ನವದೆಹಲಿ:ಆ್ಯಸಿಡ್​ ದಾಳಿಗೊಳಗಾದವರಿಗೆ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಚಪಾಕ್​ ಚಿತ್ರ ತಂಡವು ಕೌಶಲಾಭಿವೃದ್ಧಿ ಸಚಿವಾಲಯಕ್ಕೆ ನೀಡಿದ್ದ ಮನವಿಯನ್ನು ಕೈ ಬಿಡಲಾಗಿದೆ.
ಸಚಿವಾಲಯದ ಪ್ರಕಾರ, ಭಾರತದ ಕೌಶಲ ಅಭಿವೃದ್ಧಿಗೆ ಮಾಧ್ಯಮ ಸಂಸ್ಥೆ ಮತ್ತು ಸಂಘಟನೆಗಳ ಸಲಹೆಗಳನ್ನು ಪಡೆಯಲಾಗುತ್ತದೆ. ಆದರೆ ಚಪಾಕ್​ ಚಿತ್ರ ತಂಡವು ಸಿನಿಮಾದಲ್ಲಿನ ವಿಷಯವನ್ನು ಪ್ರಚಾರ ಮಾಡಲು ಕೋರಿತ್ತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರತಂಡವು ಆ್ಯಸಿಡ್​ ದಾಳಿಗೆ ಒಳಗಾದವರು ಮತ್ತು ಕೆಲ ಅಂಗವಿಕಲರನ್ನು ಭೇಟಿ ಮಾಡಿ, ಅವರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಿತ್ತು. ಅವರೆಲ್ಲ ಕೌಶಾಲಾಭಿವೃದ್ಧಿ ಸಚಿವಾಲಯದ ಫಲಾನುಭವಿಗಳು. ಚಿತ್ರ ತಂಡದೊಂದಿಗೆ ಈ ಬಗ್ಗೆ ಯಾವ ಕಮಿಟ್​ಮೆಂಟ್​ ಇಲ್ಲ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ವಿವಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ 15 ನಿಮಷಗಳ ಕಾಲ ಕಳೆದಿದ್ದರು. ಇದಕ್ಕೆ ಪರ ಮತ್ತು ವಿರೋಧದ ಮಾತುಗಳು ಕೇಳಿಬಂದಿದ್ದವು.
ಚಪಾಕ್​ ಚಲನಚಿತ್ರವು ಆ್ಯಸಿಡ್​ ದಾಳಿಗೊಳಗಾಗಿರುವ ಲಕ್ಷ್ಮೀ ಅಗರ್​ವಾಲ್​ ಅವರ ಜೀವನಾಧರಿತ ಚಿತ್ರ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
