ಲಖನೌ:ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇಥ್ರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ ದಾಸ (84) ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಂದು ಅಪರಾಹ್ನ ಆಸ್ಪತ್ರೆಗೆ ಭೇಟಿ ನೀಡಿ ಮಹಾಂತ ಅವರ ಆರೋಗ್ಯ ವಿಚಾರಿಸಿದ್ದಾರೆ. ಒಂದರ್ಧ ಗಂಟೆ ಅವರ ಜತೆಗೆ ಇದ್ದರು ಎಂದು ಮೇದಾಂತ ಹಾಸ್ಪಿಟಲ್​ನ ನಿರ್ದೇಶಕ ಡಾಕ್ಟರ್ ರಾಕೇಶ್ ಕಪೂರ್ ಮಂಗಳವಾರ ತಿಳಿಸಿದ್ದಾರೆ.
ವೈದ್ಯರ ತಂಡ ಮಹಾಂತ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದು, ಕೊಂಚ ಚೇತರಿಕೆ ಇದೆ. ಉಸಿರಾಟದ ಸಮಸ್ಯೆ ಕೊಂಚ ಕಡಿಮೆಯಾಗಿದೆ. ರಕ್ತ ಹೆಪ್ಪುಗಟ್ಟಿರುವ ವಿಚಾರದ ಬಗ್ಗೆ ಡಾಕ್ಟರ್​ಗಳು ಗಮನಹರಿಸಿದ್ದಾರೆ. ಅವರ ಮೂತ್ರಕೋಶಗಳ ಕಾರ್ಯದ ಮೇಲೂ ನಿಗಾವಹಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾಕ್ಟರ್ ಕಪೂರ್ ತಿಳಿಸಿದ್ದಾರೆ.
ಇದನ್ನೂ ಓದಿ:ಸಹಿಷ್ಣುತೆಯ ವಾತಾವರಣ ಜಗತ್ತಿನ ಅಗತ್ಯ, ಡಾ.ಎಂ.ಎಸ್.ಎಂ.ಅಬ್ದುರ‌್ರಶೀದ್ ಝೈನಿ ಅಭಿಪ್ರಾಯ
ಮಹಾಂತ ಅವರನ್ನು ತ್ರೋಂಬೋಎಂಬೋಲಿಸಂ ಚಿಕಿತ್ಸೆಗಾಗಿ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಅಪರಾಹ್ನ ಮೇದಾಂತಕ್ಕೆ ದಾಖಲಿಸಲಾಗಿದ್ದು, ಅದಕ್ಕೂ ಮೊದಲು ಮಹಾಂತ ಅವರಿಗೆ ಅಯೋಧ್ಯೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. (ಏಜೆನ್ಸೀಸ್)
ಇಮಾಮ್​ಗಂಜ್​ನಲ್ಲಿ ಜಿತನ್ ರಾಮ್​, ಹಸನ್​ಪುರನಲ್ಲಿ ತೇಜ್​ ಪ್ರತಾಪ್​ ಗೆಲುವಿನ ನಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 15 =
Remember me
