ಮಧ್ಯಪ್ರದೇಶ:ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾ ಸಮಾರಂಭಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾರು ಆಗಮಿಸಲಿದ್ದಾರೆ. ಇದರೊಂದಿಗೆ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಸಕಲ ವ್ಯವಸ್ಥೆಯನ್ನು ಮಾಡಿರುವ ಉತ್ತರಪದ್ರೇಶ ಸರ್ಕಾರ, ಭಕ್ತರಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮುಂಜಾಗ್ರತೆ ವಹಿಸಿದೆ.
ಇದನ್ನೂ ಓದಿ:ರಾಮಮಂದಿರದ ಪ್ರತಿಷ್ಠಾಪನೆ ಹಾನಿಗೊಳಗಾದ ರಾಷ್ಟ್ರದ ಉತ್ಸಾಹದ ಪುನರುತ್ಥಾನವಾಗಿದೆ: ಸದ್ಗುರು
ವಿಗ್ರಹ ಪ್ರತಿಷ್ಠಾಪನಾ ಸಮಾರಂಭ ನಡೆಯಲಿರುವ ಜನವರಿ 22 ವಿಶೇಷ ದಿನವೆಂದು ಪರಿಗಣಿಸಿರುವ ಅನೇಕರು ಈ ದಿನದಂದು ತಮ್ಮ ಇಷ್ಟಾರ್ಥ ಕೆಲಸಗಳನ್ನು ಪೂರೈಸಲು ಬಯಸಿದ್ದಾರೆ. ಹಲವರು ರಾಮಮಂದಿರ ಉದ್ಘಾಟನೆಯಂದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಯೋಜಿಸಿದರೆ, ಗರ್ಭಿಣಿಯರು ಇದೇ ದಿನದಂದು ತಮಗೆ ಮಗು ಜನಿಸಬೇಕು ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆ. ಇದೀಗ ಮಧ್ಯಪ್ರದೇಶ ಸರ್ಕಾರ ರಾಜ್ಯದ ನಗರ ಪ್ರದೇಶಗಳಲ್ಲಿ ಮಾಂಸ ಮತ್ತು ಮೀನು ಮಾರಾಟ ಮಾಡುವ ಮಳಿಗೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.
ಇದನ್ನೂ ಓದಿ:2417% ಲಾಭ ನೀಡಿದ ಸ್ಮಾಲ್​ ಕ್ಯಾಪ್​ ಕಂಪನಿ: 4 ಬೋನಸ್​ ಷೇರು ನೀಡುವುದಾಗಿ ಹೇಳುತ್ತಿದ್ದಂತೆಯೇ ಷೇರು ಬೆಲೆ ಗಗನಕ್ಕೆ
ಜನವರಿ 22ರಂದು ಮಾಂಸ ಮತ್ತು ಮೀನು ಮಾರಾಟ ಮಾಡುವ ಕಸಾಯಿಖಾನೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಮುಚ್ಚುವುದನ್ನು ಖಚಿತಪಡಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆಯು ನಾಗರಿಕ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ,(ಏಜೆನ್ಸೀಸ್).
ಒಂದೇ ಸಿನಿಮಾದಲ್ಲಿ ಪವನ್ ಕಲ್ಯಾಣ್, ಅಟ್ಲಿ ಮತ್ತು ತ್ರಿವಿಕ್ರಮ್! ಯಾವ ಚಿತ್ರಕ್ಕೆ ಈ ಮೂವರ ಸಂಗಮ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
