ರಾಂಚಿ:ಆನೆ ದಾಳಿಯ ಭೀತಿಯಿಂದ ಜೊತೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತದಿಂದ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಗರ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ ನಡೆದಿದೆ.
ಇದನ್ನೂ ಓದಿ:ಆಂಧ್ರಪ್ರದೇಶ: ಸೈನೈಡ್ ಮಿಶ್ರಿತ ಜ್ಯೂಸ್ ಕುಡಿಸಿ ಸುಲಿಗೆ ಮಾಡುತ್ತಿದ್ದ ಲೇಡಿ ಗ್ಯಾಂಡ್ ಅರೆಸ್ಟ್!
ಮೃತರನ್ನು ಪನ್ನಾಲಾಲ್ ಕೊರ್ವಾ (15), ಕಾಂಚನ್ ಕುಮಾರಿ (8), ಮತ್ತು ಬೇಬಿ ಕುಮಾರಿ (9) ಎಂದು ಗುರುತಿಸಲಾಗಿದೆ ಎಂದು ಚಿನಿಯಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ನೀರಜ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಚಿನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಚಪ್ಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಗುರುವಾರ ಸಂಜೆ (ಸೆ.5) ರಂದು ರಾತ್ರಿ ಆನೆ ದಾಳಿಗೆ ಹೆದರಿ ಒಂದೇ ಕುಟುಂಬದ ಸುಮಾರು 8 ರಿಂದ 10 ಮಕ್ಕಳು ತಮ್ಮ ಹೆಂಚಿನ ಮನೆಯ ನೆಲದ ಮೇಲೆ ಮಲಗಿದ್ದರು. ಈ ವೇಳೆ ಮನೆಯೊಳಗೆ ವಿಷಕಾರಿ ಕಾಳಿಂಗ ಸರ್ಪವೊಂದು ಬಂದು ಮೂವರು ಮಕ್ಕಳನ್ನು ಕಚ್ಚಿದೆ.
ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಮನೆಯವರು ಮಾಂತ್ರಿಕನ ಮನೆ ಬಳಿ ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. ಪರಿನಾಣ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೂ ಮೂರನೇ ಮಗುವನ್ನು ನಕಲಿ ವೈದ್ಯನ ಬಳಿ ಕರೆದುಕೊಂಡು ಹೋಗಿದ್ದಾರೆ. ಆದರೆ ದಾರಿಯ ಮಧ್ಯದಲ್ಲೇ ಆಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಆನೆಗಳ ದಾಳಿ ವಿಪರೀತವಾಗಿದ್ದು, ಇದರಿಂದಾಗಿ ನೆರೆಹೊರೆಯವರು ಸುರಕ್ಷಿತ ಸ್ಥಳಗಳಲ್ಲಿ ನಿದ್ರೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಗ್ರಾಮಸ್ಥರು ಶಾಲಾ ಕಟ್ಟಡಗಳ ಛಾವಣಿಯ ಮೇಲೆ ಅಥವಾ ಗ್ರಾಮದಲ್ಲಿ ಒಂದೇ ಸ್ಥಳದಲ್ಲಿ ಗುಂಪುಗಳಾಗಿ ಮಲಗುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ವಂಚಿಸಿದ್ದಕ್ಕೆ ದೇವರೇ ನಿನಗೆ ಶಿಕ್ಷೆ ನೀಡಿದ್ದಾನೆ: ವಿನೇಶ್ ವಿರುದ್ಧ ಬ್ರಿಜ್ ಭೂಷಣ್ ಸಿಂಗ್ ಕಿಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 + 11 =
Remember me
