇಡಿ ಎಂದರೂ ಕೆಲವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದೇ ಇಲ್ಲ. ಅದೇ ಇನ್ನೊಂದೆಡೆ, ಕೆಲವೊಂದು ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಡದೇ ಇದ್ದರೂ ಅದನ್ನು ಉಲ್ಲಂಘಿಸುವವರೂ ಇದ್ದಾರೆ!ಆದರೆ ನಮಗೇನೂ ಆಗುವುದಿಲ್ಲ ಎಂದುಕೊಂಡು ಕಳ್ಳವ್ಯವಹಾರದಲ್ಲಿ ಮಾಡಬಾರದ್ದು ಮಾಡಿ ಈಗ ಫಜೀತಿಗೆ ಸಿಲುಕಿಕೊಂಡಿದ್ದಾರೆ ಮಧ್ಯಪ್ರದೇಶದ ಭೋಪಾಲ್‌ನ ಆರು ವ್ಯಕ್ತಿಗಳು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೇರ್‌ ಕಟಿಂಗ್‌ ಶಾಪ್‌ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಇದನ್ನು ಉಲ್ಲಂಘಿಸಿ ಭೋಪಾಲ್‌ನ ಖಾರ್ಗೋನ್‌ ಗ್ರಾಮದಲ್ಲಿ ಹೇರ್‌ ಕಟಿಂಗ್‌ ಶಾಪ್‌ ಒಂದನ್ನು ತೆರೆಯಲಾಗಿತ್ತು.ಅನೇಕ ದಿನಗಳಿಂದ ಕೂದಲನ್ನು ಕಟ್‌ ಮಾಡಿಸದ ಆರು ಮಂದಿ, ಈ ಕ್ಷೌರಿಕನ ಅಂಗಡಿಗೆ ಹೋಗಿಯೇ ಬಿಟ್ಟರು. ತಮಗೇನು ಆಗುವುದಿಲ್ಲ ಎನ್ನುವ ಗ್ಯಾರೆಂಟಿ ಮೇಲೆ ಹೋಗಿ ಕೂದಲನ್ನು ಕತ್ತರಿಸಿಕೊಂಡು ಬಂದದ್ದೂ ಆಯ್ತು, ನೀಟಾಗಿ ಶೇವಿಂಗ್‌ ಕೂಡ ಮಾಡಿಕೊಂಡಾಯ್ತು. ಈಗೇನಾಗಿದೆ ಗೊತ್ತಾ? ಆ ಆರು ಮಂದಿ ವಾಸವಾಗಿರುವ ಖಾರ್ಗೋನ್‌ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ! ಕಾರಣ ಇಷ್ಟೇ.ಅಂಗಡಿಗೆ ಹೋಗಿರುವ ಆರೂ ಮಂದಿಯಲ್ಲಿಯೂ ಕರೊನಾ ಸೋಂಕು ಕಾಣಿಸಿಕೊಂಡಿದೆ!ಅಷ್ಟಕ್ಕೂ ಈ ಆರೂ ಮಂದಿ ಚೆನ್ನಾಗಿಯೇ ಇದ್ದವರು, ಹಾಗಂತ ಕ್ಷೌರಿಕನಿಗೂ ಸೋಂಕು ಇರಲಿಲ್ಲ. ಆದರೆ ಕ್ಷೌರಿಕ ಮಾಡಿದ ಎಡವಟ್ಟಿನಿಂದ ಎಲ್ಲರೂ ಸೋಂಕುಪೀಡಿತರಾಗಿದ್ದಾರೆ ಈಗ. ಈ ಆರೂ ಮಂದಿ ಹೋಗುವ ಮೊದಲು ಇಂದೋರ್‌ನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೇ ಹೇರ್‌ಕಟ್ಟಿಂಗ‌ ಶಾಪ್‌ಗೆ ಬಂದು ಹೋಗಿದ್ದಾನೆ. ಅವರು ಕರೊನಾ ಸೋಂಕಿತ. ಅವನಿಗೆ ಹೇರ್‌ಕಟ್‌ ಮಾಡಿದ ಬಟ್ಟೆಯನ್ನೇ ಕ್ಷೌರಿಕ ಈ ಆರೂ ಮಂದಿಗೂ ಹಾಕಿದ್ದಾನೆ!ಹೇರ್‌ ಕಟಿಂಗ್‌ ಮಾಡಿಸಿಕೊಂಡು ಹೋದ ನಂತರ ಇವರಿಗೆ ಜ್ವರ, ಉಸಿರಾಟದ ಸಮಸ್ಯೆ ಎಲ್ಲವೂ ಕಾಣಿಸಿಕೊಂಡಿದೆ. ಪರೀಕ್ಷಿಸಿದಾಗ ಎಲ್ಲರಲ್ಲಿಯೂ ಸೋಂಕು ಪತ್ತೆಯಾಗಿದೆ. ಆದ್ದರಿಂದ ಖಾರ್ಗೋನ್‌ ಗ್ರಾಮವನ್ನು ಸೀಲ್‌ಡೌನ‌ ಮಾಡಲಾಗಿದೆ. ಕ್ಷೌರಿಕನನ್ನು ಪರೀಕ್ಷೆ ಮಾಡಲಾಗಿದ್ದು, ಸದ್ಯ ಅವನಲ್ಲಿ ಸೋಂಕು ಪತ್ತೆಯಾಗಿಲ್ಲ ಎನ್ನಲಾಗಿದೆ. ಇವನ ಬಳಿ ಇನ್ನೂ 12 ಮಂದಿ ಕ್ಷೌರ ಮಾಡಿಸಿಕೊಂಡಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ.(ಏಜೆನ್ಸೀಸ್‌)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − two =
Remember me
