ವಿಶಾಖಪಟ್ಟಣ:ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 488 ಅಂಕಗಳನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇದೇನಪ್ಪಾ 6ನೇ ತರಗತಿ ವಿದ್ಯಾರ್ಥಿನಿ 10ನೇ ತರಗತಿ ಪರೀಕ್ಷೆ ಬರೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು. ಆದರೆ, ನೀವು ಕೇಳುತ್ತಿರುವುದು ಸತ್ಯ.
ಈ ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿನಿ ಹೆಸರು ಹೇಮಶ್ರಿ. ಈಕೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಗಾಂಧಿನಗರ ಗ್ರಾಮದ ಮುಪ್ಪಾಳ ಸುರೇಶ್​ ಮತ್ತು ಮಣಿ ದಂಪತಿಯ ಪುತ್ರಿ. ಮಹಾತ್ಮ ಗಾಂಧಿ ಹೈಸ್ಕೂಲ್​ನಲ್ಲಿ ಹೇಮಶ್ರೀ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.
ಇದನ್ನೂ ಓದಿ:ಅತಂತ್ರ ಸರ್ಕಾರ ರಚನೆಗೆ ಅವಕಾಶ ಕೊಡದೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ: ಜೆಡಿಎಸ್ ಎಂಎಲ್‌ಸಿ ಮರಿತಿಬ್ಬೇಗೌಡ ಮನವಿ
ಬಾಲ್ಯದಿಂದಲೂ ಕಲಿಕೆ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಹೇಮಶ್ರೀ, ತನ್ನ ತರಗತಿ ಕಲಿಕಾ ವ್ಯಾಪ್ತಿಗಿಂತ ಹೆಚ್ಚಿನದ್ದನ್ನು ಕಲಿಯಲು ಸದಾ ಹಂಬಲಿಸುತ್ತಾಳೆ. ತರಗತಿಯಲ್ಲಿ ಎಲ್ಲರಿಗಿಂತ ಮುಂದಿರುವ ಹೇಮಶ್ರೀ ಇತರೆ ತರಗತಿಯ ವಿಷಯಗಳನ್ನು ತಿಳಿದುಕೊಂಡಿದ್ದು, ಆಕೆಯ ಮೆಮೊರಿ ಪವರ್​ಗೆ ಶಾಲೆಯ ಆಡಳಿತ ಮಂಡಳಿ ಫಿದಾ ಆಗಿದ್ದು, ಆಕೆಯ ಪ್ರತಿಭೆಯನ್ನು ಶಿಕ್ಷಣ ಇಲಾಖೆಯ ಗನ್ಯ ವ್ಯಕ್ತಿಗಳ ಗಮನಕ್ಕೆ ತಂದಿದ್ದರು.
ಈ ವರ್ಷದ ಮಾರ್ಚ್​ 27ರಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪ್ರಕಾಶ್ ಅವರು ಹೇಮಶ್ರೀ ಅವರ ಬುದ್ಧಿಮತ್ತೆಯನ್ನು ಪರೀಕ್ಷಿಸಿದರು. ಅವರು ಕೂಡ ಹೇಮಶ್ರೀ ಪ್ರತಿಭೆ ಕಂಡು ಆಶ್ಚರ್ಯಚಕಿತರಾದರು. ಆಕೆಯ ಪ್ರತಿಭೆಯನ್ನು ಶ್ಲಾಘಿಸಿದ ಪ್ರವೀಣ್​ ಪ್ರಕಾಶ್​ ಅವರು ಆಕೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಹೇಮಶ್ರೀ ತನ್ನ ಪ್ರತಿಭೆಯನ್ನು ತೋರಿದ್ದು, ಶನಿವಾರ (ಮೇ.6) ಪ್ರಕಟಗೊಂಡ ಫಲಿತಾಂಶದಲ್ಲಿ 488 ಅಂಕಗಳನ್ನು ಗಳಿಸಿದ್ದಾಳೆ.
ಇದನ್ನೂ ಓದಿ:ಗರ್ಲ್​ಫ್ರೆಂಡ್​ ಮಲಗಿದ ಬಳಿಕ ಮತ್ತೊಂದು ಯುವತಿ ಮೇಲೆ ಕಣ್ಣು: ಪ್ಯಾಂಟ್​ ಜಿಪ್​ ಓಪನ್, ಸಿಕ್ಕಿಬಿದ್ದ ಯುವಕ
ಆಂಧ್ರ ಪ್ರದೇಶದ 10ನೇ ತರಗತಿ ಫಲಿತಾಂಶದಲ್ಲಿ ಶೇ. 72.26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 6,050,52 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 4,37,196 ಮಂದಿ ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 2,14,220 (ಶೇ 69.27) ಹುಡುಗರು ಉತ್ತೀರ್ಣರಾಗಿದ್ದರೆ, 2,22,976 (ಶೇ 75.38) ಹುಡುಗಿಯರು ತೇರ್ಗಡೆ ಹೊಂದಿದ್ದಾರೆ. ಪಾರ್ವತಿಪುರಂ ಮಾನ್ಯಂ ಜಿಲ್ಲೆ ಶೇ.87.47ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಶೇ. 60.39 ಫಲಿತಾಂಶದೊಂದಿಗೆ ನಂದ್ಯಾಲ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.(ಏಜೆನ್ಸೀಸ್​)
ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ: ಮಣಿಕಂಠ ರಾಠೋಡ್ ಹಾಗೂ ಅಣ್ಣಾಮಲೈ ವಿರುದ್ಧ ವಾಗ್ದಾಳಿ

LIVE| ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ರೋಡ್​ ಶೋ ಆರಂಭಿಸಿದ ಮೋದಿ: ನೇರಪ್ರಸಾರ ಇಲ್ಲಿದೆ…

ಬೇಸರದಲ್ಲಿ ಮಾಜಿ ಸಂಸದೆ ರಮ್ಯಾ; ನಟಿಯ ಮುದ್ದಿನ ‘ಚಾಂಪ್’ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
