ಭುವನೇಶ್ವರ: ವಾಡಿಕೆಗೆ ವಿರುದ್ಧವಾಗಿ ಪ್ರಸಿದ್ಧ ಜಗನ್ನಾಥ ದೇವಾಲಯದ ವಾರ್ಷಿಕ ರಥೋತ್ಸವದಲ್ಲಿ ಭಾಗಿಯಾದ ಮೂರು ಬೃಹತ್​ ರಥಗಳನ್ನು ಬಿಚ್ಚಿಡದಿರಲು ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಷನ್ ತೀರ್ಮಾನಿಸಿದೆ. ಭಗವಾನ್ ಬಾಲಬದ್ರ, ದೇವಿ ಸುಭದ್ರಾ ಮತ್ತು ಭಗವಾನ್ ಜಗನ್ನಾಥನ ವಾರ್ಷಿಕ ರಥ ಯಾತ್ರೆ ಸಂದರ್ಭದಲ್ಲಿ 9 ದಿನಗಳ ಅವಧಿಯಲ್ಲಿ ಶ್ರೀ ಗುಂಡಿಚಾ ದೇವಸ್ಥಾನದಿಂದ 12ನೇ ಶತಮಾನದ ಮುಖ್ಯ ದೇಗುಲ ಶ್ರೀ ಮಂದಿರ ತನಕದ ಯಾತ್ರೆಗೆ ಬಳಸುವ ರಥಗಳಿವು.
ಭಗವಾನ್ ಜಗನ್ನಾಥನ ರಥವನ್ನು ನಂದಿಘೋಷ್ ಎಂದು ಕರೆಯಲಾಗುತ್ತಿದ್ದು, ಇದು ಅತ್ಯಂತ ಎತ್ತರದ ರಥ. ಇದರ ಎತ್ತರ 45 ಅಡಿ ಆಗಿದ್ದು, 16 ಚಕ್ರಗಳನ್ನು ಹೊಂಧಿದೆ. ಇನ್ನು, ಬಾಲಬದ್ರನ ರಥವನ್ನು ತಾಳಧ್ವಜ ಎಂದು ಕರೆಯಲಾಗುತ್ತಿದ್ದು, ಇದು 44 ಅಡಿ ಎತ್ತರ ಮತ್ತು 14 ಚಕ್ರಗಳನ್ನು ಹೊಂದಿದೆ. ಇದೇ ರೀತಿ ಅವರ ಸಹೋದರಿ ಸುಭದ್ರಾ ದೇವಿಯ ರಥವನ್ನು ದರ್ಪದಲನ ಎನ್ನುತ್ತಾರೆ. ಇದು 43 ಅಡಿ ಎತ್ತರ ಮತ್ತು 12 ಚಕ್ರಗಳನ್ನು ಹೊಂದಿದೆ.
ಇದನ್ನೂ ಓದಿ:ಚಹಾ ಪುಡಿ ಬೆಲೆ ಗಣನೀಯ ಏರಿಕೆ ಕಂಡರೆ ಅಚ್ಚರಿ ಇಲ್ಲ ಅಂತಿದ್ದಾರೆ ಪರಿಣತರು
ಎಸ್​ಜೆಟಿಎ ಆಡಳಿತಾಧಿಕಾರಿ ಕಿಷನ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೂರು ಮರದ ರಥಗಳನ್ನು ನಿರ್ಮಿಸಿದ ಶಿಲ್ಪಿಗಳ ಜತೆಗೆ ಮಾತುಕತೆ ನಡೆಸಿದ್ದೇವೆ. ಈ ಸಾಂಕ್ರಾಮಿಕ ರೋಗದ ಅವಧಿಯಲ್ಲೂ ಕಡಿಮೆ ಸಮಯದಲ್ಲಿ ಅವರು ಈ ರಥವನ್ನು ನಿರ್ಮಿಸಿಕೊಟ್ಟಿದ್ದಾರೆ. ಮರದ ರಥಗಳನ್ನು ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆ ಸಲಹೆ ನೀಡುವುದಕ್ಕೆ ನಮ್ಮಲ್ಲಿ ತಾಂತ್ರಿಕ ಸಮಿತಿ ಇದೆ. ಅದು ನೀಡುವ ಸಲಹೆ ಸೂಚನೆಯಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸಹಾಯವಾಣಿಗೆ ಕರೆ ಬಂದರೆ ಕೂಡಲೇ ಸ್ಪಂದಿಸಿ- ಅಧಿಕಾರಿಗಳಿಗೆ ಸಿಎಂ ತಾಕೀತು
ಸಾಮಾನ್ಯ ಸಂಪ್ರದಾಯದ ಪ್ರಕಾರವಾದರೆ ರಥಯಾತ್ರೆ ಉತ್ಸವ ಮುಗಿದ ಕೂಡಲೇ ರಥವನ್ನು ಬಿಚ್ಚಿ, ಅದಕ್ಕೆ ಬಳಸಿದ ಕಟ್ಟಿಗೆಗಳನ್ನು ದೇವಸ್ಥಾನದ ಅಡುಗೆ ಮನೆಯ ಒಲೆಗೆ ಬಳಸಲಾಗುತ್ತಿತ್ತು. ಆದರೆ ಇದೇ ಮೊದಲ ಸಲ ಸದರಿ ಸಂಪ್ರದಾಯವನ್ನು ಮೊಟಕುಗೊಳಿಸಲಾಗಿದೆ.(ಏಜೆನ್ಸೀಸ್)
VIDEO: ಮಾಸ್ಕ್ ಧರಿಸದೇ ರಸ್ತೆಗೆ ಇಳಿಯುವವರಾರು? 😉

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
